ಗ್ರೇಟ್ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಸದ್ಯ ಮಹಾರಾಜಾ ಟ್ರೋಫಿಯಲ್ಲಿ (Maharaja Trophy 2024) ಮಿಂಚು ಹರಿಸಿದ್ದಾರೆ. ಅಲ್ಲದೇ U-19 ಭಾರತ ತಂಡಕ್ಕೂ ಆಯ್ಕೆಯಾಗಿದ್ದಾರೆ. ಆದ್ರೆ ಬೇಸರದ ಸಂಗತಿ ಅಂದ್ರೆ ಸಮಿತ್ ದ್ರಾವಿಡ್ U-19 ವಿಶ್ವಕಪ್ ಮಿಸ್ ಮಾಡಿಕೊಳ್ಳಲಿದ್ದಾರೆ ಅನ್ನೋದು. ಅಷ್ಟಕ್ಕೂ ಸಮಿತ್ಗೆ ವಿಶ್ವಕಪ್ ಚಾನ್ಸ್ ಮಿಸ್ ಆಗೋಕೆ ಕಾರಣವೇನು ಗೊತ್ತಾ ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ U-19 ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪುದುಚೇರಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಲಿದ್ದು, ಚೆನ್ನೈನಲ್ಲಿ ಎರಡು ನಾಲ್ಕು ದಿನಗಳ ಪಂದ್ಯ ನಡೆಯಲಿದೆ. ಈ ಸರಣಿಗೆ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಇದೇ ಸರಣಿ ಸಮಿತ್ ದ್ರಾವಿಡ್ಗೆ ಕ್ರಿಕೆಟ್ ಬದುಕಿಗೆ ಮೈಲಿಗಲ್ಲಾಗಲಿದೆ.
ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ರೆ, ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ದೀರ್ಘ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಹಾಗೂ ನಾಲ್ಕು ದಿನಗಳ ಪಂದ್ಯಾವಳಿಯಲ್ಲಿಯೂ ಸಮಿತ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್ಕೆ ತಂಡಕ್ಕೆ ರಿಷಬ್ ಪಂತ್
ಸಮಿತ್ ದ್ರಾವಿಡ್ಗೆ U19 ವಿಶ್ವಕಪ್ ಮಿಸ್ ?
ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಆದರೆ ಮುಂಬರುವ ICC U-19 ಕ್ರಿಕೆಟ್ ವಿಶ್ವಕಪ್ನಲ್ಲಿ ಆಡೋದಕ್ಕೆ ಸಮಿತ್ ದ್ರಾವಿಡ್ಗೆ ಸಾಧ್ಯವಿಲ್ಲ. ನವೆಂಬರ್ 10, 2005 ರಂದು ಜನಿಸಿರುವ ಸಮಿತ್ ದ್ರಾವಿಡ್ ಮುಂದಿನ ಎರಡು ತಿಂಗಳಲ್ಲಿ 19ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಐಸಿಸಿ ಅಂಡರ್- 19 ವಿಶ್ವಕಪ್ 2026ಕ್ಕೆ ನಡೆಯಲಿದೆ.
ವಿಶ್ವಕಪ್ ನಡೆಯುವ ವೇಳೆಗೆ ಸಮಿತ್ ದ್ರಾವಿಡ್ಗೆ 21 ವರ್ಷ ತುಂಬಲಿದೆ. ಎರಡು ವರ್ಷಗಳ ಅಂತರದಿಂದ ಸಮಿತ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕನಸಿನಿಂದ ವಂಚಿತರಾಗಲಿದ್ದಾರೆ. ಸಮಿತ್ ದ್ರಾವಿಡ್ ತಂದೆ ರಾಹುಲ್ ದ್ರಾವಿಡ್ ಕೂಡ 1992 ರಲ್ಲಿ U-19 ವಿಶ್ವಕಪ್ಗೆ ಆಯ್ಕೆಯಾಗಿದ್ದರು. ನ್ಯೂಜಿಲೆಂಡ್ ವಿರುದ್ದ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿದ್ದರೂ ಕೂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲೇ ಇಲ್ಲ.
ಇದನ್ನೂ ಓದಿ : IPL 2025 Auction : ಸೂರ್ಯಕುಮಾರ್ಗಾಗಿ ಶ್ರೇಯಸ್ ಅಯ್ಯರ್ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದೆ ಕೆಎಸ್ಸಿಎ ಮಹಾರಾಜಾ T20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಆಡಿರುವ ಸಮಿತ್ ದ್ರಾವಿಡ್ ನಿರೀಕ್ಷೆಗೆ ತಕ್ಕ ಆಟದ ಪ್ರದರ್ಶನ ನೀಡಿಲ್ಲ. ಏಳು ಪಂದ್ಯಗಳಲ್ಲಿ ಸಮಿತ್ ಗಳಿಸಿದ್ದು, ಕೇವಲ 82 ರನ್ ಆದರೆ ಅವರು ಗಳಿಸಿದ ಅತ್ಯಧಿಕ 33ರನ್ ಎಲ್ಲರ ಗಮನ ಸೆಳೆದಿದೆ. ಆದರೆ ಬೌಲಿಂಗ್ ಮಾಡೋದಕ್ಕೆ ಅವಕಾಶ ಧಕ್ಕಿಲ್ಲ.
ಇದನ್ನೂ ಓದಿ : ಆರ್ಸಿಬಿ ಮುಂದಿನ ನಾಯಕ ಯಾರು ? ವಿರಾಟ್ ಕೊಹ್ಲಿ Vs ಕೆಎಲ್ ರಾಹುಲ್ ನಡುವೆ ಬಿಗ್ಫೈಟ್
ಸಮಿತ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಎಂಟು ಪಂದ್ಯಗಳಲ್ಲಿ 362 ರನ್ ಗಳಿಸಿ 16 ವಿಕೆಟ್ ಪಡೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ದದ ಪಂದ್ಯದಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 98 ರನ್ ಗಳಿಸಿದ್ರೆ, ಮುಂಬೈ ವಿರುದ್ದ ಪಂದ್ಯದಲ್ಲಿ ನಿರ್ಣಾಯಕ ಎರಡು ವಿಕೆಟ್ ಕಬಳಿಸಿದ್ದಾರೆ. ಸದ್ಯ ಸುಮಿತ್ ಭಾರತ ತಂಡವನ್ನು ಪ್ರತಿನಿಧಿಸಲು ಕಾತರರಾಗಿದ್ದಾರೆ. ಆದರೆ ವಿಶ್ವಕಪ್ ಮಿಸ್ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
Rahul Dravid son Samit Dravid will miss the ICC U-19 World Cup 2026