Marriage New Law : ಮದುವೆ ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ಆದರೆ ಮದುವೆಯಾದ ನಂತರ ಸಂಗಾತಿಯ ಜೊತೆಗೆ ಹೊಂದಾಣಿಕೆ ಆಗದಿದ್ರೆ ವಿಚ್ಚೇಧನ ಪಡೆಯುವುದು ಸಾಮಾನ್ಯವಾಗುತ್ತಿದೆ. ಇನ್ನೊಂದೆಡೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ರಾಜ್ಯ ಸರಕಾರ ವಿವಾಹಕ್ಕೆ ಹೊಸ ಕಾನೂನು ಜಾರಿಗೆ ತಂದಿದೆ.
ಅಂದಹಾಗೆ ಈ ಕಾನೂನು ಜಾರಿ ಆಗುತ್ತಿರುವುದು ಕರ್ನಾಟಕದಲ್ಲಿ ಅಲ್ಲಾ, ಬದಲಾಗಿ ದೂರದ ಅಸ್ಸಾಂನಲ್ಲಿ. ಹೌದು, ಬಹುಪತ್ನಿತ್ವ ನಿಷೇಧಿಸುವ ಸಲುವಾಗಿ ಅಸ್ಸಾಂ ಸರಕಾರ ಹೊಸ ಕಾನೂನನ್ನು ರೂಪಿಸುತ್ತಿದೆ. ಸರಕಾರಿ ಉದ್ಯೋಗಿಗಳ ಜೀವನ ಸಂಗಾತಿಯು ಜೀವಂತವಾಗಿ ಇದ್ದರೆ, ಮತ್ತೊಂದು ಮದುವೆ ಆಗುವುದನ್ನು ಸರಕಾರ ನಿಷೇಧಿಸಿದೆ.

ಒಂದೊಮ್ಮೆ ಸರಕಾರಿ ನೌಕರರು ದ್ವಿಪತ್ನಿತ್ವವನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ದಂಡದ ವಿಧಿಸುವ ಕುರಿತು ಎಚ್ಚರಿಕೆಯನ್ನು ನೀಡಿದೆ. ಸರಕಾರಿ ನೌಕರರು ಯಾವುದೇ ಧರ್ಮದವರಾಗಿರಲಿ, ಅವರು ಸರಕಾರಿ ನೌಕರಿಯಲ್ಲಿದ್ದು, ಎರಡನೇ ಮದುವೆ ಆಗಲು ಬಯಸಿದ್ರೆ ಅವರು ಕಡ್ಡಾಯವಾಗಿ ರಾಜ್ಯ ಸರಕಾರದ ಅನುಮತಿಯನ್ನು ಪಡೆಯಲೇ ಬೇಕು.
ಇದನ್ನೂ ಓದಿ : 50000 ಕ್ಕಿಂತ ಅಧಿಕ ಹಣದ ವರ್ಗಾವಣೆಗೆ ಹೊಸ ರೂಲ್ಸ್ : ಆದೇಶ ಹೊರಡಿಸಿದ RBI
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಸರಕಾರ ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ದ ಸಮರ ಸಾರಿದ್ದರು. ಇದೀಗ ಬಹುಪತ್ನಿತ್ವ ತಡೆಗೆ ಹೊಸ ಕಾನೂನು ರೂಪಿಸಿದೆ. ಮಾತ್ರವಲ್ಲ ಸರಕಾರಿ ನೌಕರರ ಮದುವೆಗೆ ಸಂಬಂಧಿಸಿದಂತೆ ಹೊಸ ಷರತ್ತುಗಳನ್ನು ವಿಧಿಸಿದೆ.
ಹೊಸ ಕಾನೂನು ಬಗ್ಗೆ ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಅವರು, ಸರಕಾರಿ ನೌಕರನ ಪತ್ನಿ ಜೀವಂತವಾಗಿದ್ದು, ಎರಡನೇ ಮದುವೆ ಆಗಲು ಬಯಸುವ ಸರಕಾರಿ ನೌಕರರು ಕಡ್ಡಾಯವಾಗಿ ರಾಜ್ಯ ಸರಕಾರದಿಂದ ಅನುಮತಿಯನ್ನು ಪಡೆಯಲೇ ಬೇಕು ಎಂದು ಹೇಳಿದ್ದಾರೆ.
ಇನ್ನು ಸರಕಾರಿ ನೌಕರ ಸಾವನ್ನಪ್ಪಿದ ಸಂದರ್ಭದಲ್ಲಿ ಪಿಂಚಣಿ ಮೊತ್ತಕ್ಕಾಗಿ ಪತ್ನಿಯರು ಜಗಳವಾಡುತ್ತಾರೆ. ಹೀಗಾಗಿ ರಾಜ್ಯ ಸರಕಾರದ ಈ ಹೊಸ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಅಸ್ಸಾಂನಲ್ಲಿ ಹೊಸ ಆದೇಶವನ್ನು ಈಗಾಗಲೇ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : ನೀವು ಬಿಪಿಎಲ್ ಕಾರ್ಡ್ ಹೊಂದಿದ್ದೀರಾ ? ಜೊತೆಗೆ ಕಾರು ಇದ್ಯಾ ? ಹಾಗಾದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
ಪತ್ನಿಗೆ ವಿಚ್ಚೇಧನ ನೀಡಿದ್ರೂ ಎರಡನೇ ಮದುವೆ ನಿಷಿದ್ದ :
ಅಸ್ಸಾಂ ಸಿಬ್ಬಂದಿ ಇಲಾಖೆ ಕಚೇರಿ ಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದೆ. ಒಂದೊಮ್ಮೆ ವಿಚ್ಚೇಧನ ನೀಡಿದ್ರೂ ಕೂಡ ಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಆಗುವಂತಿಲ್ಲ. ಒಂದೊಮ್ಮೆ ಎರಡನೇ ಮದುವೆ ಆಗಲು ಬಯಸಿದ್ರೆ ಕಡ್ಡಾಯವಾಗಿ ಸರಕಾರದ ಅನುಮತಿಯನ್ನು ಪಡೆಯಲೇ ಬೇಕು. ನಿಯಮ ಉಲ್ಲಂಘಿಸಿದ್ರೆ ಅಂತಹ ಸರಕಾರಿ ನೌಕರನ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ.

ಮಹಿಳಾ ಉದ್ಯೋಗಿಗಳು ವಿವಾಹಿತ ಪುರುಷರನ್ನು ಮದುವೆ ಆಗುವಂತಿಲ್ಲ
ಕೇವಲ ಪುರುಷ ಸಿಬ್ಬಂದಿಗಳು ಮಾತ್ರವಲ್ಲ, ಮಹಿಳಾ ಸಿಬ್ಬಂದಿಗಳಿಗೂ ಕೂಡ ಅಸ್ಸಾಂ ಸರಕಾರ ಕಾನೂನು ಜಾರಿಗೊಳಿಸಿದೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1965 ರ ನಿಯಮ 26 ರ ಪ್ರಕಾರ, ಪುರುಷ ಸಿಬ್ಬಂದಿ ಜೀವಂತ ಪತ್ನಿ ಇರುವಾಗ ಮತ್ತೊಂದು ಮದುವೆ ಆಗಬಾರದು, ಅಲ್ಲದೇ ಸರಕಾರಿ ಮಹಿಳಾ ಉದ್ಯೋಗಿ ಅನುಮತಿ ಇಲ್ಲದೇ ಮದುವೆ ಆಗಿರುವ ಪುರುಷನನ್ನು ಮದುವೆ ಆಗುವಂತಿಲ್ಲ.
ಇದನ್ನೂ ಓದಿ : Lunar Eclipse 2023 : ಚಂದ್ರಗ್ರಹಣದಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ
ಒಂದೊಮ್ಮೆ ರಾಜ್ಯ ಸರಕಾರಿ ನೌಕರರು ಈ ನಿಯಮಗಳನ್ನು ಪಾಲನೆ ಮಾಡದಿದ್ರೆ ಕಡ್ಡಾಯ ನಿವೃತ್ತಿ, ದಂಡ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರಕಾರಿ ನೌಕರರಿಗೆ ಜಾರಿಗೆ ತಂದಿರುವ ಈ ರೂಲ್ಸ್ ಸಮಾಜದ ಮೇಲೆ ಬಹುದೊಡ್ಡ ಮಟ್ಟದಲ್ಲಿ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ.
ಸರಕಾರಿ ನೌಕರರು ಯಾವುದೇ ಧರ್ಮದವರು ಆಗಿದ್ದರೂ ಕೂಡ ಅಸ್ಸಾಂ ಸರಕಾರದ ಆದೇಶಕ್ಕೆ ತಲೆ ಬಾಗಬೇಕಾಗಿದೆ. ಒಂದೊಮ್ಮೆ ಅವರ ಧರ್ಮದವರು ಎರಡನೇ ಮದುವೆಗೆ ಅನುಮತಿಯನ್ನು ನೀಡಿದ್ದರೂ ಕೂಡ ಸರಕಾರದ ನಿಯಮದ ಪ್ರಕಾರ ಸರಕಾರದಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯ.
Govt Permission Mandatory For Employee Marriage New Law Announced in Assam Government