IPL 2024 : ಆತನ ತಂದೆ ಗ್ರೌಂಡ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಮಗ ದೊಡ್ಡ ಕ್ರಿಕೆಟರ್ ಆಗಬೇಕು ಅನ್ನೋದು ತಂದೆಯ ಕನಸು. ಇದೇ ಕಾರಣಕ್ಕೆ ಮಗನಿಂದ ಕಠಿಣ ಅಭ್ಯಾಸವನ್ನು ಮಾಡಿಸುತ್ತಿದ್ದರು. ಅಷ್ಟೇ ಅಲ್ಲಾ ಎರಡು ಬಾರಿ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿದ್ದರು ಕೂಡ ಅನ್‌ಸೋಲ್ಡ್ ಆಗಿದ್ದರು. ಆದರೆ 3ನೇ ಪ್ರಯತ್ನದಲ್ಲಿ 20 ಲಕ್ಷ ರೂಪಾಯಿಗೆ ಈ ಆಟಗಾರ ಆರ್‌ಸಿಬಿ (RCB) ಸೇರಿದ್ದಾನೆ. ಆತ ಬೇರಾರೂ ಅಲ್ಲಾ ಗುಜರಾತ್‌ನ ಹಾರ್ಡ್-ಹಿಟ್ಟಿಂಗ್, ಎಡಗೈ ಬ್ಯಾಟ್ಸ್‌ಮನ್ ಸೌರವ್ ಚೌಹಾಣ್ (Saurav Chauhan).
ಗುಜರಾತ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನ ಗ್ರೌಂಡ್ಸ್‌ಮನ್ ದಿಲೀಪ್ ಚೌಹಾಣ್ ಅವರ ಮಗ ಸೌರವ್ ಚೌಹಾಣ್ ಹೆಸರು ಈ ಹಿಂದೆ ಎರಡು ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿತ್ತು. ಆದರೆ ಯಾವ ತಂಡಗಳು ಕೂಡ ಸೌರವ್ ಚೌಹಾಣ್ ಖರೀದಿ ಮಾಡಿಲ್ಲ. ಇಷ್ಟಕ್ಕೆ ಸೌರವ್ ಎದೆಗುಂದಲಿಲ್ಲ. ನಿರಂತರವಾದ ಅಭ್ಯಾಸ, ಕಠಿಣ ಶ್ರಮದಿಂದಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರ್ಪಡೆಯಾಗಿದ್ದಾರೆ. ಮುಂಬರುವ ಐಪಿಎಲ್ 2024 ರಲ್ಲಿ RCB ಪರ ಆಡಲಿದ್ದಾರೆ.
ಗುಜರಾತ್ ಕ್ರಿಕೆಟ್ ತಂಡ ಆಟಗಾರನಾಗಿರುವ ಸೌರವ್ ಚೌಹಾಣ್ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ. ಆದರೂ ಐಪಿಎಲ್‌ನಲ್ಲಿ ಅವಕಾಶ ದೊರೆತಿರಲಿಲ್ಲ. ಮಂಗಳವಾರ ನಡೆದ ಐಪಿಎಲ್ 2024 ಹರಾಜಿನಲ್ಲಿ 23 ವರ್ಷ ವಯಸ್ಸಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರ ಮೂಲ ಬೆಲೆ 20 ಲಕ್ಷಕ್ಕೆ ಪಡೆದುಕೊಂಡಿದೆ.

ಹಿಂದಿನ ಎರಡು ಐಪಿಎಲ್ ಹರಾಜಿನಲ್ಲಿ ಸೌರಭ್ ಚೌಹಾಣ್ ಮಾರಾಟವಾಗದೆ ಉಳಿದಿದ್ದರು ಎಂದು ಅವರ ತಂದೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗಿಲ್ಲ ಅನ್ನೋದು ಮನವರಿಕೆ ಆಗುತ್ತಿದ್ದಂತೆಯೇ ಸೌರವ್ ಚೌಹಾಣ್, ಟಿವಿಯನ್ನು ಆಫ್ ಮಾಡಿ ಮೈದಾನಕ್ಕೆ ಇಳಿದು ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.
ಆದರೆ ಯಾವುದೇ ರೀತಿಯಲ್ಲಿಯೂ ಖಿನ್ನತೆಗೆ ಒಳಗಾಗದೇ ನಿರಂತರವಾಗಿ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಇದೀಗ ಅಂತಿಮವಾಗಿ ಐಪಿಎಲ್‌ನ ಬಲಿಷ್ಠ ತಂಡ ಆರ್‌ಸಿಬಿ ಸೇರ್ಪಡೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಜೊತೆಗೆ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ನಾನು ಈ ಬಾರಿ ಎರಡು ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿದ್ದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ್ದು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವ ನನಗೆ ತುಂಬಾ ಖುಷಿ ತಂದಿದೆ. ನನ್ನ ಯಶಸ್ಸಿಗೆ ಸಹಕಾರ ಮಾಡಿರುವ ತರಬೇತುದಾರ ತಾರಕ್ ತ್ರಿವೇದಿ ಹಾಗೂ ಪೋಷಕರು ಮತ್ತು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ಕೃತಜ್ಞತೆಯನ್ನು ಸಲ್ಲಸಿದ್ದಾರೆ.
ಗುಜರಾತ್ ತಂಡವನ್ನು ಪ್ರತಿನಿಧಿಸುತ್ತಿರುವ ಸೌರವ್ ಚೌಹಾಣ್ 2022 ರಲ್ಲಿ ಕೇರಳ ವಿರುದ್ದ ತನ್ನ ಮೊದಲ ಪಂದ್ಯವನ್ನು ಆಡಿದ್ದ. ಸೌರವ್ ಚೌಹಾಣ್ ಸ್ಪೋಟಕ ಆಟಗಾರ. ಅದ್ರಲ್ಲೂ ಸಿಕ್ಸರ್ ಎತ್ತುವುದರಲ್ಲಿ ಈತ ನಿಸ್ಸೀಮ. ಒಟ್ಟು 19 ಟಿ20 ಪಂದ್ಯಗಳನ್ನು ಆಡಿರುವ ಸೌರವ್ 464 ರನ್ ಸಿಡಿಸಿದ್ದಾನೆ. ಇದರಲ್ಲಿ 25 ಸಿಕ್ಸರ್ ಒಳಗೊಂಡಿದ್ದು, ನಾಲ್ಕು ಅರ್ಧ ಶತಕ ಬಾರಿಸಿದ್ದಾನೆ. ಇನ್ನು 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 476 ರನ್ ಬಾರಿಸಿದ್ದಾನೆ. ಇದರಲ್ಲಿ 21 ಸಿಕ್ಸರ್ ಸಿಡಿಸಿದ್ದಾನೆ. ಅಲ್ಲದೇ 2 ಶತಕ ಹಾಗೂ 2 ಅರ್ಧಶತಕ ಗಳಿಸಿದ್ದಾನೆ.
IPL 2024 Groundsman son Sixer Experts Saurav Chauhan, unsold in 2-time IPL auction, finally joins RCB