Sameer acharay ; ಹುಬ್ಬಳ್ಳಿ: ಒಂದೆಡೆ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ (Bigboss Season 5) ನ ಹನ್ನೊಂದನೇ ಸೀಸನ್ ಭಾನುವಾರದಿಂದ ಆರಂಭವಾಗಿದ್ದರೆ ಅದೇ ದಿನ ಸೀಸನ್ ಐದರ ಸ್ಪರ್ಧಿ ಸಮೀರ್ ಆಚಾರ್ಯ ದಂಪತಿ ಕೌಟುಂಬಿಕ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಆಚಾರ್ಯ (Shravani Acharya) ತಮ್ಮ ಮಗುವಿಗೆ ಬೈದಿದ್ದಕ್ಕೆ ಗಂಡ ಸಮೀರ್ ಆಚಾರ್ಯ, ಅತ್ತೆ ಹಾಗೂ ಮಾವ ಥಳಿಸಿದ್ದಾರೆ ಶ್ರಾವಣಿ ನಿನ್ನೆ ಹುಬ್ಬಳ್ಳಿಯ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಮೊಮ್ಮಗಳು ಅಳುತ್ತಿದ್ದ ಕಾರಣಕ್ಕೆ ಶ್ರಾವಣಿ ಬೈದಿದ್ದಾರೆ ಎಂದು ಶ್ರಾವಣಿ ಅವರಿಗೆ ಸಮೀರ್ ಆಚಾರ್ಯ ಅವರ ತಂದೆ ಬೈದಿದ್ದು, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ.

ನಂತರ ಪತಿ ಸಮೀರ್ ಆಚಾರ್ಯ ತಮ್ಮ ತಂದೆ ತಾಯಿ ಜೊತೆ ಸೇರಿಕೊಂಡು ತನ್ನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ ಆರೋಪ ಮಾಡಿದ್ದು, ಈ ಗಲಾಟೆ ನಡೆಯುತ್ತಿದ್ದ ವೇಳೆ ಶ್ರಾವಣಿ ಇನ್ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದು, ಆಗ ಫೋನ್ ಒಡೆದು ಹಾಕಿದ ಕಾರಣ ಕೈ ಮತ್ತು ಮುಖಕ್ಕೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ ಗಲಾಟೆಯಲ್ಲಿ ಸಮೀರ್ ಆಚಾರ್ಯ ತಂದೆ ರಾಘವೇಂದ್ರ ಮಣ್ಣೂರ ಅವರ ತಲೆಗೂ ಗಾಯವಾಗಿದ್ದು, ಶ್ರಾವಣಿ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಸಮೀರ್ ಆಚಾರ್ಯ ತಂದೆ ಕೂಡಾ ಸೊಸೆ ಮೇಲೆ ಪೊಲೀಸ್ ದೂರು ದಾಖಲಿಸಲು ಮುಂದಾಗಿದ್ದರು.

ಗಲಾಟೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ ಬಳಿಕ ಪೊಲೀಸರು ಕೌನ್ಸಿಲಿಂಗ್ ನಡೆಸಿ ದಂಪತಿ ಮತ್ತು ಅತ್ತೆ ಮಾವ ಅವರನ್ನು ಒಂದಾಗಿಸಿದ್ದಾರೆ. ಪತಿ ಮತ್ತು ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಸಮೀರ್ ಆಚಾರ್ಯ ಮತ್ತು ಶ್ರಾವಣಿ ಇಬ್ಬರನ್ನೂ ಒಂದು ಮಾಡಿದ್ದಾರೆ.
ಪೊಲೀಸ್ ಕೌನ್ಸಿಲಿಂಗ್ ಬಳಿಕ ಯಾವುದೇ ದೂರು ದಾಖಲಿಸದೇ ಇನ್ನು ಮುಂದೆ ಹೀಗೆ ಘಟನೆ ಆಗುವುದಿಲ್ಲ ಅಂತ ಅರ್ಜಿ ಬರೆದುಕೊಟ್ಟು ಸಮೀರ್ ಆಚಾರ್ಯ ದಂಪತಿ ಮನೆಗೆ ಮರಳಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನ ಹನ್ನೊಂದನೆಯ ಸೀಸನ್ ನ ಗ್ರ್ಯಾಂಡ್ ಓಪನಿಂಗ್ ದಿನವೇ ಸೀಸನ್ ಐದರ ಸ್ಫರ್ಧಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಇಳಿದಿದ್ದಾರೆ.
Bigboss season five contestant Sameer Acharay family fight