Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ

Karnataka New Schools : ರಾಜ್ಯದಲ್ಲಿ ಶಾಲಾರಂಭಕ್ಕೆ ದಿನಗಣನೆ ನಡೆದಿದೆ. ಬೇಸಿಗೆ ರಜೆ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಮೇ 29 ರಿಂದ ಬಾಗಿಲು ತೆರೆಯಲಿವೆ. ಈ ಮಧ್ಯೆ ರಾಜ್ಯದಲ್ಲಿ ಹಾಗೂ ರಾಜ್ಯ ರಾಜಧಾನಿಯಲ್ಲಿ ಹೊಸ ಶಾಲೆಗಳನ್ನು ತೆರೆಯಲು ಹಿಂದೆಂದಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು

Karnataka New Schools : ರಾಜ್ಯದಲ್ಲಿ ಶಾಲಾರಂಭಕ್ಕೆ ದಿನಗಣನೆ ನಡೆದಿದೆ. ಬೇಸಿಗೆ ರಜೆ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಮೇ 29 ರಿಂದ ಬಾಗಿಲು ತೆರೆಯಲಿವೆ. ಈ ಮಧ್ಯೆ ರಾಜ್ಯದಲ್ಲಿ ಹಾಗೂ ರಾಜ್ಯ ರಾಜಧಾನಿಯಲ್ಲಿ ಹೊಸ ಶಾಲೆಗಳನ್ನು ತೆರೆಯಲು ಹಿಂದೆಂದಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಸಿನಿಮಾ,ಉದ್ಯಮ ಹಾಗೂ ಇತರ ಇಂಡಸ್ಟ್ರಿಗಳಂತೆ ಶಿಕ್ಷಣ ಕ್ಷೇತ್ರದಲ್ಲೂ ಬಂಡವಾಳ ಹೂಡಿ ಲಾಭ ಪಡೆಯುವ ಪ್ರವೃತ್ತಿ ಹೆಚ್ಚತೊಡಗಿದೆ.

Karnataka New Schools Demand Thousands of applications have been submitted seeking permission
Image Credit to Original Source

ಮೊದಲಿನಂತರ ಶಿಕ್ಷಣ ಕ್ಷೇತ್ರ ಈಗ ಜ್ಞಾನದ ದೇಗುಲವಾಗಿ ಉಳಿದಿಲ್ಲ.‌ಬದಲಾಗಿ ಈಗ ಶಿಕ್ಷಣವನ್ನು ವ್ಯಾಪಾರದ ಸರಕಾಗಿ ಬಳಸಲಾಗುತ್ತಿದೆ. ಇದಕ್ಕೆ ತಾಜಾ ಸಾಕ್ಷಿ ಈ ಭಾರಿ ನೂತನ ಶಾಲೆಗಳ ಆರಂಭಕ್ಕೆ ಸಲ್ಲಿಕೆಯಾದ ಅರ್ಜಿಗಳು. ಹೌದು 2024-25ನೇ ಸಾಲಿನಲ್ಲಿ ಹೊಸ ಶಾಲೆ ಮತ್ತು ಹಳೇ ತರಗತಿಗಳ ಉನ್ನತೀಕರಣ ಕೋರಿ 1,404 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಆರು ನೂರಕ್ಕೂ ಹೆಚ್ಚು ಅರ್ಜಿಗಳು ಹೊಸ ಶಾಲೆ ಆರಂಭಕ್ಕೆ ಸಲ್ಲಿಕೆಯಾಗಿರುವಂತದ್ದು.

ಇನ್ನು 2021-22ನೇ ಸಾಲಿನಲ್ಲಿ ಈ ಅರ್ಜಿಗಳ ಸಂಖ್ಯೆ 912ರಷ್ಟಿತ್ತು. 2023-24 ಸಾಲಿನಲ್ಲಿ 1,542 ಅರ್ಜಿಗಳು ಸಲ್ಲಿಕೆ ಯಾಗಿದ್ದವು. ವಿಶೇಷ ಎಂದರೆ, ಈ ವರ್ಷ ಸಲ್ಲಿಕೆಯಾಗಿರುವ 1,404 ಅರ್ಜಿಗಳಲ್ಲಿ 413 ಅರ್ಜಿಗಳಿಗೆ ಮಾತ್ರ ಶಾಲೆ ತೆರೆಯುವುದಕ್ಕೆ ಅನುಮತಿ ಸಿಕ್ಕಿದೆ. ಉಳಿದ 624 ಅರ್ಜಿಗಳನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಹಲವು ಕಾರಣಕ್ಕೆ ರದ್ದುಗೊಳಿಸಿದೆ. 367 ಅರ್ಜಿಗಳನ್ನು ಕಾಯ್ದಿರಿಸಿದೆ.

ಇದನ್ನೂ ಓದಿ : ಅವಧಿಗೂ ಮುನ್ನ ಶಾಲಾರಂಭ: ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳ ಹಕ್ಕು ಆಯೋಗದಿಂದ ಶಾಕ್

ಹೊಸ ಶಾಲೆ ಆರಂಭ ಮತ್ತು ಹೊಸ ತರಗತಿಗಳ ಉನ್ನತೀಕರಣಕ್ಕೆ ಶಿಕ್ಷಣ ಇಲಾಖೆಯು ಸಾಕಷ್ಟು ಮಾನದಂಡಗಳನ್ನು ನಿಗದಿ ಮಾಡಿದೆ. ಇವುಗಳನ್ನು ಅನುಸರಿಸಿ ಮಾನ್ಯತೆ ಪಡೆಯುವುದು ಕೂಡ ಸುಲಭದ ಮಾತಲ್ಲ, ಇದರಿಂದಾಗಿ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳಿಗೂ ಮಾನ್ಯತೆ ಸಿಗುವುದಿಲ್ಲ. ಈ ವರ್ಷ 1,404 ಅರ್ಜಿಗಳಲ್ಲಿ ಹೊಸ ಶಾಲೆ ಆರಂಭಿಸಲು 597 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 807 ಶಾಲೆಗಳು ಹಾಲಿ ಇರುವ ಸ್ಕೂಲ್ ಗಳಲ್ಲೇ ಹೊಸ ತರಗತಿ ಆರಂಭಿಸಲು ಅನುಮತಿ ಕೋರಿವೆ.

Karnataka New Schools Demand Thousands of applications have been submitted seeking permission
Image Credit to Original Source

ಶಾಲೆಗಳಿಗೆ ಶಿಕ್ಷಣ ಇಲಾಖೆ ನಿಗದಿ ಪಡಿಸಿರೋ ಮಾನದಂಡಗಳೇನು ಅನ್ನೋದನ್ನು ನೋಡೋದಾದರೇ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭಿಸೋ ಶಾಲೆಗಳಿಗೆ ಕನಿಷ್ಠ 2 ಸಾವಿರ ಚದರ ಮೀಟ‌ರ್ ಸ್ಥಳವಿರಬೇಕು. ಆಟದ ಮೈದಾನ,ಕುಡಿಯುವ ನೀರು, ಶೌಛಾಲಯದ ಸೌಲಭ್ಯವಿರಬೇಕು. ಅಲ್ಲದೇ ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಉಳಿದ ಕಡೆಗಳಲ್ಲಾದರೇ, 4 ಸಾವಿರ ಚದರ ಮೀಟ‌ರ್ ಸ್ಥಳವಿರಬೇಕು. ಸ್ವಂತ ಅಥವಾ ಕನಿಷ್ಠ 30 ವರ್ಷಕ್ಕೆ ಭೋಗ್ಯಕ್ಕೆ ಪಡೆದಿರಬೇಕು ಪ್ರತಿ ಕೊಠಡಿಯು 18/20 ಅಡಿಗಳ ವಿಸ್ತೀರ್ಣ ಹೊಂದಿರಬೇಕು ಎಂಬ ನಿಯಮವಿದೆ.

ಇದನ್ನೂ ಓದಿ : PG-CET Exams :ಜುಲೈ 13-14 ರಂದು ಪಿಜಿ-ಸಿಇಟಿ ಪರೀಕ್ಷೆ: ಅರ್ಜಿ ಸಲ್ಲಿಕೆಗೆ ಜೂನ್ 17 ಕೊನೆಯ ದಿನ

ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೇ ಈ ವರ್ಷವೇ ಅತಿ ಹೆಚ್ಚು ಶಾಲೆಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇವುಗಳ ಪೈಕಿ ಹಲವು ಅರ್ಜಿಗಳು ತಿರಸ್ಕೃತಗೊಂಡಿವೆ. ಮೂಲಗಳ ಮಾಹಿತಿ ಪ್ರಕಾರ ಬೆಂಗಳೂರಿನ ಶಾಲೆಗಳ ಶುಲ್ಕ ವ್ಯವಸ್ಥೆ ಎಲ್ಲೇ ಮೀರಿದೆ. ಅತಿಯಾದ ಡೊನೇಶನ್ ಹಾಗೂ ಫೀಸ್ ನಿಂದಾಗಿ ಬೆಂಗಳೂರು ಶಾಲೆ ಹಾಗೂ ಶಿಕ್ಷಣ ಉದ್ಯಮ ಎನ್ನಿಸಿದೆ. ಇದರಿಂದಾಗಿ ತಮಿಳುನಾಡು,ಕೇರಳ ಹಾಗೂ ಆಂಧ್ರಪ್ರದೇಶದಿಂದ ಉದ್ಯಮಿಗಳು ಬೆಂಗಳೂರಿನಲ್ಲಿ ಶಾಲೆಗಳಲ್ಲಿ ಹಣ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರಂತೆ.

ಇದರಿಂದಾಗಿ ಶಾಲೆಗಳ ಅನುಮತಿ ಗೆ ಹಿಂದೆಂದಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆ ಯಾಗುತ್ತಿವೆ. ಸದ್ಯ ರಾಜ್ಯದಲ್ಲಿ 17,114 ಖಾಸಗಿ ಶಾಲೆಗಳಿದ್ದು, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹೊಸ ಶಾಲೆಗಳಿಗೆ ಅನುಮತಿ ನೀಡೋದಿಲ್ಲ ಎನ್ನುತ್ತಿದ್ದಾರೆ. ಆದರೆ ಒಳಗೊಳಗೆ ಅನುಮತಿ ನೀಡೋ ಪ್ರಕ್ರಿಯೆಯನ್ನು ನಡೆಸುತ್ತಾರೆ ಎಂಬ ದೂರು ಕೇಳಿಬಂದಿದೆ.

ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ

Karnataka New Schools Demand Thousands of applications have been submitted seeking permission

Comments are closed.