ಭಾನುವಾರ, ಜೂನ್ 15, 2025
HomeCinemaಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ ಭಜರಂಗಿ-2 ಟೀಸರ್

ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ ಭಜರಂಗಿ-2 ಟೀಸರ್

- Advertisement -

ಶಿವಣ್ಣ ಅವರ ಟಗರು ಮತ್ತು ಮಫ್ತಿ ನಂತರ ಮತ್ತೊಂದು ಸಿನಿಮಾ ಹೊಸ ಈಮೇಜ್ ಸೃಷ್ಟಿಸಿದೆ. ಈಗಾಗಲೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಿರುವ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ರೆಡಿಯಾಗಿ ನಿಂತಿದೆ.

ಹೌದು, ಭಜರಂಗಿ, ವಜ್ರಕಾಯದಂತ ಸೂಪರ್ ಹಿಟ್ ಸಿನಿಮಾ ಕೊಟ್ಟ ಎ.ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ಈಗ ಭಜರಂಗಿ-2 ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

ಈಗಾಗಲೇ ಪೋಸ್ಟರ್ ಗಳ ಮೂಲಕ ದೊಡ್ಡಮಟ್ಟದ ಸಿನಿಮವಾಗಿ ಗುರುತಿಸಿಕೊಂಡಿದ್ದು, ಇದೇ ಜುಲೈ 12ಕ್ಕೆ ಶಿವಣ್ಣ ಬರ್ತ್ ಡೇ ಪ್ರಯುಕ್ತ 1.14 ನಿಮಿಷ ಟೀಸರ್ ಬಿಡುಗಡೆಯಾಗಲಿದೆ. ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಅಭಿಮಾನಿಗಳು ಊಹೆಗೆ ಮೀರಿದ ಲುಕ್ ಒಂದು ರಿವೀಲ್ ಆಗಲಿದ್ದು, ಸಿನಿಮಾ ಅಂದು ಕೊಂಡಿರುವುದಕ್ಕಿಂತ ಒಂದು ತೂಕ ಜಾಸ್ತಿ ಬಂದಿದೆ ಎಂಬುದು ತಂಡದ ಮಾತು. ಭಜರಂಗಿ -2 ಸಿನಿಮಾದ ತಾರಾಬಳಗ ಬಹಳ ವಿಶೇಷವಾಗಿದೆ.

ಹಲವಾರು ಸರ್ಫ್ರೈಸ್ ಗಳನ್ನು ಕೊಡಲು ಚಿತ್ರತಂಡ ಸಿದ್ಧವಾಗಿದ್ದು, ವಿಡಿಯೋ ಮೂಲಕ ಶಿವಣ್ಣ ಅವರ ಹೊಸ ಪ್ರಚಂಡ ಲುಕ್ ಮತ್ತು ಇನ್ನಿತರ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.

ಕೆಜಿಎಫ್ ಸಿನಿಮಾವನ್ನು ಮೀರಿಸುವ ಮೇಕಿಂಗ್ ಹೊಂದಿದೆ ಎಂಬುದು ಆಪ್ತ ವಲಯದ ಮಾತು. ಭಜರಂಗಿ 2 ಸಿನಿಮಾ ಕನ್ನಡ ಚಿತ್ರರಂಗದಲ್ಲೊಂದು ದಾಖಲೆ ಬರೆಯಲಿ ಹಾಗೂ ನಿರ್ಮಾಪಕರಾದ ಜಯಣ್ಣ ಮತ್ತು ಭೋಗಣ್ಣ ಅವರ ಬೊಕ್ಕಸ ಸಹ ಜೋರಾಗಲಿ ಎಂಬುದೇ ನಮ್ ಆಶಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular