Gruhalakshmi, Annabhagya Yojana New rules : ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಡಿ ಕೋಟ್ಯಾಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಮಾರ್ಚ್ 25 ರ ಒಳಗಾಗಿ ಈ ಕೆಲಸವನ್ನು ಮಾಡದೇ ಇದ್ರೆ ಅಂತವರಿಗೆ ಈ ಎರಡು ಯೋಜನೆಗಳ ಪ್ರಯೋಜನ ಸಿಗೋದಿಲ್ಲ. ಅಷ್ಟಕ್ಕೂ ನೀವು ತಪ್ದೇ ಮಾಡಬೇಕಾದ ಕೆಲಸ ಯಾವುದು ಎಂದು ತಿಳಿಯೋಣಾ.

ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ಕೆಲವೊಂದು ಕಾರ್ಯವನ್ನು ಈ ಎರಡು ಯೋಜನೆಗಳ ಫಲಾನುಭವಿಗಳು ತಪ್ಪದೇ ಮಾಡಬೇಕಾಗಿದೆ. ಒಂದೊಮ್ಮೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗೋದಿಲ್ಲ.
ಕರ್ನಾಟಕ ಸರಕಾರದ ಹೊಸ ಆದೇಶದ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್, ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಈ ಕಾರ್ಯವನ್ನು ನೀವು ಮಾಡಿಸದೇ ಇದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗೋದಿಲ್ಲ. ಹೀಗಾಗಿ ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ತೆರಳಿ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಚೆಕ್ ಮಾಡಿ
ಪ್ರತೀ ಭಾರತೀಯರು ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ನೀವು ಆಧಾರ್ ಪಡೆದುಕೊಂಡು ಹತ್ತು ವರ್ಷ ಕಳೆದಿದ್ರೆ ಯಾವುದಕ್ಕೂ ಒಮ್ಮೆ ನಿಮ್ಮ ಕಾರ್ಡ್ ಅನ್ನು ಅಪ್ಡೇಟ್ಸ್ ಮಾಡಿಸಿಕೊಳ್ಳುವುದು ಉತ್ತಮ. ಒಂದೊಮ್ಮೆ ನಿಮ್ಮ ಕಾರ್ಡ್ ಅತ್ಯಂತ ಹಳೆಯದಾಗಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ನೇರವಾಗಿ ವರ್ಗಾವಣೆ ಆಗೋದಿಲ್ಲ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಸೋದು ಅಗತ್ಯ ಇಲ್ಲದೇ ಇದ್ದರೂ ಕೂಡ ನೀವು ಯಾವುದಕ್ಕೂ ಒಮ್ಮೆ ಆಧಾರ್ ಕಾರ್ಡ್ ಅನ್ನು ಅಪ್ಟೇಟ್ಸ್ ಮಾಡಿಸುವುದು ಬಹಳ ಉತ್ತಮ. 2024ರ ಜೂನ್ 14ರ ವರೆಗೆ ಆಧಾರ್ ಕಾರ್ಡ್ ಉಚಿತ ಅಪ್ಟೇಟ್ಸ್‌ಗೆ ಸರಕಾರ ಅವಕಾಶವನ್ನು ನೀಡಿದೆ. ಹೀಗಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಸರಕಾರಿ ನೌಕರರಿಗೆ ಗುಡ್‌ನ್ಯೂಸ್ : 7ನೇ ವೇತನ ಆಯೋಗದ ವರದಿ ಸಲ್ಲಿಕೆ
ಒಂದೊಮ್ಮೆ ನೀವು ಸರಕಾರದ ಆದೇಶದಲ್ಲಿ ನೀಡಲಾಗಿರುವ ಅಂಶಗಳನ್ನು ಪಾಲನೆ ಮಾಡದೇ ಇದ್ರೆ ನಿಮಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ಬರೋದೇ ಇಲ್ಲ. ಯಾವುದಕ್ಕೂ ಒಮ್ಮೆ ನಿಮ್ಮ ಖಾತೆಯ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆಯೇ ಅನ್ನೋದನ್ನು ಒಮ್ಮ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : ವಾಹನ ಸವಾರರಿಗೆ ಮೋದಿ ಭರ್ಜರಿ ಗಿಫ್ಟ್ : ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಬಾರೀ ಇಳಿಕೆ
New rules ! March 25 deadline for Gruhalakshmi, Annabhagya Yojana Do this work without fail