Anna Poorna Scheme : ಸ್ವಾವಲಂಭಿ ಮಹಿಳೆಯರ ಅನುಕೂಲಕ್ಕಾಗಿ ಸರಕಾರಗಳು ಹೊಸ ಹೊಸ ಯೋಜನೆಗಳನ್ನು (Government New Scheme) ಜಾರಿಗೆ ತರುತ್ತಿವೆ. ಅದ್ರಲ್ಲೂ ಮಹಿಳೆಯರಿಗಾಗಿ ಸರಕಾರ ಹೊಸ ಯೋಜನೆ ರೂಪಿಸಿದ್ದು, ಈ ಯೋಜನೆಯ ಅಡಿಯಲ್ಲಿ 50 ಸಾವಿರ ರೂಪಾಯಿ ಆರ್ಥಿಕ ನೆರವು ಪಡೆದು, ಸ್ವತಃ ಉದ್ಯೋಗವನ್ನು ಮಾಡಬಹುದಾಗಿದೆ. ಹಾಗಾದ್ರೆ ಈ ಯೋಜನೆ ಯಾವುದು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಸಲುವಾಗಿಯೇ ಸರಕಾರಗಳು ಆರ್ಥಿಕ ನೆರವು ನೀಡುತ್ತಿವೆ. ಅದ್ರಲ್ಲೂ ಮಹಿಳೆಯರು ಉದ್ಯಮಿಗಳನ್ನಾಗಿಸಲು ಜಾರಿಗೆ ತಂದಿರುವ ಹೊಸ ಯೋಜನೆಯೇ ಅನ್ನಪೂರ್ಣ ಯೋಜನೆ. ನೀವೇನಾದ್ರೂ ಚೆನ್ನಾಗಿ ಅಡುಗೆ ಮಾಡುವವರಾಗಿದ್ರೆ ಈ ಯೋಜನೆಯ ಲಾಭವನ್ನು ಪಡೆದು ಸ್ವ ಉದ್ಯೋಗವನ್ನು ಆರಂಭಿಸಬಹುದಾಗಿದೆ.
ಇದನ್ನೂ ಓದಿ : ಕಾರ್ಮಿಕರಿಗೆ ಸಿಹಿಸುದ್ದಿ: ಏಪ್ರಿಲ್ 1ರಿಂದ ನರೇಗಾ ಕೂಲಿ ದರ ಏರಿಕೆ
ಪಾಕಶಾಸ್ತ್ರದಲ್ಲಿ ಪ್ರವೀಣರಾಗಿರುವ ಮಹಿಳೆಯರು ಅನ್ನಪೂರ್ಣ ಯೋಜನೆಯ ಮೂಲಕ 50 ಸಾವಿರ ರೂಪಾಯಿ ಸಾಲವನ್ನು ಪಡೆದು ಸ್ವತಃ ಹೋಟೆಲ್ ಉದ್ಯಮವನ್ನು (Own Business) ಆರಂಭಿಸಬಹುದಾಗಿದೆ. ಅನ್ನ ಪೂರ್ಣ ಯೋಜನೆಯಡಿಯಲ್ಲಿ ಸಿಗುವ ಸಾಲದಿಂದ ಹೋಟೆಲ್‌ಗೆ ಬೇಕಾಗುವ ಸಲಕರಣೆ ಹಾಗೂ ಗ್ಯಾಸ್ ಖರೀದಿ ಮಾಡಲು ಸಹಕಾರಿಯಾಗಲಿದೆ. ಗ್ರಾಮೀಣ ಹಾಗೂ ನಗರ ಭಾಗದಲ್ಲಿರುವ ಮಹಿಳೆಯರಿಗೆ ಈ ಯೋಜನೆ ಹೆಚ್ಚು ಸಹಕಾರಿಯಾಗಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್
ಸ್ಟೇಟ್ ಬ್ಯಾಂಕ್ ಇಂಡಿಯಾ (State Bank of india) ಅಥವಾ ಮಹಿಳಾ ಬ್ಯಾಂಕ್‌ನಲ್ಲಿ (Womens Bank ) ಖಾತೆಯನ್ನ (Bank Account) ತೆರೆಯುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೇಂದ್ರ ಸರಕಾರ ರೂಪಿಸಿರುವ ಈ ಯೋಜನೆಯಡಿ ಸಿಗುವ ಸಾಲಕ್ಕೆ ರಾಜ್ಯದಿಂದ ರಾಜ್ಯಕ್ಕೆ ಬಡ್ಡಿದರದಲ್ಲಿ ಬದಲಾವಣೆ ಆಗಲಿದೆ. ಒಂದೊಮ್ಮೆ ನೀವು 50 ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ರೆ ನೀವು ಪ್ರತೀ ತಿಂಗಳು 1,388 ರೂಪಾಯಿ ಇಎಂಐ ಪಾವತಿ ಮಾಡಬಹುದಾಗಿದೆ.

ಆರ್ಥಿಕ ಸಂಕಷ್ಟದಿಂದಾಗಿ ಸ್ವತಃ ಉದ್ಯಮ ಆರಂಭಿಸಲು ಸಾಧ್ಯವಾಗದೇ ಇರುವವರು ಅನ್ನಪೂರ್ಣ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಆಹಾರ ಪೂರೈಕೆ ಮಾಡುವ ಆಪ್‌ಗಳನ್ನು ಬಳಸಿಕೊಂಡು ಉದ್ಯಮವನ್ನು ವಿಸ್ತರಣೆ ಮಾಡುವವರಿಗೂ ಕೂಡ ಅನ್ನಪೂರ್ಣ ಯೋಜನೆಯು ಸಹಕಾರಿಯಾಗಲಿದೆ.
ಇದನ್ನೂ ಓದಿ : ಹೊಸ ರೂಲ್ಸ್ ! ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಮಾರ್ಚ್ 25 ಡೆಡ್‌ಲೈನ್ : ತಪ್ಪದೇ ಈ ಕೆಲಸ ಮಾಡಿ ಮುಗಿಸಿ
Kannada News Karnataka Government will get 50 thousand rupees for women who cook deliciously anna Poorna Scheme