ಪನೀರ್ ಖಾದ್ಯ ಖಾಲಿಯಾಗಿದ್ದಕ್ಕೆ ಮದುವೆ ಮನೆಯಲ್ಲಿ ಜಗಳವಾಡಿದ ಅತಿಥಿಗಳು : ವಿಡಿಯೋ ವೈರಲ್

Paneer shortage Delhi wedding : ಉತ್ತರ ಭಾರತೀಯರ ಮದುವೆಯಲ್ಲಿ ಪನೀರ್ ಖಾದ್ಯ ಇರಲೇ ಬೇಕು. ಇದು ಕೇವಲ ಒಂದು ಮೆನು ಐಟಂ ಅಲ್ಲಾ, ಬದಲಾಗಿ ಜನರ ಭಾವನೆ. ಇದೀಗ ಪನೀರ್ ಖಾದ್ಯ ಖಾಲಿ ಆಯ್ತು ಅನ್ನೋ ಕಾರಣಕ್ಕೆ ಮದುವೆ ಮನೆಯಲ್ಲೇ ವಧು, ವರನ ಕಡೆಯವರು ಬಡಿದಾಡಿಕೊಂಡಿರುವ ಘಟನೆ ನಡೆದಿದೆ.

Paneer shortage Delhi wedding : ಪನೀರ್ ಖಾದ್ಯವನ್ನು ಇಷ್ಟಪಡದವರು ಬಹುತೇಕ ಕಡಿಮೆ. ಅದ್ರಲ್ಲೂ ಉತ್ತರ ಭಾರತೀಯರ ಮದುವೆಯಲ್ಲಿ ಪನೀರ್ ಖಾದ್ಯ ಇರಲೇ ಬೇಕು. ಇದು ಕೇವಲ ಒಂದು ಮೆನು ಐಟಂ ಅಲ್ಲಾ, ಬದಲಾಗಿ ಜನರ ಭಾವನೆ. ಇದೀಗ ಪನೀರ್ ಖಾದ್ಯ ಖಾಲಿ ಆಯ್ತು ಅನ್ನೋ ಕಾರಣಕ್ಕೆ ಮದುವೆ ಮನೆಯಲ್ಲೇ ವಧು, ವರನ ಕಡೆಯವರು ಬಡಿದಾಡಿಕೊಂಡಿರುವ ಘಟನೆ ನಡೆದಿದೆ.

ದೆಹಲಿಯ ಮದುವೆ ಮನೆಯಲ್ಲಿ ನಡೆದ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮದುವೆಯ ಊಟಕ್ಕೆ ತೆರಳಿದ್ದ ಅತಿಥಿಗಳಿಗೆ ಪನೀರ್ ಖಾದ್ಯ ಖಾಲಿ ಆಗಿತ್ತು. ಇದರಿಂದ ಕೆರಳಿದ ಅತಿಥಿಗಳು ಪರಸ್ಪರ ಖುರ್ಚಿಯನ್ನು ಎಸೆದಿದ್ದಾರೆ. ಅಂತಿಮವಾಗಿ ಎರಡೂ ಕಡೆಯವರು ನಿರಾಸೆಯಿಂದಲೇ ಮನೆಗೆ ತೆರಳಿದ್ದಾರೆ.

ಉತ್ತರ ಭಾರತದ ಮದುವೆಯಲ್ಲಿ ಪನೀರ್ ನಿಂದ ಮಾಡಿರುವ ಬಗೆ ಬಗೆಯ ಖಾದ್ಯಗಳು ಇರಲೇ ಬೇಕು. ಮದುವೆಯ ಮನೆಯ ಮೆನುವಿನಲ್ಲಿ ಮಟರ್ ಪನೀರ್ , ಶಾಹಿ ಪನೀರ್ , ಪಾಲಕ್ ಪನೀರ್ , ಮೇಥಿ ಪನೀರ್ , ಪನೀರ್ ಮಂಚೂರಿಯನ್ ಸೇರಿದಂತೆ ವಿವಿಧ ಖಾದ್ಯಗಳನ್ನು ಕಡ್ಡಾಯವಾಗಿ ಮಾಡಿಸುತ್ತಾರೆ. ಪನೀರ್ ಅನ್ನು ಹೆಚ್ಚು ಇಷ್ಟಪಟ್ಟು ಸೇವನೆ ಮಾಡುತ್ತಾರೆ.

Paneer dish is empty in the wedding house, guest's quarrel Video viral
Image Credit to Original Source

 

ಇದನ್ನೂ ಓದಿ : LPG EKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

ಪನೀರ್ ಗಾಗಿ ಕಿತ್ತಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಸಾಕಷ್ಟು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ. ಪನೀರ್ ಗಾಗಿ ನಡೆದಿರುವ ಜಗಳವನ್ನು ಮೂರನೇ ಮಹಾಯುದ್ದಕ್ಕೆ ಹೋಲಿಕೆ ಮಾಡಿದ್ದಾರೆ. ಇನ್ನೂ ಕೆಲವರು ಕೇವಲ ಪನೀರ್ ಗಾಗಿ ಹೊಡೆದಾಡಿ ಕೊಂಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Paneer dish is empty in the wedding house, guest's quarrel Video viral
Image Credit to Original Source

ಇದನ್ನೂ ಓದಿ : 4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ಇನ್ನು ಪನ್ನೀರ್‌ಗೆ ಭಾರತೀಯ ಖಾದ್ಯಗಳಲ್ಲಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 2022 ರಲ್ಲಿ, ವಿಶ್ವದ ಅತ್ಯುತ್ತಮ ‘ಸಾಂಪ್ರದಾಯಿಕ’ ಖಾದ್ಯಗಳಲ್ಲಿ, ಭಾರತದ ಶಾಹಿ ಪನೀರ್ ಮಾತ್ರ ಟೇಸ್ಟ್ ಅಟ್ಲಾಸ್ ವಿಶ್ವದ ಅತ್ಯುತ್ತಮ ಭಕ್ಷ್ಯಗಳಲ್ಲಿ 28 ನೇ ಸ್ಥಾನ ಪಡೆದುಕೊಂಡಿದೆ. ಅದ್ರಲ್ಲೂ ದೆಹಲಿಯ ಕೇಕೆ ಡಾ ಹೋಟೆಲ್‌ನ ಶಾಹಿ ಪನೀರ್ 5 ರಲ್ಲಿ 4.66 ಸ್ಟಾರ್‌ ರೇಟಿಂಗ್‌ ಪಡೆದುಕೊಂಡಿದೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ…

Paneer dish is empty in the wedding house, guest’s quarrel Video viral

Comments are closed.