ಕಾವಾಲಯ್ಯ ಬೆಡಗಿಯ ಕಾವೇರಿಸುವ ಫೋಟೋ: ಇಲ್ಲಿದೆ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಎಕ್ಸಕ್ಲೂಸಿವ್ ಪೋಟೋಶೂಟ್

ಕಾವಾಲಯ್ಯ ಹಾಡಿಗೆ ಹುಚ್ಚೆದ್ದು ಕುಣಿದಿದ್ದ ಮಿಲ್ಕಿ ಬ್ಯೂಟ್‌ ನಟಿ ತಮನ್ನಾ ಬಾಟಿಯಾ ( Tamannaah Bhatia) ಮತ್ತೇರಿಸುವ ಪೋಟೋಗಳು ಇದೀಗ ಪಡ್ಡೆಹೈಕಳ ನಿದ್ದೆಕದ್ದಿದೆ. ಸದ್ಯ ತಮನ್ನಾ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Tamannaah Bhatia : ಹಾಲಿನಂತ ಬಿಳುಪು ಎಂಬ ಮಾತು ಹುಟ್ಟಿದ್ದೇ ಈಕೆಯ ಮೈಬಣ್ಣ ನೋಡಿದ ಮೇಲೆ ಅನ್ನಿಸುತ್ತೇ. ಅಂತಹ ಬ್ಯೂಟಿ, ಅಷ್ಟೇ ಅಲ್ಲ ತುಂಟ ಹಾಡಿಗೆ ಜೀವತುಂಬಬಲ್ಲ ನಟಿ. ಸ್ಕ್ತಿನ್ ಮೇಲೆ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಹವಾ ಎಬ್ಬಿಸಿರುವ ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಬಾಟಿಯಾ (Tamannaah Bhatia)  ಮತ್ತೇರಿಸುವ ಪೋಟೋಗಳ ಮೂಲಕವೂ ಪಡ್ಡೆಗಳ ಹೃದಯ ಗೆದ್ದಿದ್ದಾರೆ. ನೀವೆಂದೂ ನೋಡಿರದ ಮಾದಕ ತಮನ್ನಾ ಗ್ಯಾಲರಿ (Tamannaah Bhatia Photos) ಇಲ್ಲಿದೆ ನೋಡಿ.

Nuvvu Kavalayya Milky Beauty telugu Actress Tamannaah Bhatia Photoshoot Goes Viral 6
Image Credit : Tamanna Instagram

ಹಾಗೇ ನೋಡಿದ್ರೇ ಆಕೆ ನಟಿಯಾಗಿದ್ದೇ ಒಂದು ಅಚ್ಚರಿ. ಯಾಕೆಂದರೇ ಆಕೆ ಹುಟ್ಟಿದ್ದು ವಜ್ರದ ವ್ಯಾಪಾರಿಯ ಮನೆಯಲ್ಲಿ. ಮನೆಯಲ್ಲಿ ಹಾಸು ಹೊದೆಯುವಷ್ಟಿದ್ದ ಶ್ರೀಮಂತಿಕೆಯ ನಡುವೆಯೂ ಆಕೆ ತುಡಿದಿದ್ದು ತನ್ನ ಐಡೆಂಟಿಟಿಗಾಗಿ. ಹೀಗಾಗಿಯೇ ತಮನ್ನಾ ತಮ್ಮ ಹದಿಮೂರನೇ ವಯಸ್ಸಿಗೆ ಬಣ್ಣ ಹಚ್ಚಿದ್ದರು.

Nuvvu Kavalayya Milky Beauty telugu Actress Tamannaah Bhatia Photoshoot Goes Viral 8
Image Credit : Tamanna Instagram

ಆದರೆ ತಮನ್ನಾ ಗೆ ಆ ಸಿನಿಮಾ ಅಂತಹ ಯಶಸ್ಸು ತಂದುಕೊಡಲಿಲ್ಲ. ಆದರೆ ಆಕೆಯ ಸತತ ಪ್ರಯತ್ನ ಕೈಬಿಡಲಿಲ್ಲ. ಪರಿಣಾಮವಾಗಿ ಈಗ ಬಹುಭಾಷಾ ನಟಿಯಾಗಿ ತಮನ್ನಾ ತಮ್ಮದೇ ಆದ ಅಭಿಮಾನಿವರ್ಗ ಹೊಂದಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಫ್ಯಾನ್ ಫಾಲೋವರ್ಸ್ ಹೊಂದಿರೋ ತಮನ್ನಾ, ಆಗಾಗ ಪಡ್ಡೆ ಹೈಕಳು ನಿದ್ದೆಗೆಡುವಂತ ಪೋಟೋ ಶೂಟ್ ಮಾಡಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ : ಕೇರಳ ಸ್ಟೋರಿಯ ಬಳಿಕ ಅದಾ ಶರ್ಮ ಫುಲ್ ಮಿಂಚಿಂಗ್ : ಸಿನಿ ಮ್ಯಾಗಜಿನ್ ಸಖತ್ ಪೋಸ್ ಕೊಟ್ಟ ಅದಾ

Nuvvu Kavalayya Milky Beauty telugu Actress Tamannaah Bhatia Photoshoot Goes Viral 8
Image Credit : Tamanna Instagram

ಅಚ್ಚ ಬಿಳುಪಿನ ಮೈಬಣ್ಣದ ತಮನ್ನಾ ಯಾವ ಬಣ್ಣದ ಡ್ರೆಸ್ ಹಾಕಿದ್ರೂ ಕಣ್ಣು ಕೊರೈಸುವಂತಹ ಸೌಂದರ್ಯದ ಗಣಿ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ತಮನ್ನಾ ರೆಡ್, ಬ್ಲ್ಯಾಕ್ ಡ್ರೆಸ್ ಗಳಲ್ಲಿ ಸಖತ್ ಪೋಸ್ ನೀಡಿದ್ದಾರೆ. ಸೀರೆ, ಗೌನ್, ಬಿಕನಿ, ಫಾರ್ಮಲ್ಸ್‌ ಹೀಗೆ ಯಾವ ಡ್ರೆಸ್ ಧರಿಸಿದ್ರೂ ತಮನ್ನಾ ಸೂಪರ್ ಹಾಟ್ ಅನ್ನೋದ್ರಲ್ಲಿ ಡೌಟೇ ಇಲ್ಲ.

Nuvvu Kavalayya Milky Beauty telugu Actress Tamannaah Bhatia Photoshoot Goes Viral
Image Credit : Tamanna Instagram

ಅದರಲ್ಲೂ ಎಲ್ಲ ಸೆಲೆಬ್ರೆಟಿಗಳಂತೆ ಬೀಚ್ ನ್ನು ಇಷ್ಟ ಪಡೋ ತಮನ್ನಾ, ತಮ್ಮ ವೆಕೆಶನ್ ಗಳನ್ನು ಸಮುದ್ರ ತೀರದಲ್ಲೇ ಕಳೆಯುತ್ತಾರೆ. ಅಲ್ಲಂತೂ ತಮನ್ನಾ ಅಭಿಮಾನಿಗಳಿಗೆ ಹಬ್ಬ. ಮಿಲ್ಕಿ ಬ್ಯೂಟಿ ಚಳಿಯಲ್ಲೂ ಬೆವರಿಸುವಂತ ಮಾದಕ ಉಡುಗೆ ತೊಟ್ಟು ಸಮುದ್ರಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲ ಆ ಪೋಟೋ ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಇನ್ ಸ್ಟಾ ಗ್ರಾಂನಲ್ಲಿ ಶೇರ್ ಮಾಡುತ್ತಾರೆ.

ಇದನ್ನೂ ಓದಿ : ಸ್ವಿಮ್ಮಿಂಗ್‌ ಪೂಲ್‌ನಲ್ಲಿ ರಾಗಿಣಿ ದ್ವಿವೇದಿ : ತುಪ್ಪದ ಬೆಡಗಿಯ ಅವತಾರಕ್ಕೆ ಫ್ಯಾನ್ಸ್‌ ಫಿದಾ

Nuvvu Kavalayya Milky Beauty telugu Actress Tamannaah Bhatia Photoshoot Goes Viral
Image Credit : Tamanna Instagram

ಸದ್ಯ ಜೈಲರ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ತಮನ್ನಾ ಮೊನ್ನೆ ಮೊನ್ನೆಯಷ್ಟೇ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದಿದ್ದಾರೆ. ಸದ್ಯ 34 ವರ್ಷದ ತಮನ್ನಾ ವಿಜಯ್ ವರ್ಮಾ ಜೊತೆ ಡೇಟ್ ಮಾಡ್ತಿದ್ದು, ಅವರೊಂದಿಗೆ ಮಾಲ್ಡೀವ್ಸ್ ಟ್ರಿಪ್ ಗೆ ತೆರಳಿದ್ದರು ಎನ್ನಲಾಗ್ತಿದೆ. ಆದರೆ ಟ್ರಿಪ್ ಪೋಟೋದಲ್ಲೆಲ್ಲೂ ವಿಜಯ್ ಕಾಣಿಸಿಲ್ಲ. 2005 ರಲ್ಲಿ ಚಾಂದ್ ಸಾ ರೋಶನ್ ಚೆಹರಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದ‌ ತಮನ್ನಾ ಭಾಟಿಯಾ, ತೆಲುಗಿನ ಶ್ರೀ ಹಾಗೂ ತಮಿಳಿನ ಕೇಡಿ ಸಿನಿಮಾಗೆ ಒಳ್ಳೆಯ ಗೆಲುವನ್ನು ತಂದುಕೊಟ್ಟಿತು

Nuvvu Kavalayya Milky Beauty telugu Actress Tamannaah Bhatia Photoshoot Goes Viral
Image Credit : Tamanna Instagram

ಅದಾದ ಬಳಿಕ ಹ್ಯಾಪಿ ಡೇಸ್, ಕಲ್ಲೂರಿ ಸಿನಿಮಾಗಳು ತಮನ್ನಾ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಸುಳ್ಳಲ್ಲ.ಕೊಂಚಂ ಇಷ್ಟಂ ಕೊಂಚಂ ಕಷ್ಟಂ , ಪೈಯ್ಯದಂತಹ ಸಿನಿಮಾಗಳ ಮೂಲಕ ತಮನ್ನಾ ತೆಲುಗು ಹಾಗೂ ತಮಿಳು ಚಿತ್ರರಂಗದ ಸಿನಿರಸಿಕರ ಎದೆಯಲ್ಲಿ ಸ್ಥಾನ ಪಡೆದರು.

ಇದನ್ನೂ ಓದಿ : ಕೊನೆಗೂ ಒಂದಾಗಲಿಲ್ಲ ಸುದೀಪ್-ದರ್ಶನ್ ! ಕಾರಣ ಏನು ಗೊತ್ತಾ?!

Nuvvu Kavalayya Milky Beauty telugu Actress Tamannaah Bhatia Photoshoot Goes Viral
Image Credit : Tamanna Instagram

ಬಾಲಿವುಡ್ ನ ಹಿಮ್ಮತವಾಲಾ, ಎಂಟರ್ಟೈಮೆಂಟ್ ಸಿನಿಮಾಗಳು ತಮನ್ನಾ ಗೆ ಬೇಡಿಕೆ ಹೆಚ್ಚಿಸಿದರೇ, ಬಾಹುಬಾಲಿ ತಮನ್ನಾ ಖ್ಯಾತಿ ಹಾಗೂ ಸೌಂದರ್ಯವನ್ನು ಇಡಿ ಭಾರತ ಚಿತ್ರರಂಗಕ್ಕೆ ಪರಿಚಯಿಸಿತು.

Nuvvu Kavalayya Milky Beauty telugu Actress Tamannaah Bhatia Photoshoot Goes Viral
Imag Credit : tamanna Instagram

ಕನ್ನಡವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ ಕೆಜಿಎಫ್ ಸಿನಿಮಾದಲ್ಲೂ ತಮನ್ನಾ ನೃತ್ಯವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ನಟನೆ ಜೊತೆಗೆ ಪೋಟೋಶೂಟ್‌ ಮೂಲಕವೂ ಅಭಿಮಾನಿಗಳ ಮನೆಗೆದ್ದಿದ್ದಾರೆ.

Nuvvu Kavalayya Milky Beauty telugu Actress Tamannaah Bhatia Photoshoot Goes Viral
Image Credit : Tamanna Bhatia

Nuvvu Kavalayya Milky Beauty telugu Actress Tamannaah Bhatia Photoshoot Goes Viral

Comments are closed.