KL Rahul- Athiya Shetty: ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಪತ್ನಿ ಆತಿಯಾ ಶೆಟ್ಟಿ ಕಳೆದ ಭಾನುವಾರ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿ ಕೊರಗಜ್ಜ ಹಾಗೂ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದಿದ್ದರು. ಮಂಗಳೂರಿನ ಕುತ್ತಾರುವಿನಲ್ಲಿ ಕೊರಗಜ್ಜ ಹಾಗೂ ಮುಲ್ಕಿಯ ಬಪ್ಪನಾಡುವಿನಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್-ಆತಿಯಾ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ರಾಹುಲ್ ಮುಂಬೈನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾರೆ.

ಮುಂಬೈನ ಪ್ರತಿಷ್ಠಿತ ಪ್ರದೇಶದವಾಗಿರುವ ಬಾಂದ್ರಾದಲ್ಲಿ ರಾಹುಲ್-ಆತಿಯಾ ದಂಪತಿ 3,350 ಚದರ ಅಡಿ ಅಳತೆಯ ಮನೆ ಖರೀದಿಸಿದ್ದಾರೆ. ರಾಹುಲ್ ದಂಪತಿ ಖರೀದಿಸಿರುವ ನೂತನ ಮನೆ ಬಾಂದ್ರಾದಲ್ಲಿರುವ 18 ಮಹಡಿಗಳ ಸಂಧು ಪ್ಯಾಲೇಸ್ ಬಿಲ್ಡಿಂಗ್’ನಲ್ಲಿದೆ. ಜುಲೈ 14ಕ್ಕೆ ಕರಾವಳಿಯ ಕೊರಗಜ್ಜ ದೈವಸ್ಥಾನ ಹಾಗೂ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಕೆ.ಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ, ಜುಲೈ 15ರಂದು ಮುಂಬೈನ ಬಾಂದ್ರಾದಲ್ಲಿ ಮನೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಗಿಸಿದ್ದಾರೆ.
ಇದನ್ನೂ ಓದಿ : KL Rahul RCB: ಕನ್ನಡಿಗರಿಗೆ ಗುಡ್ ನ್ಯೂಸ್, ರಾಹುಲ್ RCB ಪರ ಆಡುವುದು ಪಕ್ಕಾ
ಮುದ್ರಾಂಕ ಶುಲ್ಕ 1.20 ಕೋಟಿ ರೂಪಾಯಿ ಹಾಗೂ ನೋಂದಣಿ ಶುಲ್ಕ 30,000 ರೂಪಾಯಿಯನ್ನು ರಾಹುಲ್ ಪಾವತಿಸಿದ್ದಾರೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್’ನಿಂದ occupation certificate ಕೂಡ ಪಡೆದುಕೊಂಡಿದ್ದಾರೆ. ಇನ್ನ ಕೆಲವೇ ತಿಂಗಳುಗಳಲ್ಲಿ ರಾಹುಲ್ ಮತ್ತು ಆತಿಯಾ ಶೆಟ್ಟಿ ಅವರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದ್ದು, ಅದಾದ ನಂತರ ಇಬ್ಬರೂ ನೂತನ ಮನೆಗೆ ಶಿಫ್ಟ್ ಆಗಲಿದ್ದಾರೆ.

ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಮದುವೆ ಜುಲೈ 23ರಂದು ನೆರವೇರಿತ್ತು. ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಂಡಾಲ ಬಳಿಯ ಸುನೀಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ಖಾಸಗಿಯಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. 32 ವರ್ಷ ರಾಹುಲ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : Kieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?
ಇದೇ ವರ್ಷದ ಜನವರಿಯಲ್ಲಿ ರಾಹುಲ್ ಭಾರತ ಪರ ಕೊನೆಯ ಪಂದ್ಯವಾಡಿದ್ದರು. ಆ ನಂತರ ಗಾಯದಿಂದ ಬಳಸಿದ್ದ ರಾಹುಲ್ ಐಪಿಎಲ್ ಮೂಲಕ ಸ್ಪರ್ಧಾಕ್ಮತ ಕ್ರಿಕೆಟ್’ಗೆ ಮರಳಿ ಐಪಿಎಲ್-2024 ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು. ಜುಲೈ ಕೊನೆಯ ವಾರದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ದ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ಇದನ್ನೂ ಓದಿ : Kohli & Rohit: ಕೊಹ್ಲಿ-ರೋಹಿತ್ ನಿವೃತ್ತಿಯ ರಹಸ್ಯ ಬಯಲು ಮಾಡಿದ ಕೋಚ್ ಗಂಭೀರ್
KL Rahul- Athiya Shetty: Rahul-Athiya bought a ₹20 crore house after seeing Koragajja Temple Kuttar