Public Holiday : ದೀಪಾವಳಿ ಆರಂಭವಾಗುತ್ತಿದ್ದಂತೆಯೇ ಹಬ್ಬಗಳ ಸುಗ್ಗಿ. ದೀಪಾವಳಿ ಬೆನ್ನಲ್ಲೇ ಕನ್ನಡ ರಾಜ್ಯೋತ್ಸವ ನಡೆದಿದೆ. ಅದ್ರಲ್ಲೂ ಈ ಬಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಸುಗ್ಗಿಯೇ ಸರಿ. ಯಾಕೆಂದ್ರೆ ಶಾಲೆ, ಕಾಲೇಜುಗಳಿಗೆ ಈ ಬಾರಿ ಒಂಬತ್ತು ದಿನಗಳ ಕಾಲ ರಜೆ ದೊರೆಯಲಿದೆ.

ರಜೆ ಅಂದ್ರೆ ಸಾಕು ಮತ್ತು ಖುಷಿ ಪಡ್ತಾರೆ. ದಸರಾ ರಜೆ ಮುಗಿಸಿ ಶಾಲೆ, ಕಾಲೇಜುಗಳಿಗೆ ಮರಳಿರುವ ವಿದ್ಯಾರ್ಥಿ ಗಳಿಗೆ ಇದೀಗ ದೀಪಾವಳಿಯ ಸಂದರ್ಭದಲ್ಲಿ ಸಾಲು ಸಾಲು ರಜೆ ಘೋಷಣೆ ಆಗಿದೆ. ಕೆಲವು ಶಾಲೆಗಳಿಗೆ ಗುರುವಾರದಿಂದ ಆರಂಭಗೊಂಡಿರುವ ರಜೆ ಭಾನುವಾರದ ವರೆಗೂ ಮುಂದುವರಿದಿದೆ. ಹಾಗಾದ್ರೆ ನವೆಂಬರ್ ತಿಂಗಳಲ್ಲಿ ಯಾವ ದಿನದಂದು ವಿದ್ಯಾರ್ಥಿಗಳು ರಜೆ ಪಡೆಯಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಬಿಎಡ್ ಕಡ್ಡಾಯವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಈ ಬಾರಿ ದೀಪಾವಳಿ, ರಾಜ್ಯೋತ್ಸವ ಒಟ್ಟಾಗಿ ಬಂದಿದ್ದು, ನವೆಂಬರ್ ತಿಂಗಳಲ್ಲಿ ಸಿಗುತ್ತಿದ್ದ ರಜೆಯ ದಿನಗಳಲ್ಲಿ ಏರಿಕೆಯಾಗಿದೆ. ಈ ತಿಂಗಳು ಬಂದಿರುವ ಹಬ್ಬ ಹರಿದಿನ ಹಾಗೂ ಭಾನುವಾರದ ರಜೆಯೂ ಸೇರಿದಂತೆ ಒಟ್ಟು ಸುಮಾರು 12 ದಿನ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.
ನವೆಂಬರ್ 1 – ದೀಪಾವಳಿ ರಜೆ
ನವೆಂಬರ್ 2024 ರಲ್ಲಿ ಸಾರ್ವಜನಿಕ ರಜೆಯ ವೇಳಾಪಟ್ಟಿ:
ನವೆಂಬರ್ 2 – ಗೋವರ್ಧನ ಪೂಜೆ ರಜೆ
3 ನವೆಂಬರ್ – ಭಾಯಿ ದೂಜ್
7 ನವೆಂಬರ್ – ಚಾಟ್ ಪೂಜೆ
15 ನವೆಂಬರ್ – ಗುರುನಾನಕ್ ಜಯಂತಿ
ಭಾನುವಾರ ರಜೆ : ನ 3, 10, 17, 24
ಇದನ್ನೂ ಓದಿ : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ

ಉತ್ತರಾಖಂಡ ರಾಜ್ಯದಲ್ಲಿ ಶಾಲೆಗಳು ನವೆಂಬರ್ 1ರಿಂದಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, ಇದು ಸರ್ಕಾರಿ ರಜಾದಿನವಲ್ಲ ಏಕೆಂದರೆ ಪ್ರದೇಶದ ಇತರ ಹಬ್ಬಗಳು ದೀಪಾವಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿವೆ.
ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ
ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಅನ್ನು ಒಳಗೊಂಡಿರುವ ಈಶಾನ್ಯದಲ್ಲಿ ಯಾವುದೇ ರಜಾದಿನವನ್ನು ಘೋಷಿಸದಿದ್ದರೂ, ಇತರ ಹಬ್ಬಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.
Public Holiday Schools and colleges, Governament offices are closed for 9 days