Smriti Mandhana – Harmanpreet Kaur : ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧನ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 2ನೇ ಏಕದಿನ ಶತಕ ಬಾರಿಸಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ (India Women Vs South Africa Women) ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂಧನ (Smriti Mandhana) ಭರ್ಜರಿ ಶತಕ ಸಿಡಿಸಿದರು.

ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ 117 ರನ್ ಸಿಡಿಸಿದ್ದ ಎಡಗೈ ಓಪನರ್ ಸ್ಮೃತಿ ಮಂಧನ, 2ನೇ ಪಂದ್ಯದಲ್ಲಿ 120 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ 136 ರನ್ ಗಳಿಸಿದರು. ಇದು ಮಹಿಳಾ ಏಕದಿನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಸ್ಮೃತಿ ಮಂಧನ ಬಾರಿಸಿದ 7ನೇ ಶತಕ.

https://x.com/thebharatarmy/status/1803388786770059503
ಈ ಮೂಲಕ ಭಾರತ ಪರ ಅತೀ ಹೆಚ್ಚು ಏಕದಿನ ಶತಕಗಳನ್ನು ದಾಖಲಿಸಿದವರ ಸಾಲಿನಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಸ್ಮೃತಿ ಸರಿಗಟ್ಟಿದರು. ಅಷ್ಟೇ ಅಲ್ಲ, ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಸತತ 2 ಶತಕಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದರು.
https://x.com/RCBTweets/status/1803386747285545218
ಇದನ್ನೂ ಓದಿ : ಸದ್ಯದಲ್ಲೇ ನನಸಾಗಲಿದೆ ಟೀಮ್ ಇಂಡಿಯಾ ಪರ ಆಡುವ ಅಸ್ಸಾಂ ಸ್ಟಾರ್ ಕ್ರಿಕೆಟಿಗ ರಿಯಾನ್ ಪರಾಗ್ ಕನಸು !
ಸ್ಮೃತಿ ಮಂಧನ ಜೊತೆ 3ನೇ ವಿಕೆಟ್’ಗೆ 136 ಎಸೆತಗಳಲ್ಲಿ ದಾಖಲೆಯ 171 ರನ್’ಗಳ ಭರ್ಜರಿ ಜೊತೆಯಾಟವಾಡಿದ ನಾಯಕಿ ಹರ್ಮನ್’ಪ್ರೀತ್ ಕೌರ್ (Harmanpreet Kaur) ಏಕದಿನ ವೃತ್ತಿಜೀವನದ 6ನೇ ಶತಕದೊಂದಿಗೆ ಮಿಂಚಿದರು. ಇನ್ನಿಂಗ್ಸ್’ನ ಕೊನೆಯ ಓವರ್’ನಲ್ಲಿ ಶತಕ ಬಾರಿಸಿದ ಹರ್ಮನ್ ಪ್ರೀತ್ ಕೌರ್, ಕೇವಲ 88 ಎಸೆತಗಳನ್ನೆದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 103 ರನ್ ಗಳಿಸಿ ಅಜೇಯರಾಗುಳಿದರು.

https://x.com/shreyab27/status/1803388740640952688
ಇದನ್ನೂ ಓದಿ : Gautam Gambhir: ಗಂಭೀರ್ ಟೀಮ್ ಇಂಡಿಯಾ ಕೋಚ್ ಆದರೆ ಈ ಕ್ರಿಕೆಟಿಗನಿಗೆ ಖುಲಾಯಿಸಲಿದೆ ಅದೃಷ್ಟ
ಭಾರತ ಪರ ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (ಟಾಪ್-3)
1. ಸ್ಮೃತಿ ಮಂಧನ: 7 ಶತಕ (84 ಇನ್ನಿಂಗ್ಸ್)
2. ಮಿಥಾಲಿ ರಾಜ್: 7 ಶತಕ (211 ಇನ್ನಿಂಗ್ಸ್)
3. ಹರ್ಮನ್ ಪ್ರೀತ್ ಕೌರ್: 6 ಶತಕ (113 ಇನ್ನಿಂಗ್ಸ್)
ಇದನ್ನೂ ಓದಿ : Jonty Rhodes: ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಆಗ್ತಾರಾ ಕ್ರಿಕೆಟ್ ಚಿರತೆ !
ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂಧನ ಅವರ ಸಿಡಿಲಬ್ಬರದ ಶತಕಗಳ ನೆರವಿನಿಂದ ಭಾರತ ತಂಡ 50 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.
India W vs South Africa W Match Smriti Mandhana and Harmanpreet Kaur Century in Chinnaswamy Stadium Bangalore