ಸೋಮವಾರ, ಏಪ್ರಿಲ್ 28, 2025
HomeSportsCricketಟಿ20 ವಿಶ್ವಕಪ್: ವಿಂಡೀಸ್ ಔಟ್, ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ 

ಟಿ20 ವಿಶ್ವಕಪ್: ವಿಂಡೀಸ್ ಔಟ್, ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ 

- Advertisement -

T20 World Cup 2024 semi-finals : ಆ್ಯಂಟಿಗುವಾ: ಐಸಿಸಿ ಟಿ20 ವಿಶ್ವಕಪ್ (ICC t20 World Cup 2024) ಟೂರ್ನಿಯಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಹೊರ ಬಿದ್ದಿದೆ. ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಸೋಮವಾರ ಮುಂಜಾನೆ ನಡೆದ ಗ್ರೂಪ್-2ರ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 3 ವಿಕೆಟ್’ಗಳಿಂದ ರೋಚಕವಾಗಿ ಮಣಿಸಿದ ದಕ್ಷಿಣ ಆಫ್ರಿಕಾ ಗುಂಪಿನಿಂದ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.

T20 World Cup 2024 west indies out, South Africa, England enter semi-finals
Image Credit to Original Source

ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಮಹತ್ವ ಪಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪಡೆ, ಹರಿಣಗಳ ಸಂಘಟಿತ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ : Jonty Rhodes: ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಆಗ್ತಾರಾ ಕ್ರಿಕೆಟ್ ಚಿರತೆ !

ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನಂತರ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ತ್ ಲೂಯಿಲ್ ನಿಯಮದನ್ವಯ ದಕ್ಷಿಣ ಆಫ್ರಿಕಾ ಗೆಲುವಿಗೆ 17 ಓವರ್’ಗಳಲ್ಲಿ 123 ರನ್’ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಯಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.1 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 124 ರನ್ ಗಳಿಸುವ ಮೂಲಕ ಗ್ರೂಪ್-2ರಿಂದ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಅಮೆರಿಕ ವಿರುದ್ಧ 10 ವಿಕೆಟ್’ಗಳ ಗೆಲುವು ದಾಖಲಿಸಿದ ಇಂಗ್ಲೆಂಡ್ ಗ್ರೂಪ್-2ರಿಂದ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ : Virat Kohli: ಓಪನರ್ ಆಗಿ ವಿರಾಟ್ ಮತ್ತೆ ಫೇಲ್, ಈಗೇನ್ ಮಾಡ್ತಾನೆ ನಿಮ್ ಹೀರೋ ?

ಸೋಮವಾರ ಸೇಂಟ್ ಲೂಸಿಯಾದಲ್ಲಿ ನಡೆಯುವ ಗ್ರೂಪ್-1ರ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಯಾಗಲಿವೆ. ಭಾರತ ಈಗಾಗಲೇ ಆಡಿರುವ ಎರಡೂ ಸೂಪರ್-8 ಪಂದ್ಯಗಳನ್ನು ಗೆದ್ದು 4 ಅಂಕ ಗಳಿಸಿದ್ದು ಸೆಮಿಫೈನಲ್’ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ.

T20 World Cup 2024 west indies out, South Africa, England enter semi-finals
Image Credit to Original Source

ಇಂದು ನಡೆಯುವ ಪಂದ್ಯದಲ್ಲಿ ಭಾರತ ಗೆದ್ದರೆ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಬಾಗಿಲು ಬಹುತೇಕ ಬಂದ್ ಆಗಲಿದೆ. ಮಂಗಳವಾರ ಬೆಳಗ್ಗೆ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದರೆ ಆಫ್ಘನ್ ಪಡೆ ಸೆಮಿಫೈನಲ್’ಗೆ ಲಗ್ಗೆ ಇಡಲಿದೆ. ಆಗ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರ ಬೀಳಲಿದೆ.

ಇದನ್ನೂ ಓದಿ : ಮುಂದಿನ ತಿಂಗಳು ಟೀಮ್ ಇಂಡಿಯಾಗೆ ಹೊಸ ಕೋಚ್ : ಗೌತಮ್ ಗಂಭೀರ್ ಅಲ್ಲ, ವಿವಿಎಸ್‌ ಲಕ್ಷ್ಮಣ್‌

T20 World Cup 2024 : west indies out, South Africa, England enter semi-finals

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular