ಕೇಂದ್ರ ಸರಕಾರದಿಂದ ರೈತರಿಗೆ ಗುಡ್‌ನ್ಯೂಸ್‌ : ಕಿಸಾನ್‌ ಸಮ್ಮಾನ್‌ ಯೋಜನೆಯ 17 ನೇ ಕಂತಿನ ಹಣ ಈ ದಿನ ಜಮೆ

PM-Kisan Samman Nidhi 17th installment Updates : ಕೇಂದ್ರ ಸರಕಾರ ಲೋಕಸಭಾ ಚುನಾವಣೆಯ ಹೊತ್ತಲೇ ರೈತರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿಯಲ್ಲಿ ಈಗಾಗಲೇ ಸರಕಾರದಿಂದ ಸಹಾಯಧನ ಪಡೆಯುತ್ತಿರುವವರ ಖಾತೆಗೆ ಮತ್ತೊಂದು ಕಂತಿನ ಹಣ ಜಮೆ ಆಗಲಿದೆ.

PM-Kisan Samman Nidhi 17th installment Updates : ಕೇಂದ್ರ ಸರಕಾರ ಲೋಕಸಭಾ ಚುನಾವಣೆಯ ಹೊತ್ತಲೇ ರೈತರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿಯಲ್ಲಿ ಈಗಾಗಲೇ ಸರಕಾರದಿಂದ ಸಹಾಯಧನ ಪಡೆಯುತ್ತಿರುವವರ ಖಾತೆಗೆ ಮತ್ತೊಂದು ಕಂತಿನ ಹಣ ಜಮೆ ಆಗಲಿದೆ. ಈಗಾಗಲೇ ಸರಕಾರ PM ಕಿಸಾನ್‌ ಸಮ್ಮಾನ್‌ ಯೋಜನೆಯ (M-Kisan Samman)  ಹಣವನ್ನು ಬಿಡುಗಡೆ ಮಾಡಿದ್ದು, ಯಾವಾಗ ಹಣ ರೈತರ ಖಾತೆಗೆ ಜಮೆ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

PM-Kisan Samman Nidhi 17th installment Updates Good news for farmers from PM Narendra Modi government
Image Credit to Original Source

ಕಿಸಾನ್‌ ಸಮ್ಮಾನ್‌ ಯೋಜನೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿದೆ. ದೇಶದಲ್ಲಿನ ಅನ್ನದಾತರ ಅನುಕೂಲಕ್ಕಾಗಿ ವಾರ್ಷಿಕವಾಗಿ ಮೂರು ಕಂತುಗಳ ಮೂಲಕ ಒಟ್ಟು 6 ಸಾವಿರ ರೂಪಾಯಿಯನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ (DBT)  ಮಾಡಲಾಗುತ್ತಿದೆ. ಈಗಾಗಲೇ 16 ಕಂತುಗಳ ಮೂಲಕ ರೈತರು ಹಣವನ್ನು ಪಡೆದುಕೊಂಡಿದ್ದಾರೆ.

ಕಿಸಾನ್‌ ಸಮ್ಮಾನ್‌ ಯೋಜನೆಯ 17 ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಹಣ ಬಿಡುಗಡೆ ವಿಳಂಭವಾಗುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಚುನಾವಣೆಯ ಹೊತ್ತಲೇ ರೈತರ ಬ್ಯಾಂಕ್‌ ಖಾತೆಗಳಿಗೆ (Bank Account) ಕಿಸಾನ್‌ ಸಮ್ಮಾನ್‌ ನಿಧಿಯ ಹಣ ವರ್ಗಾವಣೆ (Money Transfer)  ಆಗುವುದು ಖಚಿತವಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಬಿಗ್‌ ರಿಲೀಫ್‌, ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಕೇಂದ್ರ ಸರಕಾರದ ಆರ್ಥಿಕ ಸಹಾಯ ನಿಧಿಯ ಠೇವಣಿ ಕುರಿತು ಸ್ಪಷ್ಟನೆ ಸಿಕ್ಕಿದೆ. ಜೂನ್‌ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟವಾದ ವಾರದ ಒಳಗೆ ಎಲ್ಲಾ ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ. ನಿಗಧಿತ ಅವಧಿಗೂ ಮುಂಚಿತ ವಾಗಿಯೇ ಪಿಎಂ ಕಿಸಾನ್‌ ಯೋಜನೆಯ ಹಣ ಜಮೆ ಆಗುವ ಸಾಧ್ಯತೆಯೂ ಇದೆ.

PM-Kisan Samman Nidhi 17th installment Updates Good news for farmers from PM Narendra Modi government
Image Credit to Original Source

ಇದನ್ನೂ ಓದಿ : ರುಚಿ ರುಚಿ ಅಡುಗೆ ಮಾಡುವ ಮಹಿಳೆಯರಿಗೆ ಸರಕಾರದಿಂದ ಸಿಗಲಿದೆ 50 ಸಾವಿರ ರೂಪಾಯಿ

ಇ-ಕೆವೈಸಿ ಮಾಡಿಸದೇ ಇರುವ ರೈತರ ಖಾತೆಗಳಿಗೆ ಹಣ ಜಮೆ ಆಗದೇ ಇರುವ ಸಾಧ್ಯತೆಯಿದೆ. ಈ ಕುರಿತು ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ರೈತರು ಕೇಂದ್ರ ಸರಕಾರದ ಸೂಚನೆಯ ನಡುವಲ್ಲೂ ಇಕೆವೈಸಿ (e Kyc)  ಮಾಡಿಸದೇ ಇದ್ದರೆ, ಅವರಿಗೆ ಕಿಸಾನ್‌ ಯೋಜನೆಯ ಮುಂದಿನ ಕಂತಿನ ಹಣ ಸಿಗೋದಿಲ್ಲ. ಒಂದೊಮ್ಮೆ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೋ ಅನ್ನೋದನ್ನು ತಿಳಿಯಲು ಕೇಂದ್ರ ಸರಕಾರದ ಅಧಿಕೃತ ವೆಬ್‌ಸೈಟ್‌ pmkisan.gov.in ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ : ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ

PM-Kisan Samman Nidhi 17th installment Updates Good news for farmers from PM Narendra Modi government

Comments are closed.