Kinetic e Luna Launched : ಒಂದು ಕಾಲದಲ್ಲಿ ಕೈನೆಟಿಕ್ ಸ್ಕೂಟರ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಕೈನೆಟಿಕ್ ಸ್ಕೂಟರ್ ಹೊಂದಿದವರು ಹೆಮ್ಮೆಯಿಂದ ಬೀಗುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಕೂಟರ್ ಡಿಮ್ಯಾಂಡ್ ಕಡಿಮೆಯಾಗಿತ್ತು. ಇದೀಗ ಕೈನೆಟಿಕ್ ಕಂಪೆನಿ ಕೈನೆಟಿಕ್ ಇ ಲೂನಾ (Kinetic e Luna) ಬಿಡುಗಡೆ ಮಾಡಲು ಸಜ್ಜಾಗಿದೆ.

ಭಾರತದಲ್ಲಿ ಫೆಬ್ರವರಿ 7 ರಂದು ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ಆವೃತ್ತಿ ಬಿಡುಗಡೆ ಆಗಲಿದೆ. ಲೂನಾ 50kmph ಗರಿಷ್ಠ ವೇಗ ಮತ್ತು 110km ಮೈಲೇಜ್ ಹೊಂದಿರಲಿದೆ. ಕೈನೆಟಿಕ್ ಗ್ರೀನ್ ಜನಪ್ರಿಯ ಲೂನಾ ಮೊಪೆಡ್ ಇ-ಲೂನಾದ ಎಲೆಕ್ಟ್ರಿಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.
ಇ-ಲೂನಾದ ಬುಕಿಂಗ್ ಅನ್ನು ಜನವರಿ 26 ರಂದು ರೂ 500 ಟೋಕನ್ ಮೊತ್ತಕ್ಕೆ ತೆರೆಯಲಾಗಿದೆ. ಆದರೆ ಇ-ಲೂನಾದ ತಾಂತ್ರಿಕ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 50kmph ಗರಿಷ್ಠ ವೇಗ ಮತ್ತು 110km ಮೈಲೇಜ್ ನೀಡಲಿದೆ ಎನ್ನಲಾಗುತ್ತಿದೆ. ಕೈನೆಟಿಕ ಗ್ರೀನ್ ಹೊಸ ಇ ಲೂನಾ ಮೊಪೆಡ್ ಲಾಂಚ್ ಮಾಡುತ್ತಿದೆ.
ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭಗೊಂಡಿದ್ದು, ಗ್ರಾಹಕರು ಕೇವಲ 500 ರೂಪಾಯಿ ಹಣವನ್ನು ನೀಡುವ ಮೂಲಕ ಇ ಲೂನಾ ಬುಕ್ಕಿಂಗ್ ಮಾಡಬಹುದಾಗಿದೆ. ಈ ಲೂನಾದ ಬೆಲೆ 50 ಸಾವಿರ ದಿಂದ 70ಸಾವಿರ ರೂಪಾಯಿ ಇರಲಿದೆ.
ಇದನ್ನೂ ಓದಿ : ಜಾಗತಿಕವಾಗಿ ಲಾಂಚ್ ಆಗಿದೆ ಹೊಸ ಆವೃತ್ತಿಯ ಹಿಮಾಲಯನ್ ಮೋಟಾರ್ ಸೈಕಲ್: ಇಲ್ಲಿದೆ ವಿಶೇಷತೆ
ಈ ಹಿಂದೆಯೇ ಪ್ಲಿಪ್ ಕಾರ್ಟ್, ಅಮೇಜಾನ್ ಈ ಕಾಮರ್ಸ್‌ಸೈಟ್‌ಗಳಲ್ಲಿ ಬೆಲೆ ಸೋರಿಕೆಯಾಗಿತ್ತು. ಇನ್ನು ಕೈನೆಟಿಕ್ ಇ ಲೂನಾ ಹೆಚ್ಚು ಆಕರ್ಷಕವಾಗಿದೆ. 1970 ರಲ್ಲಿ ಆರಂಭಗೊಂಡ ಲೂನಾ ಮೊಪೆಡ್ ಮಾರುಕಟ್ಟೆಯಲ್ಲಿ ಅಂದಿನ ಕಾಲದಲ್ಲಿ ಪ್ರತಿನಿತ್ಯವೂ 2000 ಕ್ಕೂ ಅಧಿಕ ಲೂನಾ ಮೊಪೆಡ್ ಅನ್ನು ಕಂಪೆನಿ ಮಾರಾಟ ಮಾಡುತ್ತಿತ್ತು.
ಕಾಲ ಕ್ರಮೇಣ ಲೂನಾ ಮೊಪೆಡ್ ಪೈಪೋಟಿಯ ಹೊಡೆತಕ್ಕೆ ಸಿಲುಕಿತ್ತು. ಇದೀಗ ಮತ್ತೆ ಲೂನಾ ಇಲೆಕ್ಟ್ರಿಕ್ ಆವೃತ್ತಿಯ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಹಾರಾಷ್ಟ್ರದಲ್ಲಿ ತಯಾರಿಕಾ ಘಟಕವನ್ನು ಹೊಂದಿದ್ದು, ನಿತ್ಯವೂ 5000 ಕ್ಕೂ ಅಧಿಕ ದ್ವಿಚಕ್ರ ವಾಹನ ತಯಾರಿಕಾ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್
ನಗರ ಪ್ರದೇಶಗಳಲ್ಲಿ ಈ ಕೈನೆಟಿಕ್ ಲೂನಾ ಗ್ರಾಹಕರನ್ನು ಹೆಚ್ಚಾಗಿ ಸೆಳೆಯುವ ಸಾಧ್ಯತೆಯಿದೆ. ಮೆಟ್ರೋ ನಗರಗಳನ್ನು ಮಾತ್ರವಲ್ಲದೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಜನರನ್ನು ಗುರಿಯಾಗಿಟ್ಟುಕೊಂಡು ಕೈನೆಟಿಕ್ ಕಂಪೆನಿ ಹೊಸ ಲೂನಾವನ್ನು ವಿನ್ಯಾಸಗೊಳಿಸಿದೆ.
ಇದನ್ನೂ ಓದಿ :ಕೇವಲ 21,000ಕ್ಕೆ ಬುಕ್ ಮಾಡಿ ಟಾಟಾ ಟಿಯಾಗೋ, ಟಾಟಾ ಟಿಗರ್ CNG AMT
ಕೈನೆಟಿಕ್ ಇ-ಲೂನಾ ಬೆಲೆಯು ಸುಮಾರು 70,000 ರೂ (ಎಕ್ಸ್ ಶೋ ರೂಂ) ಇರಲಿದೆ. ಸದ್ಯ ಈ ಲೂನಾ ಬೆಲೆ ಹಾಗೂ ತಂತ್ರಜ್ಞಾನಕ್ಕೆ ಹೋಲಿಕೆ ಮಾಡಿದ್ರೆ ಸದ್ಯ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. ಮಹಿಳೆಯರು ಹಾಗೂ ಪುರುಷರು ಈ ಲೂನಾವನ್ನು ಹೆಚ್ಚಾಗಿ ಖರೀದಿಸುವ ಸಾಧ್ಯತೆಯಿದೆ.
Electric Kinetic e Luna Launched on February 7 Super Low Price, Super Mileage