ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅಂದ್ರೆನೇ ಅದೊಂದು ಗ್ಲಾಮರ್ ವ್ಯಕ್ತಿತ್ವ. ಅವರ ಸಿನಿಮಾಗಳಲ್ಲಿ ಕಥೆಯಷ್ಟೇ ಅವಕಾಶ ನಟಿಮಣಿಯರ ಸೌಂದರ್ಯಕ್ಕೂ ಇರುತ್ತೆ. ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ಹಿರೋಯಿನ್ ಪಾತ್ರಕ್ಕೆ ಆಯ್ಕೆಯಾಗಬೇಕು ಅಂದ್ರೂ ಅಷ್ಟೇ ಗ್ಲಾಮರ್ ಗೊಂಬೆಯೇ ಆಗಿರಬೇಕು. ಇಂಥ ರಾಮ್ ಗೋಪಾಲ್ ವರ್ಮಾ ಸಿನಿಮಾದಿಂದಲೇ ಬೆಳಕಿಗೆ ಬಂದ ನಟಿಮಣಿ ಅಂದ್ರೇ ಹೇಗಿರಬೇಕು? ಅಂತಹೊಂದು ಹಾಟ್ ಬೊಂಬೆ ಅಪ್ಸರಾ ರಾಣಿಯ (Apsara Rani) ಅಂದದ ಪೋಟೋಶೂಟ್ ಗಳ ಎಕ್ಸ್‌ಕ್ಲೂಸಿವ್ ಅಲ್ಬಂ ನಿಮಗಾಗಿ ತಂದಿದ್ದೇವೆ.

ಹೀಗೆ ಮೈಸಿರಿಯನ್ನೇ ಉಡುಗೆಯಂತೆ ತೊಟ್ಟು ನಿಂತಿರೋ ಈ ಬೆಡಗಿಯ ಹೆಸರು ಅಪ್ಸರಾ ರಾಣಿ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಆಪ್ಸರಾ ರಾಣಿ ದಿನಕ್ಕೊಂದು ಪೋಟೋಶೂಟ್, ವಿಡಿಯೋ ಜೊತೆಗೆ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಾರೆ. ಅದರಲ್ಲೂ ಪಡ್ಡೆ ಹೈಕಳ ಪಾಲಿಗೆ ಮಾರ್ನಿಂಗ್ ಕಾಫಿಯಷ್ಟೇ ಅನಿವಾರ್ಯವಾಗಿರೋ ಈ ಜವ್ವನೆ ದಿನದಿಂದ ದಿನಕ್ಕೆ ಬಟ್ಟೆ ಮೇಲೆ ವೈರಾಗ್ಯ ಬಂದವರಂತೆ ಪೋಟೋಶೂಟ್ ಗೆ ಪೋಸ್ ಕೊಟ್ಟು ಹುಡುಗರೆಲ್ಲ ರಾತ್ರಿ ನಿದ್ದೆ ಬಿಡುವಂತೆ ಮಾಡಿದ್ದಾರೆ.

ಇದನ್ನೂ ಓದಿ : ಸ್ವಿಮ್ಮಿಂಗ್ ಪೂಲ್‌ನಲ್ಲಿ ರಾಗಿಣಿ ದ್ವಿವೇದಿ : ತುಪ್ಪದ ಬೆಡಗಿಯ ಅವತಾರಕ್ಕೆ ಫ್ಯಾನ್ಸ್ ಫಿದಾ
ಕೇವಲ ಜಾಕೆಟ್, ಶರ್ಟ್ ಕೆಳಗೊಂದು ಪೀಸ್ ಬಟ್ಟೆ, ಟೂ ಪೀಸ್. ಬಿಕನಿ ಹೀಗೆ ನೊರೆಂಟು ಅವತಾರದಲ್ಲಿ ತಮ್ಮ ಹಾಲಿನಂತ ಬಿಳುಪು ಮೈಸಿರಿ ಬಿಚ್ಚಿಡೋ ಅಪ್ಸರಾ ಬಾನು ಮೊದಲ ರಾಮ್ ಗೋಪಾಲ್ ವರ್ಮಾ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಡೇಂಜರಸ್ ಎಂಬ ಲೆಸ್ಬಿಯನ್ ಕಥಾನಕ ಹೊಂದಿದ ಸಿನಿಮಾದ ಮೂಲಕ ಬಾಲಿವುಡ್ ಗೆ ಡೆಬ್ಯೂ ಮಾಡಿದ ಅಪ್ಸರಾ ಬಾನು. ಸಿನಿಮಾದಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚೇ ಬೋಲ್ಡಾಗಿ ಕಾಣಿಸಿಕೊಂಡು ಅಭಿಮಾನಿಗಳ ಮೈ ಬಿಸಿ ಏರಿಸಿದರು.
ಇದನ್ನೂ ಓದಿ : ಕಾವಾಲಯ್ಯ ಬೆಡಗಿಯ ಕಾವೇರಿಸುವ ಫೋಟೋ: ಇಲ್ಲಿದೆ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಎಕ್ಸಕ್ಲೂಸಿವ್ ಪೋಟೋಶೂಟ್
ಮೂಲತಃ ಒಡಿಸ್ಸಾದ ಈ ಅಪ್ಸರಾ ರಾಣಿ ಮೂಲ ಹೆಸರು ಅಂಕಿತಾ ಮಹಾರಾಣಾ. ರಾಮ್ ಗೋಪಾಲ್ ವರ್ಮಾ ಈ ಸೆಕ್ಸಿ ಬಾಂಬ್ ನ್ನು ತಮ್ಮ ಸಿನಿಮಾದಲ್ಲಿ ಅಪ್ಸರಾ ರಾಣಿ ಎಂದು ಬಣ್ಣದ ಲೋಕಕ್ಕೆ ಪರಿಚಯಿಸಿದರು. ಕೇವಲ ಸಿನಿಮಾ ಮಾತ್ರವಲ್ಲ ವೈಯಕ್ತಿಕವಾಗಿಯೂ ರಾಮ್ ಗೋಪಾಲ್ ವರ್ಮಾ ಹೆಸರು ಅಪ್ಸರಾ ರಾಣಿಯೊಂದಿಗೆ ಕೇಳಿಬಂದಿದ್ದು, ರಾಮ್ ಗೋಪಾಲ್ ತೆಕ್ಕೆಗೆ ಬಿದ್ದ ಹೊಸ ಹಕ್ಕಿ ಅಪ್ಸರಾ ಎಂಬ ಸಂಗತಿ ಕೆಲಕಾಲ ಬಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿತ್ತು.

ಇದನ್ನೂ ಓದಿ : ನಟಿ ರಮ್ಯಾಗೆ ಹೃದಯಾಘಾತ ಸುದ್ದಿ: ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಗೆಳತಿ
ಸದಾ ಕಾಲ ಇನ್ ಸ್ಟಾಗ್ರಾಂನಲ್ಲಿ ಪೋಟೋಶೂಟ್ ಹಾಗೂ ವಿಡಿಯೋಗಳನ್ನು ಶೇರ್ ಮಾಡೋ ಅಪ್ಸರಾ ರಾಣಿ, ತೆಲುಗು ಸಿನಿಮಾ, ಐಟಂ ಸಾಂಗ್ , ಮಾಡೆಲಿಂಗ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು, ಪಡ್ಡೆಹೈಕಳ ಎದೆಯಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ