ಭಾನುವಾರ, ಏಪ್ರಿಲ್ 27, 2025
HomeSportsCricketಭಾರತ - ದಕ್ಷಿಣ ಆಫ್ರಿಕಾ ಟೆಸ್ಟ್‌ ಪಂದ್ಯಕ್ಕೆ ಮಳೆಯ ಆತಂಕ : ಐತಿಹಾಸಿಕ ಗೆಲುವು ದಾಖಲಿಸುತ್ತಾ...

ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್‌ ಪಂದ್ಯಕ್ಕೆ ಮಳೆಯ ಆತಂಕ : ಐತಿಹಾಸಿಕ ಗೆಲುವು ದಾಖಲಿಸುತ್ತಾ ರೋಹಿತ್‌ ಶರ್ಮಾ ಪಡೆ

- Advertisement -

India-South Africa 1st Test match : ಭಾರತ – ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ನಾಳೆ ಆಡಲಿದೆ. ಸೆಂಚುರಿಯನ್ ಮೈದಾನದಲ್ಲಿ ನಡೆಯುವ ಟೆಸ್ಟ್‌ ಪಂದ್ಯಕ್ಕೆ ವಿರಾಟ್‌ ಕೊಹ್ಲಿ(Virat Kohli)  ಅಲಭ್ಯರಾಗಿದ್ದಾರೆ. ಆದರೂ ಭಾರತ ತಂಡ ಮೇಲ್ನೋಟಕ್ಕೆ ಬಲಿಷ್ಟವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ದ ಐತಿಹಾಸಿಕ ಗೆಲುವಿನ ಕನಸು ಕಾಣುತ್ತಿದೆ. ಆದರೆ ಮೊದಲ ಟೆಸ್ಟ್‌ ಪಂದ್ಯಕ್ಕೆ ಮಳೆಯ ಆತಂಕ ಶುರುವಾಗಿದೆ.

India-South Africa 1st Test match Rohit Sharma Team record a historic win, Rain Alert Weather Report
Image Credit to Original Source

ದಕ್ಷಿಣ ಆಫ್ರಿಕಾದಲ್ಲಿ ಭಾರತ ಇದುವರೆಗೆ ಟೆಸ್ಟ್‌ ಸರಣಿಯನ್ನು ಗೆಲ್ಲಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ಶ್ರೀಲಂಕಾ ತಂಡಗಳು ಮಾತ್ರವೇ ಟೆಸ್ಟ್‌ ಸರಣಿ ಗೆದ್ದ ಸಾಧನೆಯನ್ನು ಮಾಡಿವೆ. ಆದ್ರೀಗ ಭಾರತ ತಂಡಕ್ಕೆ ಈ ಬಾರಿಯ ಪ್ರವಾಸ ಐತಿಹಾಸಿಕ ಸಾಧನೆಗೆ ವೇದಿಕೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತ ಒಟ್ಟು 23 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಆದರೆ ಈ ಪೈಕಿ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಲ್ಲಿ ಮಾತ್ರವೇ ಅತೀ ಹೆಚ್ಚು ಗೆಲುವಿನ ದಾಖಲೆಯನ್ನು ಹೊಂದಿವೆ.. ಭಾರತ ದಕ್ಷಿಣ ಆಫ್ರಿಕಾದ ನೆಲದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ.

2013ರಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿತ್ತು. ಈ ಪಂದ್ಯದಲ್ಲಿ ಜಸ್ಪ್ರೀತ್‌ ಬೂಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಮಿಂಚಲಿಲ್ಲ. ಆದರೆ ಮೊಹಮ್ಮದ್‌ ಸೆಮಿ ಆರು ವಿಕೆಟ್‌ ಪಡೆದು ಮಿಂಚಿದ್ದರು. ಸದ್ಯ ಭಾರತ ತಂಡ ವಿರಾಟ್‌ ಕೊಹ್ಲಿ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದೆ. ವಿರಾಟ್‌ ಕೊಹ್ಲಿ ಅವರ ಸೇವೆಯನ್ನು ಟೀಂ ಇಂಡಿಯಾ ಮಿಸ್‌ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಿಯಲ್‌ ಕಿಂಗ್‌ ! 25 ವರ್ಷದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಆದ ಕ್ರಿಕೆಟಿಗ ಕಿಂಗ್‌ ಕೊಹ್ಲಿ

ಋತುರಾಜ್‌ ಗಾಯಕ್ವಾಡ್‌ ಸದ್ಯ ಬೆರಳಿನ ಗಾಯದ ಹಿನ್ನೆಲೆಯಲ್ಲಿ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಶುಭಮನ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ರೋಹಿತ್‌ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾ ಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಕೆಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಲಿದ್ದಾರೆ. ಭಾರತ ತಂಡ ಈ ಬಾರಿ ಬ್ಯಾಟಿಂಗ್‌ಗಿಂತಲೂ ಬೌಲಿಂಗ್‌ ವಿಭಾಗವೇ ಹೆಚ್ಚು ಬಲಿಷ್ಟವಾದಂತಿದೆ.

ದಕ್ಷಿಣ ಆಫ್ರಿಕಾ ತಂಡ ಕೂಡ ಯುವ ಆಟಗಾರರನ್ನೇ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಿದೆ. ಸದ್ಯ ಡೀನ್‌ ಎಲ್ಗರ್‌ ದಕ್ಷಿಣ ಆಫ್ರಿಕಾ ತಂಡದ ಹಿರಿಯ ಆಟಗಾರ. ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರು ಮೊದಲ ಟೆಸ್ಟ್‌ ಆಡುವುದು ಇನ್ನೂ ಖಚಿತವಾಗಿಲ್ಲ. ಈ ಇಬ್ಬರೂ ಆಟಗಾರರು ಕಣಕ್ಕೆ ಇಳಿದ್ರೆ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚು ಬಲಿಷ್ಠವಾಗಲಿದೆ.

ಏಕದಿನ ವಿಶ್ವಕಪ್‌ ಸೋಲಿನ ಬೆನ್ನಲ್ಲೇ ಭಾರತದ ರೋಹಿತ್‌ ಶರ್ಮಾ ಹಾಗೂ ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ ಮುಖಾಮುಖಿಯಾಗಲಿದ್ದಾರೆ. ಮೊದಲ ಟೆಸ್ಟ್‌ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಮೊದಲ ದಿನಕ್ಕೆ 96% ಮತ್ತು ಎರಡನೇ ದಿನಕ್ಕೆ 88% ಮಳೆ ಮುನ್ಸೂಚನೆಯಿದೆ.

India-South Africa 1st Test match Rohit Sharma Team record a historic win, Rain Alert Weather Report
Image Credit to Original Source

ಇದನ್ನೂ ಓದಿ : ಸಿಎಸ್‌ಕೆ ತಂಡಕ್ಕೆ ನಾಯಕ ಯಾರು ? ಧೋನಿ ವಿಚಾರದಲ್ಲಿ CSK CEO ಕೊಟ್ರು ಗುಡ್‌ನ್ಯೂಸ್‌

ಪಂದ್ಯ ಯಾವಾಗ : ಡಿಸೆಂಬರ್ 26 ರಿಂದ 30, 2023; ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ (ಮಧ್ಯಾಹ್ನ 1.30 IST)

ಎಲ್ಲಿ: ಸೆಂಚುರಿಯನ್

ತಂಡಗಳ ಬಲಾಬಲ :

ಭಾರತ :
ಟೀಂ ಇಂಡಿಯಾದ ಆರಂಭಿಕ ಆಟಗಾರ ರುತುರಾಜ್‌ ಗಾಯಕ್ವಾಡ್‌ ಬೆರಳಿನ ಗಾಯದ ಹಿನ್ನೆಲೆಯಲ್ಲಿ ಟೆಸ್ಟ್‌ ಸರಣಿಯನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆ. ರುತುರಾಜ್‌ ಗಾಯಕ್ವಾಡ್‌ ಬದಲು ಅಭಿಮನ್ಯು ಈಶ್ವರನ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್‌ ಕೊಹ್ಲಿ ಕೂಡ ಭಾರತಕ್ಕೆ ವಾಪಾಸಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಸೆಮಿ ಪಾದದ ಸಮಸ್ಯೆ ಎದುರಿಸುತ್ತಿದ್ದು, ಪ್ರಸಿದ್ದ ಕೃಷ್ಣ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ಸಂಭಾವ್ಯ XI: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

India-South Africa 1st Test match Rohit Sharma Team record a historic win, Rain Alert Weather Report
Image Credit to Original Source

ಇದನ್ನೂ ಓದಿ : ಐಪಿಎಲ್ 2024 : ಡೆಲ್ಲಿ ಕ್ಯಾಪಿಟಲ್ಸ್ ಗೆ 18 ಕೋಟಿ ರೂ.ಗೆ ಸೂರ್ಯಕುಮಾರ್ ಯಾದವ್ ಸೇಲ್‌

ದಕ್ಷಿಣ ಆಫ್ರಿಕಾ :
ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬೌಲರ್‌ಗಳಾಗಿರುವ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರು ಆಡುವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಡೇವಿಡ್ ಬೆಡಿಂಗ್‌ಹ್ಯಾಮ್ ಪದಾರ್ಪಣೆ ಪಂದ್ಯವನ್ನಾಡಲು ಸಿದ್ದವಾಗಿದ್ದಾರೆ. ಕಳೆದ ಎರಡು ಟೆಸ್ಟ್‌ ಸರಣಿಯನ್ನು ಮಿಸ್‌ ಮಾಡಿಕೊಂಡಿದ್ದ ಕೈಲ್ ವೆರ್ರೆನ್ ಭಾರತ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ದಕ್ಷಿಣ ಆಫ್ರಿಕಾ ಸಂಭವನೀಯ XI: ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ಲುಂಗಿ ಎನ್ಗಿಡಿ

India-South Africa 1st Test match: Rohit Sharma Team record a historic win, Rain Alert Weather Report

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular