ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್

ಕೆಜಿಎಫ್ 2 (KGF 2) ಬಳಿಕ ಪ್ರಶಾಂತ್ ನೀಲ್ (Prashanth Neel ) ನಿರ್ದೇಶನ ಅಂತಹದೊಂದು ಹೊಸ ಹುಚ್ಚುಅಭಿಮಾನ ಹುಟ್ಟಿಸಿದೆ. ಅಂತಹ ಪ್ರಶಾಂತ್ ನೀಲ್ ನಿರ್ದೇಶನದ ಬಹುನೀರಿಕ್ಷಿತ ಸಿನಿಮಾ ಸಲಾರ್ (Salar) ರಿಲೀಸ್ ದಿನಾಂಕ ನಿಗದಿಯಾಗಿದೆ.

ಕೆಜಿಎಫ್ 2 (KGF 2) ಬಳಿಕ ಪ್ರಶಾಂತ್ ನೀಲ್ (Prashanth Neel )ನಿರ್ದೇಶನದ ಸಿನಿಮಾ ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಭರ್ಜರಿ ಹಬ್ಬದೂಟ ವೊಂದರ ಆಹ್ವಾನ ಪತ್ರಿಕೆ ಸಿಕ್ಕಿದೆ. ಅರೇ‌ ಇದೇನಿದು ಅಂದ್ರಾ ಕೆಜಿಎಫ್ (KGF ) ಬಳಿಕ ಪ್ರಶಾಂತ್ ನೀಲ್ ನಿರ್ದೇಶನ ಅಂತಹದೊಂದು ಹೊಸ ಹುಚ್ಚುಅಭಿಮಾನ ಹುಟ್ಟಿಸಿದೆ. ಅಂತಹ ಪ್ರಶಾಂತ್ ನೀಲ್ ನಿರ್ದೇಶನದ ಬಹುನೀರಿಕ್ಷಿತ ಸಿನಿಮಾ ಸಲಾರ್ (Salar) ರಿಲೀಸ್ ದಿನಾಂಕ ನಿಗದಿಯಾಗಿದೆ.

ಡಿಸೆಂಬರ್ 22 ರಂದು ನೀಲ್ ನಿರ್ದೇಶನದ ಬಹುನೀರಿಕ್ಷಿತ ಸಿನಿಮಾ ಸಲಾರ್ ತೆರೆಗೆ ಬರೋದು ಫಿಕ್ಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ (Social Media) ಚಿತ್ರತಂಡ ಈ ಅಂಶ ಖಚಿತಪಡಿಸಿದೆ. ಪ್ರಭಾಸ್ ಹಾಗೂ ಪ್ರಶಾಂತ ನೀಲ್ ಕಾಂಬಿನೇಶನ್ ನಲ್ಲಿ ಸಿದ್ಧವಾಗಿರೋ ಈ ಸಿನಿಮಾ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.

prashanth neel another record, Prabhas Salar Movie Relesed Date fix
ಸಲಾರ್‌ ಸಿನಿಮಾದ ಪೋಸ್ಟರ್‌ನಲ್ಲಿ ನಟ ಪ್ರಭಾಸ್‌
Image Credit to Original Source

ಈಗಾಗಲೇ ಎರಡು ಭಾರಿ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗಿತ್ತು. ಈಗ ಡಿಸೆಂಬರ್ 22 ರಂದು ಅಂದ್ರೇ ಕ್ರಿಸ್ಮಸ್ ಹಬ್ಬದ ಎದುರು ಸಿನಿಮಾ ತೆರೆಗೆ ಬರಲಿದೆ. ಸಾಮಾನ್ಯವಾಗಿ ಕ್ರಿಸ್ಮಸ್ ವೇಳೆ ಶಾಲಾ ಕಾಲೇಜುಗಳಿಗೆ ವಾರಗಳ ಕಾಲ ರಜೆ ನೀಡಲಾಗುತ್ತೆ. ಈ ವೇಳೆ ಆಡಿಯನ್ಸ್ ಫ್ರೀಟೈಂ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ರಿಲೀಸ್ ಗೆ ಪ್ಲ್ಯಾನ್ ಮಾಡಲಾಗಿದೆ.

ಇದನ್ನೂ ಓದಿ : ರಂಗಿತರಂಗ ಹೀರೋ ಗ್ರ್ಯಾಂಡ್ ‌ರ್ರೀ ಎಂಟ್ರಿ: ದೂದ್‌ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ

ಈಗಾಗಲೇ ಎರಡು ಭಾರಿ ರಿಲೀಸ್ ಡೇಟ್ ಮುಂದೂಡಿಕೆಯಾಗಿರೋದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದರು. ಈಗ ಅಂತಿಮವಾಗಿ ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ ಬಿಡುಗಡೆಗೆ ಸಿದ್ಧವಾಗಿದೆ. ಜುಲೈನಲ್ಲಿ ರಿಲೀಸ್ ಆಗಿರೋ ಸಲಾರ ಸಿನಿಮಾದ ಟೀಸರ್ ಮಿಲಿಯನ್ಸ್ ವೀವ್ಸ್ ಪಡೆದು ಮುಂದೆ ಸಾಗಿದ್ದು ಸಿನಿಮಾದ ಬಗ್ಗೆ ಕುತೂಹಲ ಇಮ್ಮಡಿಸುವಂತೆ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಅಭಿಮಾನ ಹೊಂದಿರೋ ಅಭಿಮಾನಿಗಳು ಟೀಸರ್ ನೋಡಿ ಇನ್ನಷ್ಟು ಖುಷಿಯಾಗಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೀಲ್ ಗೆ ರಿಲೀಸ್ ಡೇಟ್ ಅನೌನ್ಸ್ ಮಾಡುವಂತೆ ಒತ್ತಡ ಹೇರಲಾರಂಭಿಸಿದ್ದರು. ಸಲಾರ ಸಿನಿಮಾ ಪ್ರಭಾಸ್ ಅಭಿನಯದ ಜೊತೆಗೆ ನೀಲ್ ನಿರ್ದೇಶನದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದೆ.

ಇದನ್ನೂ ಓದಿ : ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ಯಾಕೆಂದರೆ ನೀಲ್ ಕತೆಯನ್ನು ಚಿತ್ರಕಥೆಯನ್ನು ಪ್ರಸ್ತುತಪಡಿಸುವ ರೀತಿಯೇ ವಿಶಿಷ್ಟವಾಗಿದ್ದು ನೋಡುಗರನ್ನು ಸೆಳೆಯುತ್ತದೆ. ಅಲ್ಲದೇ ಚಿತ್ರಕಥೆ ಒತ್ತು ನೀಡೋದರ ಜೊತೆಗೆ ನೀಲ್ ಹೀರೋಯಿಸಂಗೆ ಅಂದ್ರೇ ನಾಯಕನ ಇಮೇಜ್ ಗೆ ಬೇರೆಯದೇ ಬಿಲ್ಡಪ್ ಕೊಟ್ಟು ತೆರೆ ಮೇಲೆ ತರುತ್ತಾರೆ. ಇದಲ್ಲದೇ ಸಂಗೀತವೂ ಸಿನಿಮಾ ಗೆಲುವಿಗೆ ಪೂರಕವಾಗುವಂತೆ ನೋಡಿಕೊಳ್ಳುವುದು ನೀಲ್ ಇನ್ನೊಂದು ವಿಶೇಷತೆ.

prashanth neel another record, Prabhas Salar Movie Relesed Date fix
ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌
Image Credit to Original Sourc

ಅಲ್ಲದೇ ಭಾವನಾತ್ಮಕ ಅಂಶ,ಹೀರೋಯಿನ್ ಗೂ ಕೂಡ ಪ್ರಶಾಂತ್ ಸಿನಿಮಾದಲ್ಲಿ ಸಮಾನ ಪ್ರಾಧಾನ್ಯತೆ ಕೊಡುತ್ತಾರೆ. ಇದೇ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಚಿಕ್ಕ ಬಜೆಟ್ ನ ಅಂದ್ರೇ ಕೇವಲ ನಾಲ್ಕು ಕೋಟಿ ಬಜೆಟ್ ನ ಉಗ್ರಂ ಸಿನಿಮಾದ ಮೂಲಕ ಕನ್ನಡದಲ್ಲಿ ಕೆರಿಯರ್ ಆರಂಭಿಸಿದ ಪ್ರಭಾಸ್ ಈಗ ಬಹುಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ನಿಂದಲೂ ಬೇಡಿಕೆ ಹೊಂದಿರುವ ನಿರ್ದೇಶಕರಾಗಿ ರೂಪುಗೊಂಡಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಟಿಯರಿಗೂ ಸೆಡ್ಡು ಹೊಡೆಯೋ ಸುಂದರಿ: ಇದು ಧನ್ಯಾ ರಾಮಕುಮಾರ್ ಮನಸೆಳೆಯೋ ಪೋಟೋಶೂಟ್

ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ನೀಲ್, ನಾನು ನನ್ನ ಪ್ರತಿ ಸಿನಿಮಾವನ್ನು ಫ್ಯಾಂಟಸಿಯಂತೆ ನೋಡುತ್ತೇನೆ.ನನ್ನ ಚಲನಚಿತ್ರಗಳು ಅವರ ಜಗತ್ತನ್ನು ನಿಮಗೆ ಅಂದ್ರೇ ಪ್ರೇಕ್ಷಕರಿಗೆ ಮನವರಿಕೆ ಮಾಡಿಸಬೇಕು.ಅದೊಂದು ವಿಭಿನ್ನ ಜಗತ್ತು ಎಂದು ನಿಮಗೆ ಅನ್ನಿಸಬೇಕು.

ಜೊತೆಗೆ ಜನಕ್ಕೆ ಇದು ಕೊಂಚ ಹೆಚ್ಚಾಗಿಯೇ ಕಲ್ಪನೆಯನ್ನು ಹೊಂದಿದೆ ಎನ್ನಿಸಿದರೇ ನಾನು ನನ್ನ ಸಿನಿಮಾದಲ್ಲಿ ಯಶಸ್ವಿಯಾದಂತೆ ಎಂದಿದ್ದರು. ಹೀಗೆ ಸಿನಿಮಾವನ್ನು ವಿಭಿನ್ನವಾಗಿ ನೋಡುವ ಮನಸ್ಥಿತಿ ಹಾಗೂ ಕಲಾತ್ಮಕತೆಯೇ ಪ್ರಶಾಂತ್ ನೀಲ್ ಗೆ ಇಂದು ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ. ಸದ್ಯ ನೀಲ್ ನಿರ್ದೇಶನದ ಸಲಾರ ಜನರ ಕುತೂಹಲ ಹೆಚ್ಚಿಸಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ನೀವು ಇನ್ನೊಂದಿಷ್ಟು ದಿನ ಕಾಯಲೇ ಬೇಕು.

prashanth neel another record, Prabhas Salar Movie Relesed Date fix

Comments are closed.