ಭಾನುವಾರ, ಏಪ್ರಿಲ್ 27, 2025
HomeCinemaRagini Dwivedi : ವೈಟ್ ಸ್ಕರ್ಟ್ ನಲ್ಲಿ ಹಾಟ್ ನಟಿ ರಾಗಿಣಿ : ತುಪ್ಪದ ಬೆಡಗಿ...

Ragini Dwivedi : ವೈಟ್ ಸ್ಕರ್ಟ್ ನಲ್ಲಿ ಹಾಟ್ ನಟಿ ರಾಗಿಣಿ : ತುಪ್ಪದ ಬೆಡಗಿ ನೋಡಿ ಫ್ಯಾನ್ಸ್ ಸುಸ್ತಾಗೋದ್ರಪ್ಪ…!

- Advertisement -

Ragini Dwivedi  : ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟಿ ರಾಗಿಣಿ ದ್ವಿವೇದಿ ಸಖತ್ ಹಾಟ್ ಹಾಟ್ ಪೋಟೋದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದ್ದಾರೆ. ಬರ್ತಡೇ ಗಾಗಿ ಸ್ಪೆಶಲ್ ಪೋಟೋಶೂಟ್ ಗೆ ಪೋಸ್ ನೀಡಿರೋ ರಾಗಿಣಿ ದ್ವಿವೇದಿ ಬಾಲಿವುಡ್ ಹಿರೋಯಿನ್ ಗಳಂತೆ ಹಾಟ್ ಹಾಟ್ ಸ್ಕರ್ಟ್ ತೊಟ್ಟು ಮಿಂಚಿದ್ದಾರೆ.

Kannada Actress Ragini Dwivedi Photoshoot in White Dress
Image Credit : Instagram

ಸ್ಯಾಂಡಲ್ ವುಡ್ ನಲ್ಲಿ ಹಾಟ್ ನೆಸ್ ಗೆ ಹೆಸರಾದ ನಟಿ ರಾಗಿಣಿ ದ್ವಿವೇದಿ. ಫಿಟನೆಸ್ ಹಾಗೂ ಯೋಗದಿಂದಲೇ ದೇಹ ಸೌಂದರ್ಯ ಕಾಪಾಡಿಕೊಂಡಿರೋ ರಾಗಿಣಿ ಯೋಗಾಭ್ಯಾಸ ಹಾಗೂ ವ್ಯಾಯಾಮದ ವಿಡಿಯೋಗಳ ಮೂಲಕ ತಮ್ಮ ಫಿಟನೆಸ್ ನ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ರಾಗಿಣಿ ದ್ವಿವೇದಿ ಬರ್ತಡೇ ಸ್ಪೆಶಲ್ ಒಕೆಶನ್ ಗಾಗಿ ವೈಟ್ ಶಾರ್ಟ್ ಸ್ಕರ್ಟ್ ನಲ್ಲಿ ಸಖತ್ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ಮಂಡಿ ಮೇಲೆ ಕೊಂಚ ಜಾರಿದಂತೆ ಧರಿಸಿದ ವೈಟ್ ಸ್ಕರ್ಟ್ , ಗ್ರೀನ್ ನೇಲ್ ಪೇಂಟ್, ಡೈಮೆಂಡ್ ಸೆಟ್ ಧರಿಸಿದ ರಾಗಿಣಿ ಡಾರ್ಕ್ ರೆಡ್ ಲಿಪ್ ಸ್ಟಿಕ್ ನಲ್ಲಿ ಮತ್ತೇರಿಸುವ ಸ್ಮೈಲ್‌ನೀಡಿ ಪಡ್ಡೆಗಳ ನಿದ್ದೆಕದ್ದಿದ್ದಾರೆ. ಪ್ರಸಾದ ಬಿದ್ದಪ್ಪ ಡಿಸೈನ್ ಮಾಡಿದ ಡ್ರೆಸ್ ಹಾಗೂ ದೀಪಕ್ ನೈರ್ ಮೇಕಪ್‌ನಲ್ಲಿ ರಾಗಿಣಿ ದ್ವಿವೇದಿ ಸಖತ್ ಗ್ರ್ಯಾಂಡ್ ಲುಕ್ ನಲ್ಲಿ ಮಿಂಚಿದ್ದು, ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದಂತೆ ರಾಗಿಣಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದು ಶೇರ್,ಲೈಕ್,ಕಮೆಂಟ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.

Kannada Actress Ragini Dwivedi Photoshoot in White Dress
Image Credit : Instagram

ವೀರಮದಕರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ ಹಲವು ಸಿನಿಮಾಗಳಲ್ಲಿ ನಟಿಸಿ ಹಲವು ನಾಯಕ ನಟರಿಗೆ ಜೋಡಿಯಾಗಿದ್ದಾರೆ. ರಾಗಿಣಿ ಐಪಿಎಸ್ ನಂತಹ ಮಹಿಳಾ‌ ಪ್ರಧಾನ ಸಿನಿಮಾಗಳ‌ ಮೂಲಕವೂ ರಾಗಿಣಿ ಮಿಂಚಿದ್ದಾರೆ. ಆದರೆ ಕಳೆದ ಕೆಲ ವರ್ಷಗಳ ಹಿಂದೆ ಅವರ ವಿರುದ್ಧ ಕೇಳಿಬಂದ ಡ್ರಗ್ಸ್ ಮಾರಾಟ ಹಾಗೂ ಸೇವನೆ ಪ್ರಕರಣ ರಾಗಿಣಿ ಜನಪ್ರಿಯತೆಗೆ ಕುತ್ತು ತಂದಿದೆ.

ಇದನ್ನೂ ಓದಿ :Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು !  

ಡ್ರಗ್ಸ್ ಪ್ರಕರಣದ ಬಳಿಕ ರಾಗಿಣಿಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳ‌‌ ಕೊರತೆ ಕಾಣಿಸಿಕೊಂಡಿದ್ದು ರಾಗಿಣಿಯನ್ನು ಸಿನಿಮಾಗಳಲ್ಲಿ ಸೇರಿಸಿಕೊಳ್ಳಲು ನಿರ್ದೇಶಕರು ಹಾಗೂ ನಿರ್ಮಾಪಕರು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ರಾಗಿಣಿ ಸ್ಯಾಂಡಲ್ ವುಡ್ ನಿಂದ ಬಹುತೇಕ ದೂರ ಉಳಿದಿದ್ದಾರೆ.

Kannada Actress Ragini Dwivedi Photoshoot in White Dress
Image Credit : Instagram

ಆದರೆ ಸೋಷಿಯಲ್ ಮೀಡಿಯಾ ಹಾಗೂ ಡ್ಯಾನ್ಸ್ ಪ್ಲೋರ್ ಗಳಲ್ಲಿ ರಾಗಿಣಿ ಸಖತ್ ಆಕ್ಟಿವ್ ಆಗಿದ್ದು ತುಪ್ಪ ಬೇಕಾ ತುಪ್ಪ ಎನ್ನುತ್ತ ಮೈಬಳುಕಿಸಿ ಪಡ್ಡೆಗಳ ಮೈಮನದ ಬಿಸಿ ಏರಿಸುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಜೀನ್ಸ್ ಹಾಗೂ ಶಾರ್ಟ್ ಟಾಪ್ ಹಾಕಿ ಪೋಟೋ ಶೂಟ್ ಮಾಡಿಸಿದ್ದ ರಾಗಿಣಿ ಟಾಪ್ ನ ಮೊದಲೆರಡು ಬಟನ್ ಒಫನ್ ಬಿಟ್ಟು ಮುಂಗಾರಿನ ಮಳೆಯಲ್ಲೂ ಬಿಸಿ ಏರುವಂತೆ‌ಮಾಡಿದ್ದರು. ಈಗ ವೈಟ್ ಸ್ಕರ್ಟ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

Kannada Actress Ragini Dwivedi Photoshoot in White Dress
Image Credit : Instagram

ನಟಿಯಾಗಿ ಮಾತ್ರವಲ್ಲ ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿರೋ ರಾಗಿಣಿ ತಮ್ಮ ಟ್ರಸ್ಟ್ ಮೂಲಕ ಬಡವರಿಗೆ, ಪೌರ ಕಾರ್ಮಿಕರಿಗೆ,ಸಶ್ಮಾನ ಕಾರ್ಮಿಕರಿಗೆ ದವಸಧಾನ್ಯ ವಿತರಿಸಿ ನೆರವಾಗಿದ್ದರು. ಕರೋನಾ ಕಾಲದಲ್ಲೂ ಊಟ ತಿಂಡಿ ವಿತರಿಸಿ ಮಾನವೀಯತೆ ಮೆರೆದಿದ್ದರು.

ಇದನ್ನೂ ಓದಿ :  ಪಾರ್ವತಮ್ಮ ನೆನಪಿನಲ್ಲಿ ದ ಜಡ್ಜಮೆಂಟ್ ಸಿನಿಮಾ: ಹೊಸ ಪಾತ್ರದ ಬಗ್ಗೆ ಧನ್ಯಾ ರಾಮ್ ಕುಮಾರ್ ಎಕ್ಸಕ್ಲೂಸಿವ್ ಮಾತು

Kannada Actress Ragini Dwivedi Photoshoot in White Dress

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular