Vijaya Raghavendra wife Spandana : ಸ್ಪಂದನಾ ವಿಜಯ್ ಪಾರ್ಥಿವ ದರ್ಶನ ಪಡೆದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ರಿಯಲ್‌ ಜೋಡಿಗಳು ಅಭಿಮಾನಿಗಳ ಮನದಲ್ಲಿದ್ದಾರೆ, ಅದರಲ್ಲಿ ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನ (Vijaya Raghavendra wife Spandana) ಅವರು ಕೂಡ ಹೌದು. ದಂಪತಿಗಳು ಅಂದರೆ ಇವರಂತೆ ಇರಬೇಕು ಅನ್ನುವಷ್ಟು ಅನ್ಯೋನ್ಯತೆ ಇವರ ವೈವಾಹಿಕ ಜೀವನದಲ್ಲಿತ್ತು. ಕಳೆದ ರಾತ್ರಿಯಿಂದ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಿನಿಗಣ್ಯರು, ರಾಜಕೀಯ ಗಣ್ಯರು ಹಾಗೂ ಕುಟುಂಬಸ್ಥರು ಸೇರಿದಂತೆ ಹಲವರು ಆಗಮಿಸಿದ್ದಾರೆ. ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ಪಂದನಾ ಅವರ ಮೃತದೇಹವನ್ನು ನೋಡಲು ಬಂದಿದ್ದಾರೆ.

ಮಕ್ಕಳೊಂದಿಗೆ ಬಂದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸ್ಪಂದನಾ ಅವರ ಮೃತ ದೇಹವನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಂತರ ಸ್ಪಂದನಾ ಅವರ ಮೃತ ದೇಹದ ದರ್ಶನವನ್ನು ಪಡೆದಿದ್ದಾರೆ. ಇವರೊಂದಿಗೆ ಅಶ್ವಿನ್‌ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ರಿಯರು ಭಾವುಕರಾಗಿದ್ದಾರೆ. ನಟ ಪುನೀತ್‌ ಅವರ ಮಕ್ಕಳು ಭಾವುಕರಾಗಿದ್ದನ್ನು ಕಂಡು ನಟ ಮುರುಳಿ ಸಮಾಧಾನ ಮಾಡಿದ್ದಾರೆ. ಇವರೊಂದಿಗೆ ಬಂದ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಅವರ ಮಕ್ಕಳಾದ ಯುವರಾಜ್‌ಕುಮಾರ್‌ ಹಾಗೂ ವಿನಯ್‌ ರಾಜ್‌ಕುಮಾರ್‌ ಕೂಡ ಸ್ಪಂದನಾ ವರ ಮೃತ ದೇಹದ ದರ್ಶನವನ್ನು ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ. ಇದನ್ನೂ ಓದಿ : Spandana Vijay Raghavendra : ಜಾತಕದಲ್ಲೇ ಇತ್ತಾ ಮರಣಕಂಟಕ : ಸ್ಪಂದನಾ ಕುಟುಂಬಕ್ಕೆ ಮುನ್ಸೂಚನೆ ಕೊಟ್ಟಿದ್ರಾ ಜ್ಯೋತಿಷಿ

ಸದ್ಯ ಸ್ಪಂದನಾ ಅವರು ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳಸಿದ್ದು, ಪ್ರೇಮಖೈದಿಯನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ. ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನವನ್ನು ಇಂದು (ಆಗಸ್ಟ್‌ 9) ಮಧ್ಯಾಹ್ನ ಬೆಂಗಳೂರಿನ ಶ್ರೀರಾಮಪುರದ ಹರಿಶ್ಚಂದ್ರ ಘಾಟ್‌ನಲ್ಲಿ ನಡೆಯಲಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.‌

Vijaya Raghavendra wife Spandana : Ashwini Puneeth Rajkumar came with children to see the body of Spandana

Comments are closed.