Lunar Eclipse 2023 : ಚಂದ್ರಗ್ರಹಣದಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ

ಚಂದ್ರಗ್ರಹಣದಿಂದ ಕೆಲವು ರಾಶಿಗಳಿಗೆ ಶುಭಯೋಗವಿದೆ. ಹಾಗಾದ್ರೆ ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Lunar Eclipse 2023 horoscope today 28 ಅಕ್ಟೋಬರ್ 2023 ಶನಿವಾರ. ಇಂದು ಚಂದ್ರಗ್ರಹಣ ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನು ಇಂದು ಮೇಷರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಜೊತೆಗೆ ದ್ವಾದಶ ರಾಶಿಗಳ ಮೇಲೆ ರೇವತಿ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರಗ್ರಹಣದಿಂದ ಕೆಲವು ರಾಶಿಗಳಿಗೆ ಶುಭಯೋಗವಿದೆ. ಹಾಗಾದ್ರೆ ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಕೆಲವೊಂದು ಸಕಾರಾತ್ಮಕ ಬದಲಾವಣೆಗಳು ನಡೆಯಲಿದೆ. ಲಾಭದ ಜೊಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿದೆ. ಸಹೋದ್ಯೋಗಿಗಳ ಮನಸ್ಥಿತಿ ಹಾಳಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸು.

ವೃಷಭರಾಶಿ ದಿನಭವಿಷ್ಯ
ವೃಷಭರಾಶಿಯವರು ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯದ ಬಗ್ಗೆ ಚರ್ಚಿಸಲಿದ್ದಾರೆ. ದೂರದ ಬಂಧುಗಳಿಂದ ಶುಭವಾರ್ತೆ ಕೇಳುವಿರಿ. ಸಹೋದರನ ಸಲಹೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಹೂಡಿಕೆಯಿಂದ ಯಶ್ಸು. ಸಾಮಾಜಿಕವಾಗಿ ಗೌರವ ವೃದ್ದಿಯಾಗಲಿದೆ.

ಮಿಧುನರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಮಕ್ಕಳಿಗಾಗಿ ನೀವಿಂದು ಹೂಡಿಕೆ ಮಾಡುವಿರಿ. ದೂರದ ಬಂಧುಗಳ ಭೇಟಿಯಿಂದ ಸಂತಸ.

ಇದನ್ನೂ ಓದಿ : 50000 ಕ್ಕಿಂತ ಅಧಿಕ ಹಣದ ವರ್ಗಾವಣೆಗೆ ಹೊಸ ರೂಲ್ಸ್‌ : ಆದೇಶ ಹೊರಡಿಸಿದ RBI

ಕರ್ಕಾಟಕರಾಶಿ ದಿನಭವಿಷ್ಯ
ಆಕಸ್ಮಿಕವಾಗಿ ಆರ್ಥಿಕವಾಗಿ ಅಧಿಕ ಲಾಭ. ತಂದೆಯ ಸಲಹೆಯಂತೆ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಹಲವು ಸಮಯಗಳ ಹಿಂದೆ ನೀಡಿರುವ ಸಾಲ ಮರಳಿ ಬರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಶುಭಫಲಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಸಿಂಹರಾಶಿ ದಿನಭವಿಷ್ಯ
ವಿದೇಶಿ ವ್ಯವಹಾರದಲ್ಲಿ ಎಚ್ಚರಿಕೆ ತೀರಾ ಅಗತ್ಯ. ಸಿಂಹರಾಶಿಯವರು ಇಂದು ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರವಾಗಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿ ಇರುವುದು ತೀರಾ ಮುಖ್ಯ. ಬುದ್ದಿವಂತಿಕೆಯಿಂದ ಕಾರ್ಯಸಾಧನೆ ಮಾಡುವಿರಿ.

Lunar Eclipse 2023 Horoscope Today 28 October 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಕುಟುಂಬ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವಿರಿ. ಮನೆಯ ಮದುವೆಯ ಸಮಸ್ಯೆಗೆ ಇಂದು ಪರಿಹಾರ ದೊರೆಯಲಿದೆ. ಯಾರಿಗೆ ಸಾಲ ನೀಡಬೇಕಾದ್ರೂ ಎಚ್ಚರಿಕೆಯಿಂದ ಯೋಚಿಸಬೇಕು. ಸಂಬಂಧಿಕರ ಸಹಕಾರದಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ತುಲಾರಾಶಿ ದಿನಭವಿಷ್ಯ
ಇಂದು ವಿಶೇಷ ಸಾಧನೆ ಮಾಡುತ್ತಾರೆ. ಪಾಲುದಾರಿಕೆಯ ವ್ಯವಹಾರದಲ್ಲಿ ಉತ್ತಮ ಲಾಭ. ದೂರ ಪ್ರಯಾಣದಿಂದ ಮನಸಿಗೆ ನೆಮ್ಮದಿ. ಅತ್ಯಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಪಡೆಯುವಿರಿ. ಪ್ರೀತಿಯ ಜೀವನದಲ್ಲಿ ಗೌರವ ಹೆಚ್ಚಲಿದೆ.

ವೃಶ್ಚಿಕರಾಶಿ ದಿನಭವಿಷ್ಯ
ಸ್ನೇಹಿತರಿಂದ ಸಹಾಯ ದೊರೆಯಲಿದೆ. ಸಾಮಾಜಿಕವಾಗಿ ಖ್ಯಾತಿ ಗೌರವ ವೃದ್ದಿಸಲಿದೆ. ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಕೆಲಸವನ್ನು ಮಾಡುವಿರಿ. ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸುಖಮಯವಾಗಿ ಇರುತ್ತದೆ.

ಇದನ್ನೂ ಓದಿ : 10 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮೀ ಭಾಗ್ಯ

ಧನಸ್ಸುರಾಶಿ ದಿನಭವಿಷ್ಯ
ನಿಮ್ಮ ಅಗತ್ಯತೆಗಳನ್ನು ಪೂರೈಸು ಸ್ವಲ್ಪ ಹಣವನ್ನು ವ್ಯಯಿಸಬೇಕಾಗುತ್ತದೆ. ಆದಾಯ ಹಾಗೂ ವೆಚ್ಚಗಳನ್ನು ಸಮತೋಲನದಲ್ಲಿದೆ ಎಂದು ಖಚಿತ ಪಡಿಸಿಕೊಳ್ಳಿ. ಸಂಗಾತಿಯು ನಿಮಗೆ ಕೆಲಸದಲ್ಲಿ ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಕಾನೂನಿನ ವಿಚಾರದಲ್ಲಿ ಗೆಲುವು ದೊರೆಯಲಿದೆ. ಹಿರಿಯರ ಸಲಹೆ ಪಡೆಯುವುದು ಉತ್ತಮ.

ಮಕರರಾಶಿ ದಿನಭವಿಷ್ಯ
ಕೆಲಸದಲ್ಲಿ ಅನುಕೂಲಕರವಾದ ಲಾಭ ಪಡೆಯಬಹುದು. ನಿಮ್ಮ ಆಲೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ವ್ಯಾಪಾರಿಗಳ ಕೆಲವೊಂದು ಹಠಾತ್‌ ಬದಲಾವಣೆಯನ್ನು ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಯಾವುದೇ ವಿವಾದಗಳಿದ್ದರೂ ಅದು ಕೊನೆಗೊಳ್ಳುತ್ತದೆ. ಪ್ರೀತಿಯ ಜೀವನ ಸುಖಕರವಾಗಿ ಇರುತ್ತದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ಅನ್ನಭಾಗ್ಯ ಬೆನ್ನಲ್ಲೇ ಸರಕಾರದಿಂದ ಮತ್ತೊಂದು ಯೋಜನೆ

ಕುಂಭರಾಶಿ ದಿನಭವಿಷ್ಯ
ಮೇಲಾಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ವಿರೋಧಿಗಳು ನಿಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ. ಸರಕಾರಿ ಉದ್ಯೋಗಗಳು ಇಂದು ಭಡ್ತಿ ಪಡೆಯಲಿದ್ದಾರೆ. ಆಸ್ತಿ ವಿವಾದಗಳು ಬಗೆ ಹರಿಯಲಿದೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲನೆಯನ್ನು ನಡೆಸುವುದು ಉತ್ತಮ.

ಮೀನರಾಶಿ ದಿನಭವಿಷ್ಯ
ಹಣದ ಉಳಿತಾಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ಹರಿಸಬೇಕು. ನೀವು ಗಳಿಸಿದ ಹಣದಲ್ಲಿ ಸ್ವಲ್ಪ ಮಾತ್ರವೇ ಉಳಿಸಬೇಕು. ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವಿಂದು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಇದರಿಂದ ಮನಸಿಗೆ ಸಂತೋಷ ದೊರೆಯಲಿದೆ.

Lunar Eclipse 2023 Horoscope Today 28 October 2023 Zordic Sign

Comments are closed.