ಬಿಗ್ ಬಾಸ್ ಗೆದ್ದ ಕುಂದಾಪುರದ ಶೈನ್ ಶೆಟ್ಟಿ ಜೇಬು ಸೇರಿದ್ದು 61 ಲಕ್ಷ !

0

ಬೆಂಗಳೂರು : ಕನ್ನಡ ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್ – 7 ಪಟ್ಟವನ್ನು ಕುಂದಾಪುರ ಮೂಲದ ನಟ ಶೈನ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 113 ದಿನಗಳನ್ನು ಕಳೆದಿರುವ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿದ್ರೆ, ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಪಟ್ಟ ಒಲಿಯುತ್ತಿದ್ದಂತೆಯೇ ಬರೋಬ್ಬರಿ 61 ಲಕ್ಷ ರೂಪಾಯಿ ಹಾಗೂ ಒಂದು ಕಾರನ್ನು ಶೈನ್ ಶೆಟ್ಟಿ ತನ್ನದಾಗಿಸಿಕೊಂಡಿದ್ದಾರೆ.
ಬಿಗ್ ಬಾಸ್ ವಿನ್ನರ್ ಆಗುವ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಭಾನುವಾರ ನಡೆದ ಸ್ಪರ್ಧೆಯ ಫೈನಲ್ ನಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಶೈನ್ ಶೆಟ್ಟಿ ಕೈ ಎತ್ತಿ ವಿನ್ನರ್ ಅಂತಾ ಘೋಷಣೆ ಮಾಡುತ್ತಿದ್ದಂತೆಯೇ 50 ಲಕ್ಷ ರೂಪಾಯಿಯ ಜೊತೆಗೆ 7 ಅಪ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಇಂಡನ್ ಟಿಎಂಟಿ ಕಂಪೆನಿಯ ಕಡೆಯಿಂದ 1 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ. ಹೀಗಾಗಿ ಶೈನ್ ಶೆಟ್ಟಿ 61 ಲಕ್ಷ ರೂಪಾಯಿಯ ಜೊತೆಗೆ ಟಾಟಾ ಆಲ್ಟ್ರೋಜ್ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧೆಯುದ್ದಕ್ಕೂ ಬಿಗ್ ಫೈಟ್ ನೀಡುತ್ತಿದ್ದ ಕಾಮಿಡಿಯನ್ ಕುರಿ ಪ್ರತಾಪ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂತಿಮ ವಾರದಲ್ಲಿ ಶೈನ್ ಶೆಟ್ಟಿ, ಕುರಿ ಪ್ರತಾಪ್, ವಾಸುಕಿ, ದೀಪಿಕಾ ಹಾಗೂ ಭೂಮಿ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದರು. ಆದರೆ ಅಂತಿಮ ಹಂತದಲ್ಲಿ ದೀಪಿಕಾ ಹಾಗೂ ಭೂಮಿ ಎಲಿಮಿನೇಟ್ ಆಗಿದ್ದರು. ಆದರೆ ಫೈನಲ್ ನಲ್ಲಿ ವಾಸುಕಿ ವೈಭವ್ ಅಂತಿಮ ಹಂತದಲ್ಲಿ ಎಲಿಮನೇಟ್ ಆಗುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Leave A Reply

Your email address will not be published.