LIC Pension Scheme : ಇಂದಿನ ಕಾಲದಲ್ಲಿ ಗಳಿಸಿದ ಒಂದಿಷ್ಟು ಹಣವನ್ನು ಉಳಿತಾಯ ಮಾಡಲೇ ಬೇಕು. ಹೀಗೆ ಉಳಿತಾಯ ಮಾಡಲು ಬ್ಯಾಂಕು, ವಿಮಾ ಕಂಪೆನಿಗಳು, ಶೇರು ಮಾರುಕಟ್ಟೆ ಸೇರಿದಂತೆ ಸಾಕಷ್ಟು ಸಂಸ್ಥೆಗಳಿವೆ. ಆದರೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭವಿದೆ ಅನ್ನೋದನ್ನು ಗಮನ ಹರಿಸಬೇಕಾಗಿದೆ. ಒಂದೊಮ್ಮೆ ನಿಮಗೇನಾದ್ರೂ 40 ವರ್ಷ ವಯಸ್ಸಾಗಿದ್ರೆ ಪ್ರತೀ ತಿಂಗಳು 12 ಸಾವಿರ ರೂಪಾಯಿ ಸಿಗುವ ಫ್ಲಾನ್ ಎಲ್‌ಐಸಿ (LIC) ಜಾರಿಗೆ ತಂದಿದೆ.

ಎಲ್‌ಐಸಿಯ ಸರಳ ಪಿಂಚಣಿ ಯೋಜನೆಯ ಮೂಲಕ 40 ರಿಂದ 80 ವರ್ಷದ ವಯಸ್ಸಿನವರು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಒಂದು ಬಾರಿಗೆ ಠೇವಣಿ ಮಾಡಿ ಮಾಸಿಕ ಕನಿಷ್ಠ 1000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಗರಿಷ್ಠ ಮಿತಿ ನಿಮ್ಮ ಹೂಡಿಕೆಯ ಮೇಲೆ ಅವಲಂಭಿಸಿದೆ.
ಎಲ್‌ಐಸಿಯ ಈ ಯೋಜನೆಯಡಿಯಲ್ಲಿ ಮಾಸಿಕ, 3 ತಿಂಗಳು, 6 ತಿಂಗಳು ಹಾಗೂ ವಾರ್ಷಿಕ ಪಿಂಚಣಿಯನ್ನು ಪಡೆಯುವ ಅವಕಾಶವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿಯನ್ನು ಆರಂಭಿಸಿದ 6 ತಿಂಗಳ ನಂತರದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಒಂದೊಮ್ಮೆ ಪಾಲಿಸಿದಾರ ಅಕಾಲಿಕ ಮರಣ ಹೊಂದಿದ್ರೆ ನಾಮಿನಿ ಹೊಂದಿದವರಿಗೆ ಮೊತ್ತವನ್ನು ನೀಡಲಾಗುತ್ತದೆ.
ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ! ಮೇ 1 ರಿಂದ ಬದಲಾಗಲಿದೆ ಈ 10 ರೂಲ್ಸ್
ಭಾರತ ಪ್ರಮುಖ ವಿಮಾ ಕಂಪೆನಿಯಾಗಿರುವ ಲೈಫ್ ಇನ್ಸ್ಯುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ನೀಡುತ್ತಿರುವ ಪಿಂಚಣಿ ಯೋಜನೆಯ ಬಗ್ಗೆ ನೋಡೋದಾದ್ರೆ. ನೀವು 42 ವರ್ಷ ವಯಸ್ಸಿನವರು ಆಗಿದ್ರೆ ನೀವು ಒಂದು ಬಾರಿಗೆ 30 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ರೆ ನಿಮ್ಮ ಜೀವನದುದ್ದಕ್ಕೂ ಪ್ರತೀ ತಿಂಗಳು 12388 ರೂಪಾಯಿಯನ್ನು ಪಿಂಚಣಿಯಾಗಿ ಪಡೆಯಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ : ಕೇಂದ್ರ ಸರಕಾರದಿಂದ ರೈತರಿಗೆ ಗುಡ್‌ನ್ಯೂಸ್ : ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಕಂತಿನ ಹಣ ಈ ದಿನ ಜಮೆ
ಹಣವನ್ನು ಇತರ ಕಡೆಗಳಿಗೆ ಹೂಡಿಕೆ ಮಾಡುವ ಬದಲು ಎಲ್‌ಐಸಿಯ ಈ ಯೋಜನೆಯಡಿಯಲ್ಲಿ ಅಧಿಕ ಲಾಭವನ್ನು ಪಡೆಯಬಹುದಾಗಿದೆ. 40 ವರ್ಷಕ್ಕೆ ಹಣವನ್ನು ಹೂಡಿಕೆ ಮಾಡಿದ್ರೆ ವಾರ್ಷಿಕ 1,48,656 ರೂಪಾಯಿ, 10 ವರ್ಷಕ್ಕೆ 14,86,560 ರೂಪಾಯಿ. ೩೦ ವರ್ಷಕ್ಕೆ 44,59,680 ರೂಪಾಯಿ ಹಣವನ್ನು ಪಡೆಯಲು ಅವಕಾಶವಿದೆ.
ಇದನ್ನೂ ಓದಿ : ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ, ಈ ದಾಖಲೆಗಳಿದ್ರೆ ಇಂದೇ ಅರ್ಜಿ ಸಲ್ಲಿಸಿ
LIC Pension Scheme Those above 40 years will get 12000 rupees every month!