IND vs SA T20 : ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ಶತಕ ಬಾರಿಸಿದ್ದಾರೆ. ಟಿ೨೦ ಕ್ರಿಕೆಟ್‌ನಲ್ಲಿ ಎರಡನೇ ಶತಕ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಹೊಸ ದಾಖಲೆ ಬರೆದಿದ್ದಾರೆ. ಇನ್ನೊಂದೆಡೆಯಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡಕ್ಕೆ ಬರೋಬ್ಬರಿ 203 ರನ್‌ಗಳ ದಾಖಲೆಯ ಸವಾಲು ಒಡ್ಡಿದೆ.

ಡರ್ಬ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಭರ್ಜರಿ ರನ್ ಕಲೆ ಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕ್ರಿಕೆಟ್ ತಂಡ ಅಭಿಷೇಕ್ ಶರ್ಮಾ ಮೂಲಕ ಆರಂಭಿಕ ಆಘಾತ ಅನುಭವಿಸಿತ್ತು. ನಂತರ ಆರಂಭಿಕ ಸಂಜು ಸ್ಯಾಮ್ಸನ್ ಜೊತೆಯಾದ ಸೂರ್ಯ ಕುಮಾರ್ ಯಾದವ್ ಸ್ಪೋಟಕ ಆಟಕ್ಕೆ ಮನ ಮಾಡಿದ್ರು.
ಇದನ್ನೂ ಓದಿ : IPL 2025 Auction : ಐಪಿಎಲ್ 2025 ಆಟಗಾರರ ಹರಾಜು : ದಾಖಲೆಯ 1,574 ಆಟಗಾರರ ನೋಂದಣಿ
ಸೂರ್ಯ ಕುಮಾರ್ ಯಾದವ್ 17 ಎಸೆತಗಳಲ್ಲಿ ಸೊಗಸಾದ ಒಂದು ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 21 ರನ್ ಬಾರಿಸಿ ಔಟಾದ್ರೆ ಸಂಜು ಸ್ಯಾಮ್ಸನ್ ತನ್ನ ಆಟವನ್ನು ಮುಂದುರಿಸಿದ್ರು. ತಿಲಕ್ ಶರ್ಮಾ 18 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 33 ರನ್ ಬಾರಿಸಿದ್ರು. ಒಂದೆಡೆಯಲ್ಲಿ ವಿಕೆಟ್ ಉದುರುತ್ತಿದ್ದರೂ ಕೂಡ ಸ್ಯಾಮ್ಸನ್ ತಮ್ಮ ಆಟವನ್ನು ಮುಂದುವರಿಸಿದ್ತು.
ಇದನ್ನೂ ಓದಿ : ಕೆಎಲ್ ರಾಹುಲ್ ಆರ್‌ಸಿಬಿ ಪರ ಆಡುವುದು ಫಿಕ್ಸ್ : ಇಲ್ಲಿದೆ RCB ಆಟಗಾರರ ಧಾರಣ ಪಟ್ಟಿ
50 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 10 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ ಬರೋಬ್ಬರಿ 102 ರನ್ ಬಾರಿಸುವ ಮೂಲಕ ತಂಡಕ್ಕೆ ನರವಾದ್ರು. ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಸಿಡಿಸಿದ ಮೊದಲ ಶತಕ ಆದರೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕವಾಗಿದೆ. ಈ ಹಿಂದೆ ಸಂಜು ಸ್ಯಾಮ್ಸನ್ ಬಾಂಗ್ಲಾ ದೇಶ ವಿರುದ್ದ ಶತಕ ಬಾರಿಸಿದ್ದರು.

ಇದುವರೆಗೆ ಒಟ್ಟು 34 ಟಿ20 ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್ 2 ಶತಕ ಹಾಗೂ 2 ಅರ್ಧ ಶತಕದ ನೆರವಿನಿಂದ 701 ರನ್ ಬಾರಿಸಿದ್ದಾರೆ. ಐಪಿಎಲ್ ನಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಇದುವರೆಗೆ ಸ್ಯಾಮ್ಸನ್ ಒಟ್ಟು 167 ಪಂದ್ಯಗಳನ್ನು ಆಡಿದ್ದು ಈ ಪೈಕಿ 3 ಶತಕ ಹಾಗೂ 25 ಅರ್ಧ ಶತಕದ ನೆರವಿನಿಂದ 4419 ರನ್ ಬಾರಿಸಿದ್ದಾರೆ.
Sanju samson century in ind vs SA 1st t20 match