ಕರ್ನಾಟಕದಲ್ಲಿ 8 ಮಂದಿಗೆ ಕೊರೊನಾ ರೂಪಾಂತರಿ JN1 ಸೋಂಕು ದೃಢ

Karnataka 8 Covid-19 variant JN1 : ಬೆಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ರೂಪಾಂತರಿ JN1 ಸೋಂಕು ಕರ್ನಾಟಕಕಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಇದೀಗ 8 ಮಂದಿಗೆ ಕೊರೊನಾ ರೂಪಾಂತರಿ JN1 ಇರುವುದು ದೃಢಪಟ್ಟಿದೆ.

Karnataka 8 Covid-19 variant JN1 : ಬೆಂಗಳೂರು : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ರೂಪಾಂತರಿ JN1 ಸೋಂಕು ಕರ್ನಾಟಕಕಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಇದೀಗ 8 ಮಂದಿಗೆ ಕೊರೊನಾ ರೂಪಾಂತರಿ JN1 ಇರುವುದು ದೃಢಪಟ್ಟಿದೆ. ಈ ಕುರಿತು ಆರೋಗ್ಯ ಇಲಾಕೆ ಮಾಹಿತಿಯನ್ನು ಕೊಟ್ಟಿದೆ.

ಕೇರಳ ರಾಜ್ಯದಲ್ಲಿ ಅಟ್ಟಹಾಸ ಮೆರೆದಿದ್ದ ಕೋವಿಡ್‌ ರೂಪಾಂತರಿ JN1 ಮಹಾಮಾರಿ ಕರ್ನಾಟಕದಲ್ಲಿ ಪತ್ತೆಯಾಗಿರುವುದು ಕರ್ನಾಟಕದ ಆರೋಗ್ಯ ಇಲಾಖೆಗೆ ತಲೆನೋವು ತರಿಸಿದೆ. ಕರ್ನಾಟಕದಲ್ಲಿ ಇದೀಗ ಎಂಟು ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ JN1 ಪ್ರಕರಣಗಳ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ.

Karnataka 8 people have been infected with Covid-19 variant JN1 Says Karnataka Health Department
Image Credit to Original Source

ಭಾರತದಲ್ಲಿ ಇದೀಗ ಹೊಸದಾಗಿ ಕೋವಿಡ್-19 ರೂಪಾಂತರ JN.1 ಒಟ್ಟು 63 ಪ್ರಕರಣ ದಾಖಲಾಗಿವೆ. ಅದ್ರಲ್ಲೂ ದೇಶದಲ್ಲಿಯೇ ಗೋವಾದಲ್ಲಿ ಅತೀ ಹೆಚ್ಚು ಕೋವಿಡ್‌ ಪ್ರಕರಣ ದಾಖಲಾಗಿದೆ. ಗೋವಾದಲ್ಲಿ 34 ಹೊಸ ಪ್ರಕರಣ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. . ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಭಾರತದಲ್ಲಿ ಒಟ್ಟು 4,054 ಕೋವಿಡ್‌ ಸಕ್ರೀಯ ಪ್ರಕರಣಗಳಿವೆ.

ಭಾರತದಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,33,334 (5.33 ಲಕ್ಷ)ಕ್ಕೆ ಏರಿಕೆಯಾಗಿದೆ. ಇನ್ನು ಕೇರಳ ರಾಜ್ಯದಲ್ಲಿ ಕಳೆದ 24  ಗಂಟೆಗಳ ಅವಧಿಯಲ್ಲಿ ಒಂದು ಸಾವು ದೃಢಟಪಟಿದೆ. ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4,50,09,248 (4.50 ಕೋಟಿ) ಏರಿಕೆಯಾಗಿದೆ.

ಇದನ್ನೂ ಓದಿ : ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ? ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ರೂಲ್ಸ್‌

ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,71,860 (4.44 ಕೋಟಿ) ಕ್ಕೆ ಏರಿದೆ ಮತ್ತು ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 98.81 ಪ್ರತಿಶತದಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)JN.1 ರೂಪಾಂತರಕ್ಕೆ ಸಂಬಂಧಿಸಿದಂತೆ ಇದರ ಮೂಲ ವಂಶಾವಳಿ BA.2.86 ನಿಂದ ಭಿನ್ನವಾಗಿದೆ ಎಂದು ಹೇಳಿದೆ.

ಕೋವಿಡ್-19 JN1 ಸ್ಟ್ರೈನ್‌ನ ಲಕ್ಷಣಗಳು

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್‌ ರೂಪಾಂತರ, JN.1ಗೆ ಸಂಬಂಧಿಸಿದಂತೆ ರೋಗಗಳನ್ನು ತಿಳಿಸಿದೆ. ಸಾಮಾನ್ಯವಾಗಿ ಜೆಎನ್‌1 ಸೋಂಕಿಗೆ ತುತ್ತಾದ ವ್ಯಕ್ತಿಯು ಜ್ವರ, ಮೂಗು ಸ್ರವಿಸುವುದು, ಗಂಟಲು ನೋವು ಮತ್ತು ತಲೆನೋವಿನಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ನಾಲ್ಕರಿಂದ ಐದು ದಿನಗಳಲ್ಲಿಯೇ ರೋಗ ಲಕ್ಷಣಗಳು ಉಲ್ಬಣವಾಗುತ್ತದೆ.

Karnataka 8 people have been infected with Covid-19 variant JN1 Says Karnataka Health Department
Image Credit to Original Source

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಇನ್ನು ಹಲವು ರೋಗಿಗಳಲ್ಲಿ ಹಸಿವು ಇಲ್ಲದಿರುವುದು. ವಾಕರಿಗೆ ಪ್ರಮುಖ ಲಕ್ಷಣಗಳಾಗಿ ಗೋಚರಿಸಲಿದೆ. ಇನ್ನು ವಿಪರೀತ ಆಯಾ ಕಂಡು ಬರಲಿದೆ. ಸ್ನಾಯು ದೌರ್ಬಲ್ಯ, ಜಠರ, ಕರುಳಿನ ಸಮಸ್ಯೆಗಳು ಕೂಡ ಕಂಡು ಬರಲಿದೆ. ಇನ್ನು ಇಂತಹ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗುವುದು ಉತ್ತಮ.

JN.1 ಗೆ ಸಂಬಂಧಿಸಿದ ರೋಗಲಕ್ಷಣಗಳು ಇತರ SARS-CoV-2 ರೂಪಾಂತರಿಯ ರೋಗ ಲಕ್ಷಣಗಳನ್ನೇ ಹೋಲುತ್ತದೆ. ಭಾರತದ ಆರೋಗ್ಯ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ, ಇಂತಹ JN.1 ರೋಗ ಲಕ್ಷಣ ಕಂಡು ಬಂದ ವ್ಯಕ್ತಿಗಳು ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯಬಹುದು. ಆದರೆ ಆರೋಗ್ಯ ಪರಿಸ್ಥಿತಿ ಹದಗೆಡುವ ಮುನ್ಸೂಚನೆ ದೊರೆತಾಗ ಕೂಡಲೇ ಆಸ್ಪತ್ರೆಗೆ ದಾಖಲು ಆಡಬೇಕು.

ಇದನ್ನೂ ಓದಿ : ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಾಪಾಸ್‌ : ಸಿಎಂ ಸಿದ್ದರಾಮಯ್ಯ ಘೋಷಣೆ

Karnataka 8 people have been infected with Covid-19 variant JN1 Says Karnataka Health Department

Comments are closed.