ಮೌಂಗಾನುಯಿ : ಭಾರತ ನ್ಯೂಜಿಲೆಂಡ್ ಪ್ರವಾಸದುದ್ದಕ್ಕೂ ಅದ್ಬುತ ಪ್ರದರ್ಶನ ನೀಡಿದೆ. ಕಿವಿಸ್ ನೆಲದಲ್ಲಿ ಟೀಂ ಇಂಡಿಯಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡೋ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಆದ್ರೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಂಸನ್ ಮೆರೆದ ಕ್ರೀಡಾ ಪ್ರೇಮ ವಿಶ್ವದಾದ್ಯಂತ ಸುದ್ದಿಯಲ್ಲಿದೆ.ಮೌಂಟ್ ಮೌಂಗಾನುಯಿಯಲ್ಲಿನ ಓಪನ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ 5ನೇ ಪಂದ್ಯದಲ್ಲಿ ಗಾಯಗೊಂಡಿದ್ದ ಕಿವಿಸ್ ನಾಯಕ ಕೇನ್ ವಿಲಿಯಂಸನ್ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಅಂತಿಮ ಪಂದ್ಯದಲ್ಲಿ ವಿಶ್ರಾಂತಿ ಬಯಸಿದ್ದರು. ಪಂದ್ಯದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಗಾಯಗೊಂಡು ಪಂದ್ಯದಿಂದ ಹೊರ ನಡೆದರು. ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.
ಪಂದ್ಯದ ನಡುವಲ್ಲಿ ಕೇನ್ ವಿಲಿಯಂಸನ್ ಪೆವಿಲಿಯನ್ ಬಳಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇದನ್ನು ಕಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ವಾಟರ್ ಬಾಟಲ್ ಹಿಡಿದು ವಿಲಿಯಂಸನ್ ಬಳಿಗೆ ಬಂದು ಕುಳಿತು ಪಂದ್ಯ ವೀಕ್ಷಿಸುತ್ತಾ ಇಬ್ಬರೂ ವಾಟರ್ ಬಾಯ್ ಗಳಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ರು. ಇವರಿಬ್ಬರನ್ನೂ ಕಂಡ ವಿಕೆಟ್ ಕೀಪರ್ ವೃಷಭ್ ಪಂಥ್ ಕೂಡ ಕೆಲ ಕಾಲ ಇಬ್ಬರು ನಾಯಕರ ಜೊತೆ ಕುಳಿತು ಸಂಭಾಷಣೆಯನ್ನು ಕೇಳುತ್ತಿದ್ದರು. ವಿಶ್ವ ಕ್ರಿಕೆಟ್ ನ ಮಹಾದಿಗ್ಗಜರು ಪಂದ್ಯದಲ್ಲಿ ತೋರಿದ ಕ್ರೀಡಾ ಸ್ಪೂರ್ತಿ ಇದೀಗ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ. ಇಬ್ಬರ ಕ್ರೀಡಾ ಸ್ಪೂರ್ತಿಯನ್ನು ಕೊಂಡಾಡಿರೋ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಇಬ್ಬರ ಕ್ರೀಡಾ ಸ್ಪೂರ್ತಿಯ ಪೋಟೋವನ್ನು ಪೋಸ್ಟ್ ಮಾಡಿದೆ.
ವಾಟರ್ ಬಾಯ್ಸ್ ಆಗಿದ್ಯಾಕೆ ಕೊಯ್ಲಿ, ವಿಲಿಯಂಸನ್ ?
- Advertisement -