IPL Brand Value: ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಖ್ಯಾತಿ ಪಡೆದಿದೆ. ವಿಶ್ವದ ಯಾವುದೇ ಟಿ20 ಲೀಗ್’ಗಳು ಐಪಿಎಲ್ (IPL ) ಹತ್ತಿರಕ್ಕೂ ಸುಳಿಯುವುದಿಲ್ಲ. ಕಳೆದ 17 ವರ್ಷಗಳಲ್ಲಿ ಐಪಿಎಲ್ ಟೂರ್ನಿ ಎಲ್ಲಾ ಎಲ್ಲೆಗಳನ್ನು ಮೀರಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. 2008ರಲ್ಲಿ ಆರಂಭಗೊಂಡಿದ್ದ ಐಪಿಎಲ್ 17 ವರ್ಷಗಳನ್ನು ಪೂರೈಸಿದ್ದು, ಈಗ ಇಂಡಿಯನ್ ಪ್ರೀಮಿಯರ್ ಲೀಗ್’ನ ಬ್ಯುಸಿನೆಸ್ ಮೌಲ್ಯ (IPL business value) ಅಥವಾ ಉದ್ಯಮ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 16.4 ಬಿಲಿಯನ್ ಅಮೆರಿಕನ್ ಡಾಲರ್. ಅಂದ್ರೆ ಭಾರತದ ರೂಪಾಯಿಯಲ್ಲಿ 1,37,010 ಲಕ್ಷ ಕೋಟಿ ರೂಪಾಯಿ. ಅಮೆರಿಕದ ಇನ್ವೆಸ್ಟ್’ಮೆಂಟ್ ಬ್ಯಾಂಕ್ ಹೌಲಿಹಾನ್ ಲಾಕಿ ನಡೆಸಿರುವ ಅಧ್ಯಯನದಲ್ಲಿ ಇದು ಬಹಿರಂಗಗೊಂಡಿದೆ.

ಐಪಿಎಲ್ ಬ್ಯುಸಿನೆಸ್ ಮೌಲ್ಯ ಕಳೆದ ವರ್ಷಕ್ಕಿಂದ 6.3 ನಷ್ಟು ಏರಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕಿಂತ 28,404 ಕೋಟಿಯಷ್ಟು ಏರಿಕೆ ಕಂಡಿದೆ. ಈಗ ಐಪಿಎಲ್ ಟೂರ್ನಿಯನ್ನು ಯಾರಾದರೂ ಖರೀದಿಸಲು ಬಯಸಿದರೆ, 13,70,10,43,80,000 ಕೋಟಿ ರೂಪಾಯಿಗಳ್ನು ಪಾವತಿಸಬೇಕಾಗಿದೆ ಎಂದು ಹೌಲಿಹಾನ್ ಲಾಕಿ ನಡೆಸಿದ ಅಧ್ಯಯನ ತಿಳಿಸಿದೆ. ಐಪಿಎಲ್’ನ ಆದಾಯ ಬಹುತೇಕ ನಿಂತಿರುವುದು ಮೀಡಿಯಾ ಮತ್ತು ಡಿಜಿಟಲ್ ರೈಟ್ಸ್ ಮೇಲೆ. 2023-27ನೇ ಸಾಲಿನ ಐಪಿಎಲ್ ಡಿಜಿಟಲ್ ರೈಟ್ಸ್ ಕಳೆದ ವರ್ಷ ವಯಾಕಾಮ್ 18 ಮತ್ತು ಮೀಡಿಯಾ ರೈಟ್ಸ್ ಡಿಸ್ನಿ ಸ್ಟಾರ್ ಪಾಲಾಗಿತ್ತು. ಮೀಡಿಯಾ ಮತ್ತು ಡಿಜಿಟಲ್ ರೈಟ್ಸ್ ಮೂಲಕ ಬಿಸಿಸಿಐ 51,785 ಕೋಟಿ ಲಾಭ ಗಳಿಸಿತ್ತು. ಐಪಿಎಲ್ ಟೈಟಲ್ ಸ್ಪಾನ್ಸರ್ ಹಕ್ಕನ್ನು ಟಾಟಾ ಸಂಸ್ಥೆ 2,500 ಕೋಟಿ ರೂಪಾಯಿಗೆ ಐದು ವರ್ಷಗಳ ಅವಧಿಗೆ ಖರೀದಿ ಮಾಡಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್‌ಗಾಗಿ 106 ದಿನಗಳಲ್ಲಿ ರೆಡಿಯಾಗಿದ್ದ ನ್ಯೂ ಯಾರ್ಕ್ ಮೈದಾನ ಸದ್ಯದಲ್ಲೇ ನೆಲಸಮ !
ಇದೇ ವೇಳೆ ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯವೂ (Brand Value) ಪ್ರಕಟಗೊಂಡಿದ್ದು, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) 1,928 ಕೋಟಿ ರೂಪಾಯಿ ಬ್ರ್ಯಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 1,894 ಕೋಟಿ ರೂಪಾಯಿಗಳ ಬ್ರ್ಯಾಂಡ್ ವ್ಯಾಲ್ಯೂನೊಂದಿಗೆ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ 2ನೇ ಸ್ಥಾನದಲ್ಲಿದ್ದು, ಕೆಕೆಆರ್ ತಂಡದ ಬ್ರ್ಯಾಂಡ್ ಮೌಲ್ಯ 1,803 ಕೋಟಿ ರೂಪಾಯಿ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ 4ನೇ ಸ್ಥಾನಕ್ಕೆ ಕುಸಿದಿದ್ದು, ಅಂಬಾನಿ ಮಾಲೀಕತ್ವದ ಮುಂಬೈ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯ 1,702 ಕೋಟಿ ರೂಪಾಯಿ.

ಇದನ್ನೂ ಓದಿ : Exclusive: ಕುಕ್ಕೆ ಸುಬ್ರಮಣ್ಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್
2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ ₹11,10,21,81,650 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿದೆ. 2024ರ ಫೈನಲಿಸ್ಟ್, 2016ರ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಬ್ರ್ಯಾಂಡ್ ಮೌಲ್ಯ ₹11,01,87,06,600 ಕೋಟಿ. ಡೆಲ್ಲಿ ಕ್ಯಾಪಿಟಲ್ಸ್ (DC) ಫ್ರಾಂಚೈಸಿ ₹10,93,48,90,950 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿದ್ದರೆ, ಗುಜರಾತ್ ಟೈಟನ್ಸ್ (GT) ₹10,35,05,83,800 ಕೋಟಿ, ಪಂಜಾಬ್ ಕಿಂಗ್ಸ್ (PBKS) ₹8,43,07,17,450 ಕೋಟಿ ಹಾಗೂ ಲಕ್ನೋ ಸೂಪರ್ ಜಯಂಟ್ಸ್ (LSG) ₹ 7,59,52,01,250 ಕೋಟಿ ಮೌಲ್ಯದ ಬ್ರ್ಯಾಂಡ್ ಮೌಲ್ಯ ಹೊಂದಿದೆ.
ಇದನ್ನೂ ಓದಿ : ಛತ್ತೀಸ್‌ಗಢ ಕ್ರಿಕೆಟ್ ಪ್ರೀಮಿಯರ್ ಲೀಗ್: ರಾಯ್ಪುರ ರೈನೋಸ್ ತಂಡಕ್ಕೆ ಕನ್ನಡಿಗ ಮುಕುಂದ್ ಗೌಡ ಕೋಚ್!
IPL Brand Value Do you know how much money is needed to buy an IPL tournament ?