ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 21-07-2020

ನಿತ್ಯಭವಿಷ್ಯ : 21-07-2020

- Advertisement -

ಮೇಷರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಿರಿ. ಯಾವುದೇ ಕೆಲಸದ ಬಗ್ಗೆ ನಿರ್ಣಯವನ್ನು ಜಾಗ್ರತೆಯಿಂದ ಪರಿಶೀಲಿಸಿ ಮುಂದುವರಿಯಿರಿ. ಕಾರ್ಯರಂಗದಲ್ಲಿ ತೊಡಕುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿರಿ. ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ, ಶತ್ರುಗಳ ಬಾಧೆ, ಅಧಿಕವಾದ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ.

ವೃಷಭರಾಶಿ
ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ವೃತ್ತಿರಂಗದಲ್ಲಿ ನೆಮ್ಮದಿ ತೋರಿಬಂದರೂ ನಿಮ್ಮ ವಿರೋಧಿಗಳಿಂದ ಕಿರಿಕಿರಿ ತಪ್ಪಲಾರದು. ಶುಭ ಕಾರ್ಯಗಳಿಗೆ ಸಂಬಂಧ ಪಟ್ಟ ಚಟುವಟಿಕೆ, ದುಂದು ವೆಚ್ಚಾದಿಗಳ ಬಗ್ಗೆ ಹಿಡಿತ ಸಾಧಿಸಿರಿ. ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಅಕಾಲ ಭೋಜನ.

ಮಿಥುನರಾಶಿ
ಸಹೋದರರಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಪ್ರತಿಕೂಲ ಪರಿಸ್ಥಿತಿ, ಪ್ರಬಲ ವಿರೋಧದ ನಡುವೆಯೂ ನಿಮ್ಮ ಕಾರ್ಯ ಯೋಜನೆಗಳಲ್ಲಿ ಮುನ್ನಡೆ ಇರುತ್ತದೆ. ವೃತ್ತಿರಂಗದಲ್ಲಿ ಹೊಂದಾಣಿಕೆಯಲ್ಲಿ ಮುನ್ನಡೆಯುವುದು ಅಗತ್ಯವಿರುತ್ತದೆ. ಪರಸ್ತ್ರೀಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕರಾಶಿ
ಮನಸ್ಸಿನಲ್ಲಿ ಆತಂಕ, ಚಂಚಲ ಮನಸ್ಸು, ಸರಕಾರೀ ಕೆಲಸದಲ್ಲಿ ಮುನ್ನಡೆ ಇರುತ್ತದೆ. ಹೆಚ್ಚಿನ ವಿಶ್ವಾಸದಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ. ಸಮಯಾಭಾವದಿಂದ ಸಂಚಾರ ಕಾರ್ಯವನ್ನು ಕೈಬಿಡಬೇಕಾದೀತು. ಜಾಗ್ರತೆ. ಭೂ ಲಾಭ, ಶತ್ರುಗಳ ಬಾಧೆ, ನೀವಾಡುವ ಮಾತುಗಳಿಂದ ಕಲಹ.

ಸಿಂಹರಾಶಿ
ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾದೀತು. ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ನಿಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರವಾಗಿ ಸಮಾಧಾನ. ಉತ್ತಮ ಬುದ್ಧಿ ಶಕ್ತಿ, ಋಣ ಬಾಧೆ, ಬೇಡದ ವಿಚಾರಗಳಲ್ಲಿ ಆಸಕ್ತಿ, ಶುಭ ಫಲ ಯೋಗ.

ಕನ್ಯಾರಾಶಿ
ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನಬಲದಿಂದ ಮುನ್ನಡೆ ಕಾಣಿಯಾರು. ಉದ್ಯೋಗ, ವ್ಯವಹಾರಗಳು ಲಾಭಕರವಾಗಲಿವೆ. ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಶುಭವಿದೆ. ಸರಿ ತಪ್ಪುಗಳ ಬಗ್ಗೆ ಅವಲೋಕಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಆಲಸ್ಯ ಮನೋಭಾವ.

ತುಲಾರಾಶಿ
ವಿಧೇಯತೆಯಿಂದ ಯಶಸ್ಸು, ವೃತ್ತಿರಂಗದಲ್ಲಿ ಅತೀ ಶ್ರಮ ಹಾಗೂ ಪ್ರಾಮಾಣಿಕತೆಯಿಂದ ದುಡಿಯುವ ನಿಮಗೆ ಶ್ರೇಯಸ್ಸಿದೆ. ಪದೇ ಪದೇ ಕಂಡು ಬರುವ ಕೌಟುಂಬಿಕ ಸಮಸ್ಯೆಗಳಿಂದ ಆತಂಕಗಳು ಎದುರಾದರೂ ತಾಳ್ಮೆ ವಹಿಸಿರಿ. ಅನಾವಶ್ಯಕ ಮಾತುಗಳಿಂದ ಕಲಹ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.

ವೃಶ್ಚಿಕರಾಶಿ
ಮಾನಸಿಕ ಒತ್ತಡ, ಆರೊಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕವಾಗಿ ಹಾಗೂ ವ್ಯಾವಹಾರಿಕವಾಗಿ ಹಲವಾರು ತರದ ಖರ್ಚು ವೆಚ್ಚಗಳಿಂದ ನೀವು ಸ್ವಲ್ಪ ಅಡಚಣೆಗೆ ಸಿಲುಕುವ ಸಂಭವವಿದೆ. ಕೌಟುಂಬಿಕವಾಗಿ ಪತ್ನಿ, ಮಕ್ಕಳ ಸಹಕಾರ ನಿಮಗೆ ಶ್ರೀರಕ್ಷೆ. ವಿದ್ಯಾರ್ಥಿಗಳಲ್ಲಿ ಸಮಸ್ಯೆ, ಮಿತ್ರರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಧನಸ್ಸುರಾಶಿ
ಸ್ತ್ರೀಯರಿಗೆ ಲಾಭ, ಹಣಕಾಸು ಸಮಸ್ಯೆ, ಸಮಯಸಾಧಕ ಹಿತಶತ್ರು ಜನರು ನಿಮಗೆ ಸಾಕಷ್ಟು ಕಷ್ಟನಷ್ಟಗಳ ತೊಂದರೆಯನ್ನು ಉಂಟು ಮಾಡಿದರೂ ಅದನ್ನು ಎದುರಿಸುವ ಛಾತಿ ನಿಮಗಿದೆ. ಅಡ್ಡಿ ಆತಂಕಗಳನ್ನು ಹಿಂದೊಡ್ಡಿ ಮುನ್ನಡೆಯಿರಿ. ಸಾಲ ಬಾಧೆ, ವ್ಯವಹಾರಗಳಲ್ಲಿ ಏರುಪೇರು, ಮಾನಸಿಕ ವ್ಯಥೆ, ಗುರುಗಳಿಂದ ಸಲಹೆ, ಮಾತಿನ ಚಕಮಕಿ.

ಮಕರರಾಶಿ
ಥಳುಕಿನ ಮಾತಿಗೆ ಮರುಳಾಗಬೇಡಿ, ನಿಮಗೆ ಅನಿರೀಕ್ಷಿತವಾಗಿ ಪ್ರವಾಸ ಬಂದೊದಗಬಹುದು. ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡಗಳು, ಖರ್ಚುವೆಚ್ಚಗಳ ಹೆಚ್ಚಳ ಆಗಾಗ ಮಾನಸಿಕ ಅಶಾಂತಿಗೆ ಈಡು ಮಾಡಲಿದೆ. ಅಭಿವೃದ್ಧಿ ತೋರಿಬರಲಿದೆ. ನಂಬಿಸಿ ಮೋಸ ಮಾಡುವರು, ಅನಾವಶ್ಯಕ ಖರ್ಚು, ಹಿತ ಶತ್ರುಗಳ ಬಾಧೆ, ಆತ್ಮೀಯರಿಂದ ತೊಂದರೆ.

ಕುಂಭರಾಶಿ
ಅಲ್ಪ ಕಾರ್ಯ ಸಿದ್ಧಿ, ಇಲ್ಲ ಸಲ್ಲದ ಅಪವಾದ, ನಾನಾ ರೀತಿಯಲ್ಲಿ ತೋರಿ ಬರುವ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ನಿಭಾಯಿಸಲು ಧೈರ್ಯದಿಂದ ಮುಂದುವರಿಯಬೇಕು. ಹಾಗೇ ಆರೋಗ್ಯದ ಬಗ್ಗೆ ಆದಷ್ಟು ಜಾಗ್ರತೆಯಲ್ಲಿರುವುದು ಉತ್ತಮ. ಪರರಿಗೆ ಸಹಾಯ, ಯತ್ನ ಕಾರ್ಯದಲ್ಲಿ ಅನುಕೂಲ, ಅತಿಯಾದ ಕೋಪ.

ಮೀನರಾಶಿ
ದೃಷ್ಠಿ ದೋಷದಿಂದ ತೊಂದರೆ, ಉದ್ಯೋಗ, ವ್ಯವಹಾರದಲ್ಲಿ ಧೈರ್ಯದಿಂದ ಮುಂದುವರಿದಲ್ಲಿ ನಿಮ್ಮ ಮನೋಕಾಮನೆಗಳು ಇಷ್ಟಾರ್ಥವನ್ನು ಪಡೆಯಲಿವೆ. ಹಿಂದಿನ ದಿನಗಳಿಗಿಂತ ಎಷ್ಟೋ ಸುಧಾರಣೆ ತೋರಿಬರುವ ದಿನಗಳಿವು. ಮಾನಸಿಕ ವ್ಯಥೆ, ಬಂಧುಗಳಿಂದ ಸಹಕಾರ, ಕೃಷಿಯಲ್ಲಿ ಲಾಭ ಸಾಧ್ಯತೆ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular