India vs Zimbabwe t20 Series : ಹರಾರೆ: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು. ಟೀಮ್ ಇಂಡಿಯಾದಲ್ಲಿ ಸೀನಿಯರ್ ಶರ್ಮಾನ ಜಾಗ ತುಂಬಲು ಜ್ಯೂನಿಯರ್ ಶರ್ಮಾ ಬಂದಿದ್ದಾನೆ. ಆಡಿದ 2ನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಸಿಡಿಲಬ್ಬರದ ಶತಕದೊಂದಿಗೆ ಅಬ್ಬರಿಸಿದ್ದಾನೆ. ಆತನ ಹೆಸರು ಅಭಿಷೇಕ್ ಶರ್ಮಾ (Abhishek Sharma).

https://x.com/richkettle07/status/1809932371736543691?s=46
ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪಂಜಾಬ್’ನ ಯುವ ಎಡಗೈ ಆಲ್ರೌಂಡರ್ ಅಭಿಷೇಕ್ ಶರ್ಮಾ, 47 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ್ದಾನೆ. ಅಭಿಷೇಕ್ ಶರ್ಮಾ ಶತಕದ ನೆರವಿನಿಂದ 2ನೇ ಟಿ20 ಪಂದ್ಯವನ್ನು ಭರ್ತಿ 100 ರನ್’ಗಳಿಂದ ಗೆದ್ದ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಮೊದಲ ಟಿ20 ಪಂದ್ಯವನ್ನು ಜಿಂಬಾಬ್ವೆ 13 ರನ್’ಗಳಿಂದ ಗೆದ್ದುಕೊಂಡಿತ್ತು.
ಇದನ್ನು ಓದಿ : Hardik Pandya: ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..! ಹಾರ್ದಿಕ್ ಪಾಂಡ್ಯ ಸಾಧನೆಯ ಹಿಂದೆ ಕನ್ನಡಿಗನ ಶ್ರಮ
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಅಭಿಷೇಕ್ ಶರ್ಮಾ ಬಾರಿಸಿದ ವಿಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತ ಅಭಿಷೇಕ್ ಶರ್ಮಾ ತಮ್ಮ ಶತಕದ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರು.

ಇದನ್ನೂ ಓದಿ : Rohit Sharma Retirement Plan: ಟಿ20 ವಿಶ್ವ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ನಿವೃತ್ತಿ ಪ್ಲಾನ್ ರೆಡಿ
ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ ಅಜೇಯ 77 ರನ್ ಸಿಡಿಸಿದರೆ, ರಿಂಕು ಸಿಂಗ್ 22 ಎಸೆತಗಳಲ್ಲಿ ಅಜೇಯ 48 ರನ್ ಚಚ್ಚಿದರು. ನಂತರ ಕಠಿಣ ಗುರಿ ಬೆನ್ನಟ್ಟಿದ ಜಿಂಬಾಬ್ವೆ 18.4 ಓವರ್’ಗಳಲ್ಲಿ 134 ರನ್’ಗಳಿಗೆ ಆಲೌಟಾಯಿತು. ಭಾರತ ಪರ ಮುಕೇಶ್ ಕುಮಾರ್ ಹಾಗೂ ಆವೇಶದ ಖಾನ್ ತಲಾ 3 ವಿಕೆಟ್ ಉರುಳಿಸಿದರು. ಸರಣಿಯ 3ನೇ ಟಿ20 ಪಂದ್ಯ ಜುಲೈ 10ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?
India vs Zimbabwe t20 Series Abhishek Sharma Century Replace Rohit Sharma Place