ಕೊಲಂಬೋ: ಭಾರತ ಕ್ರಿಕೆಟ್ ತಂಡದ (Indian Cricket Team) ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ ಬುಧವಾರ ದೊಡ್ಡ ಅಗ್ನಿಪರೀಕ್ಷೆ ಎದುರಾಗಲಿದೆ. ಶ್ರೀಲಂಕಾದಲ್ಲಿ ಭಾರತ ತಂಡದ ಏಕದಿನ ಸರಣಿಯನ್ನಾಡುತ್ತಿದ್ದು (India Vs Sri Lanka ODI series), ಮೊದಲ ಪಂದ್ಯ ಟೈಗೊಂಡಿದ್ದರೆ ಎರಡನೇ ಪಂದ್ಯವನ್ನು ಗೆದ್ದುಕೊಂಡಿರುವ ಶ್ರೀಲಂಕಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಸರಣಿ ಸೋಲಿನ ಅವಮಾನವನ್ನು ತಪ್ಪಿಸಿಕೊಳ್ಳಬೇಕಾದರೆ ಭಾರತ 3ನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸರಣಿ ಗೆಲ್ಲುವ ಅವಕಾಶ ಭಾರತದ ಕೈ ತಪ್ಪಿದ್ದು, ಈಗಿರುವುದು ಸರಣಿ ಸಮಬಲದ ಅವಕಾಶ ಅಷ್ಟೇ.

ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ತಂಡ, ಶ್ರೀಲಂಕಾ ನೆಲದಲ್ಲಿ ಏಕದಿನ ಸರಣಿ ಗೆಲ್ಲಲು ವಿಫಲವಾಗಿದೆ. 2006ರಲ್ಲಿ ನಡೆದ ಏಕದಿನ ಸರಣಿ ಡ್ರಾಗೊಂಡಿತ್ತು. ನಂತರ ಶ್ರೀಲಂಕಾದಲ್ಲಿ ನಡೆದ ಎಲ್ಲಾ ಏಕದಿನ ಸರಣಿಗಳನ್ನು ಭಾರತ ಗೆದ್ದಿದೆ. ಆದರೆ ಈ ಬಾರಿ ಟೀಮ್ ಇಂಡಿಯಾಗೆ ಸರಣಿ ಗೆಲ್ಲುವ ಅವಕಾಶ ಕೈ ತಪ್ಪಿ ಹೋಗಿದೆ.
ಇದನ್ನೂ ಓದಿ :Dinesh Karthik: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪರ ಆಡಲಿದ್ದಾನೆ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್
ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು 2ನೇ ಸರಣಿ. ಇದಕ್ಕೂ ಮೊದಲು ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ವೈಟ್ ವಾಶ್ ಮಾಡಿತ್ತು. ಆದರೆ ಏಕದಿನ ಸರಣಿಯಲ್ಲಿ ಗಂಭೀರ್ ಮುಂದಾಳತ್ವದ ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಒಂದು ವೇಳೆ 3 ಪಂದ್ಯದಲ್ಲೂ ಭಾರತ ಸೋತು, ಸರಣಿ ಸೋಲುಂಡರೆ ಕೋಚ್ ಗೌತಮ್ ಗಂಭೀರ್ ಅವರಿಗೆ ಅತೀ ದೊಡ್ಡ ಮುಖಭಂಗ ಎದುರಾಗಲಿದೆ.
ಭಾರತ Vs ಶ್ರೀಲಂಕಾ 3ನೇ ಏಕದಿನ ಪಂದ್ಯ
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಆರ್.ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್

ಇದನ್ನೂ ಓದಿ : Rahul Dravid Paris Olympics 2024 : ಬಾಲ್ಯದಲ್ಲಿ ಆಡಿದ ಕ್ರೀಡೆಯನ್ನು ಒಲಿಂಪಿಕ್ಸ್’ನಲ್ಲಿ ವೀಕ್ಷಿಸಿದ ರಾಹುಲ್ ದ್ರಾವಿಡ್
ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI:
1. ರೋಹಿತ್ ಶರ್ಮಾ (ನಾಯಕ)
2. ಶುಭಮನ್ ಗಿಲ್ (ಉಪನಾಯಕ)
3. ವಿರಾಟ್ ಕೊಹ್ಲಿ
4. ಶ್ರೇಯಸ್ ಅಯ್ಯರ್
5. ಕೆ.ಎಲ್ ರಾಹುಲ್ (ವಿಕೆಟ್ ಕೀಪರ್)
6. ಅಕ್ಷರ್ ಪಟೇಲ್
7. ಶಿವಂ ದುಬೆ
8. ವಾಷಿಂಗ್ಟನ್ ಸುಂದರ್
9. ಕುಲ್ದೀಪ್ ಯಾದನ್
10. ಮೊಹಮ್ಮದ್ ಸಿರಾಜ್
11. ಅರ್ಷದೀಪ್ ಸಿಂಗ್
ಇದನ್ನೂ ಓದಿ : Vinod Kambli: ಕ್ರಿಕೆಟ್ ದೇವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕಥೆ ಕೇಳಿದ್ರೆ ದಂಗಾಗಿ ಹೋಗ್ತೀರಿ !
India vs Sri Lanka Big Test for Gautam Gambhir