ಪಾರ್ವತಮ್ಮ ನೆನಪಿನಲ್ಲಿ ದ ಜಡ್ಜಮೆಂಟ್ ಸಿನಿಮಾ: ಹೊಸ ಪಾತ್ರದ ಬಗ್ಗೆ ಧನ್ಯಾ ರಾಮ್ ಕುಮಾರ್ ಎಕ್ಸಕ್ಲೂಸಿವ್ ಮಾತು

The Judgement Kannada Movie : ಸ್ಯಾಂಡಲ್ ವುಡ್ ನಲ್ಲಿ ಸದ್ಯ ವಿಭಿನ್ನ ಸಿನಿಮಾಗಳು ಸದ್ದು ಮಾಡ್ತಿವೆ. ಅದರಲ್ಲೂ ಹೊಸ ಹೊಸ ನಾಯಕ ನಟ -ನಟಿಯರು ಡಿಫರೆಂಟ್ ಸ್ಕ್ರಿನ್ ಪ್ಲೇ ಮೂಲಕ ಗಮನ ಸೆಳೆಯುತ್ತಿದ್ದಾರೆ.

The Judgement Kannada Movie : ಸ್ಯಾಂಡಲ್ ವುಡ್ ನಲ್ಲಿ ಸದ್ಯ ವಿಭಿನ್ನ ಸಿನಿಮಾಗಳು ಸದ್ದು ಮಾಡ್ತಿವೆ. ಅದರಲ್ಲೂ ಹೊಸ ಹೊಸ ನಾಯಕ ನಟ -ನಟಿಯರು ಡಿಫರೆಂಟ್ ಸ್ಕ್ರಿನ್ ಪ್ಲೇ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ಇಂತಹದ್ದೇ ಸಿನಿಮಾದ ಮೂಲಕ ದೊಡ್ಮನೆ ಮೊಮ್ಮಗಳು ಹಾಗೂ ನಟ ರಾಮ್ ಕುಮಾರ್ ಪುತ್ರಿ ಧನ್ಯಾ  (Dhanya Ramkumar) ಸದ್ದು ಮಾಡ್ತಿದ್ದು, ಅಜ್ಜಿಗಾಗಿ ಇಂತಹದೊಂದು ಚಿತ್ರಕಥೆಯ ಪಾತ್ರವಾಗಿದ್ದೇನೆ ಎನ್ನುವ ಮೂಲಕ ನಿರ್ಮಾಪಕಿ ಪಾರ್ವತಮ್ಮ ಅವರನ್ನು ಸ್ಮರಿಸಿದ್ದಾರೆ.

The Judgement Kannada Movie Relesed On may 24 Dr. V Ravichandran Meghana Gaonkar Diganth Dhanya Ramkumar
Image Credit to Original Source

ದೊಡ್ಮನೆಯಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಪ್ರತಿಭೆ ಧನ್ಯಾ ರಾಮ್ ಕುಮಾರ್. ಸ್ಯಾಂಡಲ್ ವುಡ್ ಗೆ ಬಂದಾಗಿನಿಂದಲೂ ವಿಭಿನ್ನ ಸಿನಿಮಾದ ಮೂಲಕವೇ ಗುರುತಿಸಿಕೊಂಡ ಧನ್ಯಾ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸೇರಿ ಭಿನ್ನ ಕಥಾವಸ್ತುವಿನ ಸಿನಿಮಾದಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಇದೇ 24 ರಂದು ರಿಲೀಸ್ ಆಗ್ತಿರೋ ದ ಜಡ್ಜಮೆಂಟ್ ಸಿನಿಮಾದಲ್ಲಿ ನಟಿ ಧನ್ಯಾ ರಾಮ್ ಕುಮಾರ್ ರವಿಚಂದ್ರನ್, ನಟ ದಿಗಂತ್ ಹಾಗೂ ಹಿರಿಯ ನಟ-ನಟಿಯರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಧನ್ಯಾ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಧನ್ಯಾ ನಾನು ಈ ಪಾತ್ರವನ್ನು ಒಪ್ಪಿಕೊಳ್ಳೋದಿಕ್ಕೆ ಮುಖ್ಯ ಕಾರಣವೇ ನಮ್ಮ ಅಜ್ಜಿ ಪಾರ್ವತಮ್ಮ ರಾಜಕುಮಾರ್.

ಇದನ್ನೂ ಓದಿ : ದರ್ಶನ್‌ ಜೊತೆ ವಿಜಯಲಕ್ಷ್ಮೀ, ಮಗಳ ಜೊತೆ ಪವಿತ್ರಗೌಡ : ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾಮಿಲಿಯ ವಾರ್

ಅವರು ಸಿನಿಮಾಗಳನ್ನು ನಿರ್ಮಿಸುವ ವೇಳೆ ಇಂತಹ ಕಥಾನಕಗಳು ಅಥವಾ ಕತೆ ಕಾದಂಬರಿಗಳನ್ನು ಆಧರಿಸಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾ ಕೂಡ ಅಂತಹುದೇ ಸುಂದರ ಕತೆಯೊಂದನ್ನು ಆಧರಿಸಿದೆ. ಹೀಗಾಗಿ ಅವರ ನೆನಪಿಗಾಗಿ ನಾನು ಈ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ.
ನನ್ನ ಅಜ್ಜಿ ಪಾರ್ವತಮ್ಮನವರು ಇಂದು ಬದುಕಿದ್ದರೇ, ನಾನು ಇಂತಹ ಸಿನಿಮಾದಲ್ಲಿ ನಟಿಸಬೇಕೆಂದು ಆಸೆ ಪಡುತ್ತಿದ್ದರು. ನನ್ನನ್ನು ಇಂಥ ಸಿನಿಮಾದಲ್ಲಿ ನೋಡಿ ಖುಷಿ ಪಡುತ್ತಿದ್ದರು. ಹೀಗಾಗಿ ಅವರಿಗಾಗಿ ನಾನು ನನ್ನ ತಾಯಿ ಜೊತೆ ಚರ್ಚೆ ಮಾಡಿ ಈ ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಧನ್ಯಾ ಹೇಳಿದ್ದಾರೆ.

The Judgement Kannada Movie Relesed On may 24 Dr. V Ravichandran Meghana Gaonkar Diganth Dhanya Ramkumar
Image Credit to Original Source

ಮಾತ್ರವಲ್ಲ ಈ ಸಿನಿಮಾದಿಂದ ನಾನು ರವಿ ಸರ್, ರಂಗಾಯಣ ರಘು,ಲಕ್ಷ್ಮೀಯಮ್ಮಾರಂತಹ ಹಿರಿಯ ನಟರ ಜೊತೆ ನಟಿಸುವ ಅವಕಾಶ ಪಡೆದೆ. ಅಲ್ಲದೇ ದಿಗಂತ್ ಜೊತೆ ಇದು ಮೊದಲ ಸಿನಿಮಾ, ಈ ಸಿನಿಮಾ ಜನರನ್ನು ಸೆಳೆಯುತ್ತೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟ್ರೈ್ಮನೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಗುರುರಾಜ್ ಕುಲಕರ್ಣಿ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನ್ಯಾಯವಾದಿಯಾಗಿ ರವಿಚಂದ್ರನ್ ಕಾಣಿಸಿಕೊಂಡಿದ್ದು ನ್ಯಾಯಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಂಡು ಹೇಗೆ ಗೆಲ್ಲುತ್ತಾರೆ ಎಂಬ ರೋಚಕ ಕಥಾಹಂದರವನ್ನು ಚಿತ್ರಕತೆ ಒಳಗೊಂಡಿದೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ನಟಿ ಮೇಘನಾ ಗಾಂವ್ಕರ್ ,‌ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ಜೋಡಿ ಆಗಿದ್ದಾರೆ. ಜೊತೆಗೆ ದಿಗಂತ್ ಮತ್ತು ಧನ್ಯಾ ಜೋಡಿಯಾಗಿ‌ ಕಾಣಿಸಿ ಕೊಂಡಿದ್ದಾರೆ. ಅಮೃತ್ ಅಪಾರ್ಟಮೆಂಟ್ ಚಿತ್ರದ ಮೂಲಕ ನಿರ್ಮಾಣದ ಜೊತೆಗೆ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಗುರುರಾಜ್ ಈ ಸಿನಿಮಾದ ಮೂಲಕ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಈ ಸಿನಿಮಾಗೆ ಮೊದಲು ಗಿಲ್ಟ್ ಅನ್ನೋ ಟೈಟಲ್ ಇಡಲಾಗಿತ್ತು.ಆದರೆ ನಟ ರವಿಚಂದ್ರನ್ ಈ ಸಿನಿಮಾ‌ಕಥೆ ಕೇಳಿದ ಬಳಿಕ ದ ಜಡ್ಜಮೆಂಟ್ ಅನ್ನೋ ಹೆಸರು ಕೊಟ್ಟಿದ್ದಾರೆ. ಒಟ್ಟಿನಲ್ಲಿ ತಮ್ಮ ಅಜ್ಜಿಯ ಸಿನಿಮಾ ಕನಸನ್ನು ನನಸು ಮಾಡಲು ನಟಿ ಧನ್ಯಾ ಈ ವಿಭಿನ್ನ ಕಥಾಹಂದರದ ಕುತೂಹಲಕಾರಿ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರ ಮನಸೆಳೆಯಲು ಚಿತ್ರತಂಡ ಸಿದ್ಧವಾಗಿದೆ.

The Judgement Kannada Movie Relesed On may 24 Dr. V Ravichandran Meghana Gaonkar Diganth Dhanya Ramkumar

Comments are closed.