ದಿನಭವಿಷ್ಯ 01 ಫೆಬ್ರವರಿ 2024: ದ್ವಾದಶ ರಾಶಿಗಳ ಮೇಲೆ ಚಿತ್ರಾ ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಶುಭ

Horoscope Today 01 February 2024 : ದಿನಭವಿಷ್ಯ 01 ಫೆಬ್ರವರಿ 2024ಗುರುವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂದು ಚಿತ್ರಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಚಂದ್ರ ಕನ್ಯಾರಾಶಿಯಿಂದ ತುಲಾರಾಶಿಗೆ ಸಾಗುತ್ತಾನೆ.

Horoscope Today 01 February 2024 : ದಿನಭವಿಷ್ಯ 01 ಫೆಬ್ರವರಿ 2024ಗುರುವಾರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂದು ಚಿತ್ರಾ ನಕ್ಷತ್ರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಚಂದ್ರ ಕನ್ಯಾರಾಶಿಯಿಂದ ತುಲಾರಾಶಿಗೆ ಸಾಗುತ್ತಾನೆ. ಅದ್ರಲ್ಲೂ ಕೆಲವು ರಾಶಿಗಳಿಗೆ ಇಂದು ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ ಇರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Daily Horoscope) ಹೇಗಿದೆ.

ಮೇಷರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಉದ್ಯೋಗ ಸ್ಥಳದಲ್ಲಿ ಗೌರವ ದೊರೆಯಲಿದೆ. ಮೇಲಾಧಿಕಾರಿಗಳ ಪ್ರಶಂಸೆಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಅಧಿಕ ಲಾಭ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಕುಟುಂಬದಲ್ಲಿ ನೆಮ್ಮದಿ. ಉದ್ಯೋಗ ಸ್ಥಾನದ ಬದಲಾವಣೆ.

ವೃಷಭರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಆದಾಯದ ವೃದ್ದಿಯಾಗುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಕಾರ್ಯದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಎಲ್ಲಾ ಕೆಲಸ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡಬೇಕು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚುವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ನಿಮ್ಮ ಮನಸಿಗೆ ಇಂದು ನೆಮ್ಮದಿ ದೊರೆಯಲಿದೆ. ಕೆಲಸ ಕಾರ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ನಿಮ್ಮದಾಗಲಿದೆ. ಆಸ್ತಿ ಖರೀದಿಗೆ ವ್ಯವಹಾರದಿಂದ ಲಾಭ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ. ದೂರ ಪ್ರಯಾಣದಿಂದ ಅನುಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ವೈವಾಃಹಿಕ ಜೀವನದಲ್ಲಿ ಕಿರಿಕಿರಿ. ಕೌಟುಂಬಿಕವಾಗಿ ವಾದ ವಿವಾದಗಳನ್ನು ಮಾಡಬೇಡಿ. ವ್ಯವಹಾರ ಕ್ಷೇತ್ರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮಾತುಗಳ ಮೇಲೆ ನಿಯಂತ್ರಣ ಇರಲಿ. ಭಿನ್ನಾಭಿಪ್ರಾಯ ಹೆಚ್ಚಳವಾಗದಂತೆ ಎಚ್ಚರಿಕೆಯನ್ನು ವಹಿಸಿ. ಮೇಲಾಧಿಕಾರಿಗಳ ಜೊತೆಗೆ ಹೊಂದಾಣಿಕೆ ಇರಲಿ.

Horoscope Today 01 February 2024 Zodiac Sign
Image Credit to Original Source

ಸಿಂಹರಾಶಿ ದಿನಭವಿಷ್ಯ
ಆರೋಗ್ಯದ ಕಡೆಗೆ ಗಮನ ಹರಿಸಿ. ತೊಂದರೆಗಳನ್ನು ಎದುರಿಸುವ ಸಾಧ್ಯತೆಯಿದೆ. ಗಂಭೀರ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತೀರಿ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿಯೂ ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕನ್ಯಾರಾಶಿ ದಿನಭವಿಷ್ಯ
ಹೂಡಿಕೆಯ ವಿಚಾರದಲ್ಲಿ ವ್ಯಾಪಾರಿಗಳು ಇಂದು ಎಚ್ಚರವಾಗಿ ಇರಬೇಕು. ಹೊಸ ಕಾರ್ಯಕ್ಷೇತ್ರದಲ್ಲಿ ಇಂದು ಹೆಚ್ಚು ಲಾಭವನ್ನು ಪಡೆಯುತ್ತೀರಿ. ಧಾರ್ಮಿಕ ಕ್ಷೇತ್ರ, ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ಸ್ನೇಹಿತರಿಂದ ನಿಮಗೆ ಇಂದು ಬೆಂಬಲ ದೊರೆಯಲಿದೆ.

ಇದನ್ನೂ ಓದಿ : ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಐಸಿಯು ಸೇರಿದ್ದೇಕೆ ? ಹೇಗಿದೆ ಆರೋಗ್ಯ ಸ್ಥಿತಿ

ತುಲಾರಾಶಿ ದಿನಭವಿಷ್ಯ

ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ರಾಯರ ದರ್ಶನದಿಂದ ಸಮಸ್ಯೆಗಳಿಗೆ ಪರಿಹಾರ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ದೂರ ಪ್ರಯಾಣದಿಂದ ಲಾಭ. ಮೇಲಾಧಿಕಾರಿಗಳ ಜೊತೆಗೆ ಹೊಂದಾಣಿಕೆ ಅತೀ ಮುಖ್ಯ.

ವೃಶ್ಚಿಕರಾಶಿ ದಿನಭವಿಷ್ಯ
ಗಂಭೀರ ಕಾಯಿಲೆ ನಿಮ್ಮನ್ನು ಬಾಧಿಸುವ ಸಾಧ್ಯತೆಯಿದೆ. ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಅನೇಕ ವಿಚಾರಗಳಲ್ಲಿ ಇಂದು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ದೂರದ ಊರಿನಿಂದ ಕೆಟ್ಟ ಸುದ್ದಿಯೊಂದನ್ನು ಕೇಳುವ ಸಾಧ್ಯತೆಯಿದೆ. ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸುವಿರಿ.

ಧನಸ್ಸುರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳ ಹೊರೆ ಹೆಚ್ಚಲಿದೆ. ವೈವಾಹಿಕ ಸಂಬಂಧಗಳಿಗೆ ಸಂಬಂಧಿಸಿದಂತೆ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಮನಸ್ಸಿನಲ್ಲಿನ ಗೊಂದಲಗಳು ನಿವಾರಣೆಯಾಗಲಿದೆ. ಮಾನಸಿಕವಾದ ಒತ್ತಡವನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಕಾರ್ಯವನ್ನು ಧೈರ್ಯದಿಂದ ಮಾಡಿ.

ಇದನ್ನೂ ಓದಿ : ಕೇವಲ 500 ರೂಪಾಯಿಗೆ ಬುಕ್‌ ಮಾಡಿ ಕೈನೆಟಿಕ್ ಇ ಲೂನಾ : ಭಾರತದಲ್ಲಿ ಫೆಬ್ರವರಿ 7ಕ್ಕೆ ಲಾಂಚ್‌

ಮಕರರಾಶಿ ದಿನಭವಿಷ್ಯ
ಒಡಹುಟ್ಟಿದವರ ಸಂಪೂರ್ಣ ಸಹಕಾರ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಜೀವನದಲ್ಲಿ ಪ್ರಗತಿ ದೊರೆಯಲಿದೆ. ಹೊಸ ವ್ಯವಹಾರ ಆರಂಭಿಸಲು ಇದು ಸಕಾಲ. ದೂರ ಪ್ರಯಾಣ ಲಾಭದಾಯಕವಾಗಲಿದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಕುಂಭರಾಶಿ ದಿನಭವಿಷ್ಯ
ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಬಗೆ ಹರಿಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ವೈವಾಹಿಕ ಜೀವನವು ಉತ್ತಮವಾಗಿ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಸಂಗಾತಿಯ ಆರೋಗ್ಯ ಸುಧಾರಣೆಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮೀನರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಎದುರಾಗಲಿದೆ. ವಿವಾದವು ಇಂದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ವ್ಯಾಪಾರಿಗಳು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮನೆಯಲ್ಲಿ ಹಿರಿಯರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ದೂರದ ಬಂಧುಗಳ ಆಗಮನದಿಂದ ಮನಸಿಗೆ ನೆಮ್ಮದಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

Horoscope Today 01 February 2024 Zodiac Sign

Comments are closed.