ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್‌

Karnataka News Gruha Lakshmi Yojana Big Update : ಏಳನೇ ಕಂತಿನ ಹಣವನ್ನು ಗೃಹಲಕ್ಷ್ಮೀಯರಿಗೆ ಜಮೆ ಮಾಡಿದೆ. ಆದರೆ ಇದೀಗ 8ನೇ ಕಂತಿನ ಹಣ ವರ್ಗಾವಣೆಗೆ ಮೊದಲು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.

Karnataka News Gruha Lakshmi Yojana Big Update : ಗೃಹಲಕ್ಷ್ಮೀ ಯೋಜನೆಯ ಮೂಲಕ ಕೋಟ್ಯಾಂತರ ಮಹಿಳೆಯರು ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಈಗಾಗಲೇ ಏಳನೇ ಕಂತಿನ ಹಣವನ್ನು ಗೃಹಲಕ್ಷ್ಮೀಯರಿಗೆ ಜಮೆ ಮಾಡಿದೆ. ಆದರೆ ಇದೀಗ 8ನೇ ಕಂತಿನ ಹಣ ವರ್ಗಾವಣೆಗೆ ಮೊದಲು ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.

ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ಕುಟುಂಬದ ಯಜಮಾನಿಯರಿಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಕಳೆದ ಏಳು ತಿಂಗಳಿನಿಂದಲೂ ಗೃಹಿಣಿಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಹಲವರಿಗೂ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲ.

Karnataka News Gruha Lakshmi Yojana Big Update for 8th installment Funding New rules for receiving funds
Image Credit to Original Source

ಇದೀಗ ಗೃಹಲಕ್ಷ್ಮೀ ಯೋಜನೆಯ 8ನೇ ಕಂತಿನ ಹಣವನ್ನು ಪಡೆಯಬೇಕಾದ್ರೆ ಕಡ್ಡಾಯವಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಆಗುವ ಬ್ಯಾಂಕ್‌ ಖಾತೆಗೆ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು. ಇಕೆವೈಸಿ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಸದೇ ಇರುವವರ ಖಾತೆಗೆ ಹಣ ವರ್ಗಾವಣೆ ಆಗೋದಿಲ್ಲ.

ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ

ಇನ್ನು ಗೃಹಲಕ್ಷ್ಮೀ ಯೋಜನೆಯ 7ನೇ ಕಂತಿನ ಹಣವು ಜಮೆ ಆಗದೇ ಇರುವ ಖಾತೆಗಳಿಗೆ ಶೀಘ್ರದಲ್ಲಿಯೇ ಹಣ ಪಾವತಿ ಆಗಲಿದೆ. ಕರ್ನಾಟಕ ಸರಕಾರ ಜಾರಿಗೆ ತಂದಿರುವ ಡಿಬಿಟಿ ಕರ್ನಾಟಕ ಆಪ್‌ ಡೌನ್‌ಲೋಡ್‌ ಮಾಡಿಕೊಂಡು , ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣ ವರ್ಗಾವಣೆ ಆಗದೇ ಇದ್ರೆ ನೀವು ಕೂಡಲೇ ನೀವು ಸಲ್ಲಿಸಿದ ಅರ್ಜಿಯನ್ನು ಪುನರ್‌ ಪರಿಶೀಲನೆಯನ್ನು ಮಾಡಿಸಿಕೊಳ್ಳುವುದು ತೀರಾ ಮುಖ್ಯ.

Karnataka News Gruha Lakshmi Yojana Big Update for 8th installment Funding New rules for receiving funds
Image Credit to Original Source

ಇದನ್ನೂ ಓದಿ : ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆ ರದ್ದು ! ಏನಿದು ಲೋಕಸಭಾ ಚುನಾವಣಾ ಲೆಕ್ಕಾಚಾರ

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯರು ಮಾತ್ರವೇ 2000 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಂದೊಮ್ಮೆ ಅತ್ತೆ ಮನೆಯ ಯಜಮಾನಿಯಾಗಿದ್ದು, ಅತ್ತೆ ಮರಣ ಹೊಂದಿದ ನಂತರದಲ್ಲಿ ಆ ಕುಟುಂಬದ ಹಿರಿಯ ಸೊಸೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಅವಕಾಶವಿದೆ.

ಈಗಾಗಲೇ ಹೊಸದಾಗಿ ಅರ್ಜಿ ಸಲ್ಲಿಸಲು ಸರಕಾರ ಅವಧಿ ನೀಡಿರುವ ಹಿನ್ನೆಲೆಯಲ್ಲಿ ಮನೆಯ ಸೊಸೆ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಹಣ ಬಾರದೇ ಇರುವವರು ಈ ಯೋಜನೆಯ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪುನರ್‌ ಪರಿಶೀಲನೆ ಮಾಡುವುದು ಒಳಿತು.

ಇದನ್ನೂ ಓದಿ : ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

Karnataka News Gruha Lakshmi Yojana Big Update for 8th installment Funding: New rules for receiving funds

Comments are closed.