Mysore Dasara Inauguration: ಮೈಸೂರು; ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.ಬೆಳಗ್ಗೆ 9.15 ಕ್ಕೆ ವೃಶ್ಚಿಕ ಲಗ್ನದಲ್ಲಿ ಅಧಿಕೃತವಾಗಿ ಮೈಸೂರು ದಸರಾಗೆ ಚಾಲನೆ ನೀಡಲಾಯಿತು. ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ (Hampa Nagarajaiah) ಅವರು ದಸರಾಗೆ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಯಿತು. ಇನ್ನು ದಸರಾ ಉದ್ಘಾಟನೆಗೂ ಮೊದಲು ಚಾಮುಂಡಿ ಪ್ರಾಧಿಕಾರ ಸಿಎಂ ಸಿದ್ದರಾಮಯ್ಯ (Siddaramaiah), ಅತಿಥಿಗಳು ಹಾಗೂ ಎಲ್ಲಾ ಸಚಿವರನ್ನು ಪೂರ್ಣ ಕುಂಭ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ತಂಡಗಳ ಮೂಲಕ ಸ್ವಾಗತ ಕೋರಿತು.
ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ನಾಡಿನ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಸಚಿವ ಮಹದೇವಪ್ಪ, ಕೆ.ವೆಂಕಟೇಶ್ ಶಾಸಕ ತನ್ವೀರ್ ಸೇಠ್ ಸಾಥ್ ನೀಡಿದರು.

Image Credit to Original Source
ದಸರಾ ಉದ್ಘಾಟನೆಯ ಬಳಿಕ ಮಾತನಾಡಿದ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬವಾಗಿದೆ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ ಎಂದು ಹೇಳಿದರು. ದಸರಾ ಕೇವಲ ಅರಮನೆಗೆ ಸೀಮಿತವಾಗಿರುವ ಹಬ್ಬವಲ್ಲ . ಅದು ಜನರ ಆರಿಸಿದ ಸರಕಾರ ನಡೆಸುವ ಜನರ ಹಬ್ಬವಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು ಎಷ್ಟೇ ಅಡ್ಡಿಗಳು ಎದುರಾದರೂ ಎಲ್ಲದಕ್ಕೂ ಸೆಡ್ಡು ಹೊಡೆದು ನಿಂತಿದ್ದಾರೆ ಎಂದರು.

Image Credit to Original Source
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ದಸರಾ ಅಧಿಕಾರಿಗಳ ಹಬ್ಬವಾಗದೇ ಅದ್ದೂರಿಯಾಗಿ ಹೆಚ್ಚು ಜನ ಭಾಗವಹಿಸುವಂತಾಗಬೇಕು. ಅಲ್ಲದೇ ದಸರಾ ಉದ್ಘಾಟಕಾ ಹಂಪಾ ನಾಗರಾಜಯ್ಯ ಅವರು ಸರ್ಕಾರ ಅಸ್ಥಿರದ ಬಗ್ಗೆ ಹೇಳಿದ ಮಾತಿಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು. ಹಂಪನಾ ಮತ್ತು ಕಮಲಾ ಹಂಪನಾ ಜೋಡಿ ಮಾದರಿ ಜೋಡಿ ಎಂದರು.ಕನ್ನಡ ಸಾರಸ್ವತ ಲೋಕಕ್ಕೆ ಹಂಪನಾ ಕೊಡುಗೆ ಅಪಾರವಾದ್ದದ್ದು ಎಂದು ಹೊಗಳಿದ್ರು.ರಾಜ್ಯ ಕಂಡಂತಹ ಅಪರೂಪದ ಸಾಹಿತಿಗಳಲ್ಲಿ ಹಂಪ ನಾಗರಾಜಯ್ಯ ಅವರು ಪ್ರಮುಖರು ಎಂದರು.ಅಲ್ಲದೇ ನಾವು 5 ವರ್ಷ ಆಡಳಿತ ಮಾಡಿಯೇ ಮಾಡುತ್ತೇವೆ ಎಂದರು. ನನ್ನ ಮೇಲೆ ಚಾಮುಂಡೇಶ್ವರಿಯ ಆಶೀರ್ವಾದವಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.
Nadoja Hampa Nagarajaiah inaugurated Mysore Dasara