Yuvraj Singh New Role : ಬೆಂಗಳೂರು: ಯುವರಾಜ್ ಸಿಂಗ್.. ಭಾರತದ ತ್ರಿವಳಿ ವಿಶ್ವಕಪ್ ಹೀರೊ. ಐಸಿಸಿ ಅಂಡರ್-19ವಿಶ್ವಕಪ್ 2000ನೇ ಇಸವಿ, ಟಿ20 ವಿಶ್ವಕಪ್ 2007 ಮತ್ತು ಐಸಿಸಿ ಏಕದಿನ ವಿಶ್ವಕಪ್ 2011 ರಲ್ಲಿ ಭಾರತದ 3 ವಿಶ್ವಕಪ್ ಗೆಲುವುಗಳ ರೂವಾರಿಯಾಗಿದ್ದ ಯುವರಾಜ್ ಸಿಂಗ್, 2019ರಲ್ಲಿ ದೇಶೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ವಿದೇಶೀ ಟಿ20 ಲೀಗ್’ಗಳಲ್ಲಿ ಆಡುತ್ತಿರುವ ಯುವರಾಜ್ ಸಿಂಗ್, ಇತ್ತೀಚೆಗಷ್ಟೇ ನಡೆದ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದೀಗ 42 ವರ್ಷದ ಯುವರಾಜ್ ಸಿಂಗ್ ಮತ್ತೆ ಐಪಿಎಲ್’ಗೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಕೋಚ್ ಆಗಿ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಮಾಜಿ ಚಾಂಪಿಯನ್ ಗುಜರಾತ್ ಟೈಟನ್ಸ್ (Gujarat Titans) ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : Rahul Dravid IPL 2025: ಐಪಿಎಲ್ 2025 ಕ್ಕೆ ತಮ್ಮ ಹಳೇ ತಂಡದ ಕೋಚ್ ಆಗಲಿದ್ದಾರಂತೆ ರಾಹುಲ್ ದ್ರಾವಿಡ್
ಕಳೆದ ಮೂರು ವರ್ಷಗಳಿಂದ ಗುಜರಾತ್ ತಂಡದ ಹೆಡ್ ಕೋಚ್ ಆಗಿದ್ದ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ, ಗುಜರಾತ್ ಫ್ರಾಂಚೈಸಿಯಿಂದ ಹೊರ ಬರಲು ನಿರ್ಧರಿಸಿದ್ದು, ಅವರ ಬದಲು ಯುವರಾಜ್ ಸಿಂಗ್ ಅವರನ್ನು ಕೋಚ್ ಆಗಿ ನೇಮಿಸಲು ಗುಜರಾತ್ ತಂಡ ಉತ್ಸುಕವಾಗಿದೆ. 2022ರಲ್ಲಿ ಐಪಿಎಲ್’ಗೆ ಕಾಲಿಟ್ಟಿದ್ದ ಗುಜರಾತ್ ಟೈಟನ್ಸ್ ತಂಡ ಆಶಿಶ್ ನೆಹ್ರಾ ಅವರ ಮಾರ್ಗದರ್ಶನದಲ್ಲಿ ಆಡಿದ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿತ್ತು. 2023ರಲ್ಲಿ ಫೈನಲ್ ತಲುಪಿದ್ದ ಗುಜರಾತ್, ಈ ವರ್ಷದ ಟೂರ್ನಿಯಲ್ಲಿ ಶುಭಮನ್ ಗಿಲ್ ನಾಯಕತ್ವದಲ್ಲಿ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು

ಆಶಿಶ್ ನೆಹ್ರಾ ತಂಡವನ್ನು ತೊರೆಯಲು ನಿರ್ಧರಿಸಿರುವ ಕಾರಣ, ಹೊಸ ಕೋಚ್ ಹುಡುಕಾಟದಲ್ಲಿರುವ ಗುಜರಾತ್ ಫ್ರಾಂಚೈಸಿ ಭಾರತದ ಸರ್ವಶ್ರೇಷ್ಠ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮೇಲೆ ಕಣ್ಣಿಟ್ಟಿದೆ. ಪಂಜಾಬ್’ನ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಐಪಿಎಲ್’ನಲ್ಲಿ ಒಟ್ಟು ಆರು ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ : Mohammed Shami: ಆತ್ಮಹತ್ಯೆಗೆ ಮುಂದಾಗಿದ್ದ ಮೊಹಮ್ಮದ್ ಶಮಿ, ಸ್ನೇಹಿತ ಬಿಚ್ಚಿಟ್ಟ ಸ್ಫೋಟಕ ಸತ್ಯ
2008ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ನಂತರ ಪುಣೆ ವಾರಿಯರ್ಸ್, ಡೆಲ್ಲಿ ಡೇರ್ ಡೆನಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪರ ಆಡಿದ್ದರು. 2016ರಲ್ಲಿ ಯುವರಾಜ್ ಸಿಂಗ್ ಐಪಿಎಲ್ ಚಾಂಪಿಯನ್ ಆದ ಸನ್ ರೈಸರ್ಸ್ ತಂಡದಲ್ಲಿದ್ದರು. ಅದೇ ರೀತಿ 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಚಾಂಪಿಯನ್’ಷಿಪ್ ಗೆದ್ದಾಗಲೂ ಯುವಿ ಮುಂಬೈ ತಂಡದ ಭಾಗವಾಗಿದ್ದರು.
ಇದನ್ನೂ ಓದಿ : KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ
Yuvraj Singh New Role Head Coach Gujarat Titans IPL 2025