ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ 22 ಡಿಸೆಂಬರ್‌ 2023: ಶಿವಯೋಗದಿಂದ ಈ ರಾಶಿಯವರಿಗೆ ಅನುಕೂಲ

ದಿನಭವಿಷ್ಯ 22 ಡಿಸೆಂಬರ್‌ 2023: ಶಿವಯೋಗದಿಂದ ಈ ರಾಶಿಯವರಿಗೆ ಅನುಕೂಲ

- Advertisement -

Horoscope Today : ದಿನಭವಿಷ್ಯ 22 ಡಿಸೆಂಬರ್‌  2023 ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಇಂದು ಅಶ್ವಿನಿ ನಕ್ಷತ್ರದ ಪ್ರಭಾವ ಇರುತ್ತದೆ. ಶಿವಯೋಗ ದಿಂದ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ಕರ್ಕಾಟಕ, ಧನಸ್ಸು ರಾಶಿಯವರಿಗೆ ಅನುಕೂಲಕರ. ಮೇಷರಾಶಿಯಿಂದ ಮೀನರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರಲಿದೆ. ಕುಟುಂಬದ ಸದಸ್ಯರ ಜೊತೆಗೆ ಮುಕ್ತವಾಗಿ ಚರ್ಚೆ ನಡೆಸುವಿರಿ. ಆಸ್ತಿ ವ್ಯವಹಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಸಮಾಧಾನದಿಂದ ಅಧಿಕ ಲಾಭ ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಕೆಲಸ ಮಾಡುವ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮಾನಸಿಕ ಸಮಸ್ಯೆ ಇದ್ದರೆ ಪರಿಹಾರವನ್ನು ಕಂಡುಕೊಳ್ಳಿ. ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿಯನ್ನು ವಹಿಸಿ. ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ತನ್ನಿ.

ಮಿಥುನರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವಿರಿ. ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಭವಿಷ್ಯದಲ್ಲಿ ನಮಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ. ಸ್ನೇಹಿತರ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ.

ಕರ್ಕಾಟಕರಾಶಿ ದಿನಭವಿಷ್ಯ
ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸರಕಾರಿ ಕೆಲಸದಲ್ಲಿ ಇರುವವರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಸಂಗಾತಿಯ ಜೊತೆಗೆ ಪಾರ್ಟಿಯನ್ನು ಆಯೋಜಿಸುವಿರಿ. ಕುಟುಂಬ ಸದಸ್ಯರ ಜೊತೆಗೆ ಸಾಮರಸ್ಯ ಇರಲಿದೆ.

ಇದನ್ನೂ ಓದಿ : 2 ಬಾರಿ ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌, ಕೊನೆಗೂ ಆರ್‌ಸಿಬಿ ಸೇರಿದ ಗ್ರೌಂಡ್ಸ್‌ಮನ್ ಮಗ ಸಿಕ್ಸರ್‌ ಎಕ್ಸ್‌ಫರ್ಟ್ ಸೌರವ್‌ ಚೌಹಾಣ್‌

ಸಿಂಹರಾಶಿ ದಿನಭವಿಷ್ಯ
ವೃತ್ತಿ ಜೀವನದಲ್ಲಿ ಸಮಸ್ಯೆಗಳು ಇಂದಿನ ಪರಿಹಾರವಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ದೂರ ಪ್ರಯಾಣ ಸಾಧ್ಯತೆ. ಪ್ರೇಮ ಜೀವನವು ಉತ್ತಮವಾಗಿ ಇರಲಿದೆ. ಯಾವುದೇ ಹೊಸ ಕೆಲಸ ಕಾರ್ಯಗತ ಗೊಳಿಸುವ ಮೊದಲು ಇತರರ ಸಲಹೆ ಪಡೆಯಿರಿ.

Horoscope Today 22 December 2023 Zodiac Sign Shiva yoga
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಶಸ್ಸು. ವ್ಯಾಪಾರಿಗಳಿಗೆ ದೂರ ಪ್ರಯಾಣದಿಂದ ಆಧಿಕ ಲಾಭ. ವಿದ್ಯಾರ್ಥಿಗಳ ವಿಚಾರದಲ್ಲಿ ಶುಭ ಸಮಾಚಾರವನ್ನು ಕೇಳುವಿರಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ತುಲಾರಾಶಿ ದಿನಭವಿಷ್ಯ
ಯಾವುದೇ ಕಾರ್ಯವನ್ನು ಮಾಡುವ ಮೊದಲು ಕುಟುಂಬದ ಹಿರಿಯರ ಸಲಹೆಯನ್ನು ಪಡೆಯಿರಿ. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ನೀವು ಕಾಳಜಿಯನ್ನು ವಹಿಸಿ. ಅನಾರೋಗ್ಯ ಸಮಸ್ಯೆ ಎದುರಾದ್ರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ. ಪ್ರೇಮ ಜೀವನವು ಸಂತಸವನ್ನು ತರಲಿದೆ.

ಇದನ್ನೂ ಓದಿ : ಪನೀರ್ ಖಾದ್ಯ ಖಾಲಿಯಾಗಿದ್ದಕ್ಕೆ ಮದುವೆ ಮನೆಯಲ್ಲಿ ಜಗಳವಾಡಿದ ಅತಿಥಿಗಳು : ವಿಡಿಯೋ ವೈರಲ್

ವೃಶ್ಚಿಕರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ. ಹೊಸ ವ್ಯವಹಾರ ಪ್ರಾರಂಭಿಸಲು ಇದು ಸಕಾಲ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಧಿಕ ಲಾಭ ದೊರೆಯಲಿದೆ.

ಧನಸ್ಸುರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ವೈಮನಸ್ಸು ಇಂದು ಸುಧಾರಣೆಯನ್ನು ಕಾಣಲಿದೆ. ಕೆಲವೊಂದು ಒಳ್ಳೆಯ ಸುದ್ದಿಯನ್ನು ನೀವು ಕೇಳುವಿರಿ. ಕುಟುಂಬ ಸದಸ್ಯರ ಜೊತೆಗೆ ನೀವಿಂದು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆಯಿದೆ.

ಮಕರರಾಶಿ ದಿನಭವಿಷ್ಯ
ಸಂಗಾತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ವಿದ್ಯಾರ್ಥಿಗಳು ಇಂದು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಸಂಬಂಧಗಳನ್ನು ಸುಧಾರಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ. ವ್ಯಾಪಾರಸ್ಥರು ವಿಶೇಷ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯನ್ನು ಕಾಣಲಿದೆ.

ಕುಂಭರಾಶಿ ದಿನಭವಿಷ್ಯ
ಕೌಟುಂಬಿಕ ಜೀವನದ ಯಾವುದೇ ಗೊಂದಲಗಳಿಗೆ ತೆರೆ ಬೀಳಲಿದೆ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದ್ರೆ ಉತ್ತಮ ಲಾಭವನ್ನು ಪಡೆಯಬಹುದು. ಯಾವುದೇ ವಸ್ತುವನ್ನು ಖರೀದಿ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ತಾಯಿಗೆ ಅನಾರೋಗ್ಯ ಕಾಡಲಿದೆ.

ಇದನ್ನೂ ಓದಿ : 4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ಮೀನರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿಯು ಇಂದು ಸುಧಾರಣೆಯನ್ನು ಕಾಣಲಿದೆ. ಸಂಗಾತಿಯು ಇಂದು ಸಂತೋಷವಾಗಿ ಇರುತ್ತಾರೆ. ಉದ್ಯೋಗಿಗಳಿಗೆ ಶುಭ ಸುದ್ದಿ. ಸ್ನೇಹಿತರ ಭೇಟಯಿಂದ ಮನಸಿಗೆ ನೆಮ್ಮದಿ. ಆದಾಯಕ್ಕಿಂತ ಅಧಿಕ ಖರ್ಚು ಮಾಡಬೇಡಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 22 December 2023 Zodiac Sign Shiva yoga

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular