ಸೋಮವಾರ, ಏಪ್ರಿಲ್ 28, 2025
HomeSportsCricketJames Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್‌ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು...

James Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್‌ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು ಗೊತ್ತಾ?

- Advertisement -

James Anderson:  ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಅಂತಿಮ ಟೆಸ್ಟ್ ಪಂದ್ಯವಾಡಿ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. 42 ವರ್ಷದ ಜೇಮ್ಸ್ ಆ್ಯಂಡರ್ಸನ್ ಅವರ 188ನೇ ಟೆಸ್ಟ್ ಪಂದ್ಯ ಇದಾಗಿದ್ದು, 704 ವಿಕೆಟ್’ಗಳನ್ನು ಪಡೆದಿದ್ದಾರೆ.

James Anderson Do you know the age of current England players when James Anderson made his Test debut
Image Credit to Original Source

ಟೆಸ್ಟ್ ಕ್ರಿಕೆಟ್’ನಲ್ಲಿ 700 ವಿಕೆಟ್’ಗಳನ್ನು ಪಡೆದ ಜಗತ್ತಿನ ಮೊದಲ ಮತ್ತು ಏಕೈಕ ವೇಗದ ಬೌಲರ್ ಎಂಬ ದಾಖಲೆ ಆ್ಯಂಡರ್ಸನ್ ಹೆಸರಲ್ಲಿದೆ. 2002ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಜೇಮ್ಸ್ ಆ್ಯಂಡರ್ಸನ್ ಒಟ್ಟು 188 ಟೆಸ್ಟ್, 194 ಏಕದಿನ ಹಾಗೂ 19 ಟಿ20 ಪಂದ್ಯಗಳನ್ನಾಡಿದ್ದು, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 990 ವಿಕೆಟ್’ಗಳನ್ನು ಪಡೆದಿದ್ದಾರೆ. 22 ವರ್ಷಗಳ ಹಿಂದೆ ಜೇಮ್ಸ್ ಆ್ಯಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದಾಗ, ಈಗಿನ ಇಂಗ್ಲೆಂಡ್ ಟೆಸ್ಟ್ ತಂಡದ ಆಟಗಾರರ ವಯಸ್ಸೆಷ್ಟು ಗೊತ್ತಾ? ಇಲ್ಲಿದೆ ಉತ್ತರ.

1. ಜ್ಯಾಕ್ ಕ್ರಾಲಿ: ಜೇಮ್ಸ್ ಆ್ಯಂಡರ್ಸನ್ 2002ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಾಗ ಇಂಗ್ಲೆಂಡ್ ಓಪನರ್ ಜ್ಯಾಕ್ ಕ್ರಾಲಿ ವಯಸ್ಸು ಕೇವಲ 4 ವರ್ಷ. 26 ವರ್ಷದ ಜ್ಯಾಕ್ ಕ್ರಾಲಿ 2019ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಭೀಮಾರ್ಜುನರು ಇನ್ನೆಂದೂ ಟಿ20ಯಲ್ಲಿ ಜೊತೆಯಾಗಿ ಆಡಲಾರರು..!

2. ಬೆನ್ ಡಕೆಟ್: ಆ್ಯಂಡರ್ಸನ್ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿದಾಗ ಇಂಗ್ಲೆಂಡ್ ತಂಡದ ಮತ್ತೊಬ್ಬ ಟೆಸ್ಟ್ ಓಪನರ್ ಬೆನ್ ಡಕೆಟ್ ವಯಸ್ಸು 7 ವರ್ಷ. 29 ವರ್ಷದ ಎಡಗೈ ಓಪನರ್ ಬೆನ್ ಡಕೆಟ್ 2016ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟಿದ್ದರು.

James Anderson Do you know the age of current England players when James Anderson made his Test debut
Image Credit to Original Source

3. ಓಲೀ ಪೊಪ್: ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ದಾಂಡಿಗ ಓಲೀ ಪೊಪ್ ವಯಸ್ಸು 27 ವರ್ಷ. ಜೇಮ್ಸ್ ಆ್ಯಂಡರ್ಸನ್ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಡಿದಾಗ ಪೊಪ್ ಕೇವಲ 5 ವರ್ಷದ ಹುಡುಗ.

ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ 

4. ಜೋ ರೂಟ್: ಇಂಗ್ಲೆಂಡ್’ನ ಈಗಿನ ಬೆಸ್ಟ್ ಬ್ಯಾಟರ್ ಅಂದ್ರೆ ಅದು ಜೋ ರೂಟ್. ಆಧುನಿಕ ಕ್ರಿಕೆಟ್ ದಿಗ್ಗಜನಾಗಿರುವ ಜೋ ರೂಟ್ ವಯಸ್ಸು 33 ವರ್ಷ. 22 ವರ್ಷಗಳ ಹಿಂದೆ ಜೇಮ್ಸ್ ಆ್ಯಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದಾಗ ಜೋ ರೂಟ್ 11 ವರ್ಷದ ಹುಡುಗ.

5. ಹ್ಯಾರಿ ಬ್ರೂಕ್: 26 ವರ್ಷದ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡದ ಭವಿಷ್ಯದ ತಾರೆ ಎಂದೇ ಬಂಬಿತರಾಗಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಮೊದಲ ಅಂತರಾಷ್ಟ್ರೀಯ ಪಂದ್ಯವಾಡಿದಾಗ ಬಲಗೈ ಬ್ಯಾಟರ್ ಹ್ಯಾರಿ ಬ್ರೂಕ್ ವಯಸ್ಸು ಕೇವಲ 4 ವರ್ಷ.

6. ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್’ಗೆ ಈಗ 32 ವರ್ಷ. ದಿಗ್ಗಜ ವೇಗದ ಬೌಲರ್ ಜೇಮಸ್ ಆ್ಯಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟಾಗ ಬೆನ್ ಸ್ಟೋಕ್ಸ್ ವಯಸ್ಸು 10 ವರ್ಷ.ಇದನ್ನೂ ಓದಿ : KL Rahul Net Worth: ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಇದೆ ಶತಕೋಟಿ

ಇನ್ನು ಜೇಮ್ಸ್ ಆ್ಯಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಡೆಬ್ಯೂ ಮಾಡಿದಾಗ ಇಂಗ್ಲೆಂಡ್’ನ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಇನ್ನೂ ಹುಟ್ಟಿರಲೇ ಇಲ್ಲ. ಅಂದ ಹಾಗೆ ಬಶೀರ್’ಗೆ ಈಗ 20 ವರ್ಷ ವಯಸ್ಸು.

James Anderson: Do you know the age of current England players when James Anderson made his Test debut ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular