ನಟರಿಗೂ ರಸ್ತೆ ಅಪಘಾತಗಳಿಗೂ ಇನ್ನಿಲ್ಲದ ನಂಟಿದೆ. ಕೆಲ ದಿನಗಳ ಹಿಂದಷ್ಟೇ ಕಾಮಿಡಿ ನಟ ಚಂದ್ರಪ್ರಭಾ ಅಪಘಾತ ಎಸಗಿದ ಬೆನ್ನಲ್ಲೇ ಈಗ ಕೌಸಲ್ಯ ಸುಪ್ರಜಾ ರಾಮ (Kousalya Supraja Rama) ಸಿನಿಮಾದ ನಟ ನಾಗಭೂಷಣ್ (Nagabhushana) ಕಾರು ಅಪಘಾತ ಎಸಗಿ ಸುದ್ದಿಯಾಗಿದ್ದಾರೆ. ಅಪಘಾತಕ್ಕೆ ಒಳಗಾಗದ ಮಹಿಳೆ ಸಾವನ್ನಪ್ಪಿದ್ದು, ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಟನ ಕಾರು ಗುದ್ದಿದ ಪರಿಣಾಮ ರಸ್ತೆ ಬದಿಯಲ್ಲಿ ವಾಕಿಂಗ್ ಹೊರಟಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು ನಟನೇ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಂಪತಿಗಳ ಪೈಕಿ ಪತ್ನಿ ಸಾವನ್ನಪ್ಪಿದ್ದು, ಪತಿಗೆ ಚಿಕಿತ್ಸೆ ಮುಂದುವರೆದಿದೆ. ಸುಪ್ರಜಾ ರಾಮ ಸಿನಿಮಾದಲ್ಲಿ ನಾಯಕ ನಟನ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದನಟ ನಾಗಭೂಷಣ್ ಕಾರು ಆಪಘಾತವಾಗಿದೆ.

ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಬರುವ ವೇಳೆ ನಾಗಭೂಷಣ್ ಕಾರು ಅಪಘಾತಕ್ಕಿಡಾಗಿದೆ. ಉತ್ತರಹಳ್ಳಿಯ ಕೆಎಸ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ವಸಂತಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಸಂತಪುರ ನಿವಾಸಿಗಳಾದ ಪ್ರೇಮ (48 ವರ್ಷ), ಹಾಗೂ ಕೃಷ್ಣ (58 ವರ್ಷ ) ದಂಪತಿ ರಾತ್ರಿ 9.30 ರ ಸುಮಾರಿಗೆ ವಾಕ್ ಮಾಡುತ್ತಾ ಕೋಣನಕುಂಟೆ ಕಡೆಗೆ ಹೊರಟಿದ್ದರು.
ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ
ಈ ವೇಳೆ ಹಿಂಬದಿಯಿಂದ ಬಂದ ನಾಗಭೂಷಣ್ ಕಾರು ಈ ದಂಪತಿಗೆ ಡಿಕ್ಕಿ ಹೊಡೆದಿದೆ. ದಂಪತಿಗೆ ಡಿಕ್ಕಿ ಹೊಡೆದ ಬಳಿಕ ಪುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಮುಗುಚಿ ಬಿದ್ದಿದೆ. ಘಟನೆಯಲ್ಲಿ ದಂಪತಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ನಟನೇ ಸ್ಥಳೀಯರ ಸಹಾಯದಿಂದ ಈ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ.
ಆದರೆ ಚಿಕಿತ್ಸೆ ಫಲಿಸದೇ ಪ್ರೇಮ ಸಾವನ್ನಪ್ಪಿದ್ದಾರೆ. ತಲೆ ಹಾಗೂ ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡಿರೋ ಕೃಷ್ಣ ಅವರನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಪಘಾತ ಎಸಗಿದ ನಟ ನಾಗಭೂಷಣ್ ಪೊಲೀಸರ ವಶದಲ್ಲಿದ್ದಾನೆ.
ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ನಡೆಯುವ ವೇಳೆ ನಾಗಭೂಷಣ್ ಮದ್ಯ ಸೇವನೆ ಮಾಡಿದ್ರಾ? ಅಥವಾ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಕಾರು ಚಲಾವಣೆಯಿಂದ ಈ ಘಟನೆ ನಡೆದಿದ್ಯಾ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್
ನಾಗಭೂಷಣ್ ಸುಪ್ರಜಾ ರಾಮ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣನ ಸ್ನೇಹಿತನ ಪಾತ್ರದಲ್ಲಿ ಮಿಂಚಿದ್ದರು. 2018 ರಲ್ಲಿ ಒಂದಲ್ಲಾ ಎರಡಲ್ಲಾ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿಕೊಟ್ಟ ನಾಗಭೂಷಣ್ ಕಾಮಿಡಿ ಹಾಗೂ ಇತರ ಪಾತ್ರಗಳಿಗೂ ಜೀವತುಂಬ ಬಲ್ಲ ನಟ. ಮೈಸೂರು ಮೂಲದ ನಾಗಭೂಷಣ್ ಹಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ನಟರ ಅಪಘಾತಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಇತ್ತೀಚಿಗಷ್ಟೇ ಕಾಮಿಡಿ ನಟ ಚಂದ್ರಪ್ರಭಾ ಚಿಕ್ಕಮಗಳೂರು ಬಳಿ ರಸ್ತೆ ಅಪಘಾತ ನಡೆಸಿ ಕೂಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆಸ್ಪತ್ರೆ ಸೇರುವಂತೆ ಮಾಡಿದ್ದ. ಈಗ ನಾಗಭೂಷಣ್ ಕಾರು ಅಪಘಾತಕ್ಕೆ ಮಹಿಳೆಯು ಸಾವನ್ನಪ್ಪಿದ್ದು, ಕುಟುಂಬದ ನೋವಿಗೆ ಕಾರಣವಾಗಿದೆ.
Kousalya Supraja Rama Movie actor Nagabhushan Car Accident Woman Dies Bangalore