ಮುಂಬೈ : ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL 2025) 2025 ಪಂದ್ಯಾವಳಿ ಬಹುತೇಕ ಅಂತಿಮ ಹಂತವನ್ನು ತಲುಪಿದೆ. ಇಂದು ಐಎಸ್‌ಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಮಾಝಿ ಮುಂಬೈ ವಿರುದ್ದ ಫಾಲ್ಕನ್ ರೈಸರ್ಸ್ ಹೈದ್ರಾಬಾದ್ (Majhi Mumbai vs Falcon Risers Hyderabad, Qualifier -1 ) ತಂಡ ಸೆಣೆಸಾಡಲಿದೆ. ಮುಂದಿನ ವರ್ಷದ ಐಎಸ್‌ಪಿಎಲ್‌ಗೆ ಮತ್ತೆರಡು ತಂಡಗಳು ಸೇರ್ಪಡೆ ಆಗಲಿವೆ.
ಐಎಸ್‌ಪಿಎಲ್ 2025ರ ಆವೃತ್ತಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಮಾಝಿ ಮುಂಬೈ ತಂಡ 10 ಪಂದ್ಯಗಳನ್ನು ಆಡಿದ್ದು, 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೇವಲ ಒಂದು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು ಒಟ್ಟು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಗ್ರಸ್ಥಾನಿಯಾಗಿಯೇ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಆಡುತ್ತಿದೆ.

ಫಾಲ್ಕನ್ ರೈಸರ್ಸ್ ಹೈದ್ರಾಬಾದ್ ತಂಡ 10 ಪಂದ್ಯಗಳನ್ನು ಆಡಿದ್ದು 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯ್ಲಿ ಎರಡನೇ ಸ್ಥಾನದಲ್ಲಿದೆ. ಇಂದು ಮೊದಲ ಕ್ವಾಲಿ ಫೈಯರ್ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಮುಂಬೈ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಶೇಷ ಚೇತನ ವಿದ್ಯಾರ್ಥಿ ಶಶಿಕಾಂತ ಹಿರೇಮಠ್
ಉಳಿದಂತೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೀನಗರ ಕೆ ವೀರ್ ತಂಡ ಬೆಂಗಳೂರು ಸ್ಟ್ರೈಕರ್ಸ್ ತಂಡವನ್ನು ಎದುರಿಸಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಗೆ ಎಂಟ್ರಿ ಕೊಟ್ರೆ, ಸೋತ ತಂಡ ಮತ್ತೊಂದು ಅವಕಾಶವನ್ನು ಪಡೆಯಲಿದೆ.
ISPL 2025 : ಐಎಸ್‌ಪಿಎಲ್ 2026ಕ್ಕೆ 2 ಹೊಸ ತಂಡಗಳ ಸೇರ್ಪಡೆ
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) 2025 ಜಿಯೋಸ್ಟಾರ್ ನೆಟ್‌ವರ್ಕ್ ತನ್ನ ಹೊಸ ಪ್ರಸಾರದ ಹಕ್ಕನ್ನು ಹೊಂದಿದ್ದು ಎರಡನೇ ಋತುವಿನಲ್ಲಿ ಪಂದ್ಯಾವಳಿಯನ್ನು ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಐಎಸ್‌ಪಿಎಲ್ ಲೀಗ್‌ನ ಮೊದಲ 11 ಪಂದ್ಯಗಳಿಗೆ (ಜನವರಿ 31 ರ ಹೊತ್ತಿಗೆ) 15 ಮಿಲಿಯನ್ ವೀಕ್ಷಕರನ್ನು ಹೊಂದಿದೆ. ಇದು ಲೈವ್ ಪಂದ್ಯಗಳಿಗಾಗಿ ಕಳೆದ ಸೀಸನ್‌ಗಿಂತ ಟಿವಿ ವ್ಯಾಪ್ತಿಯು 32% ರಷ್ಟು ಹೆಚ್ಚಾಗಿದೆ.

ಸೀಸನ್ 2 ರ ಮೊದಲ ಎರಡು ವಾರಗಳು ಥಾಣೆಯ ದಾದೋಜಿ ಕೊಂಡದೇವ್ ಕ್ರೀಡಾಂಗಣದಲ್ಲಿ ರೋಮಾಂಚನಕಾರಿ ಪಂದ್ಯಾವಳಿ ನಡೆಯುತ್ತಿದೆ. ಅದ್ರಲ್ಲೂ ಅಮಿತಾಬ್ ಬಚ್ಚನ್ ಒಡೆತನದ ಮಾಝಿ ಮುಂಬೈ ಸತತ ಎಂಟು ಗೆಲುವುಗಳನ್ನು ಕಂಡಿದೆ. ಪ್ರಸ್ತುತ ಆರು ತಂಡಗಳು ಐಎಸ್‌ಪಿಎಲ್ ಪಂದ್ಯಾವಳಿಯನ್ನು ಆಡುತ್ತಿದ್ದು, ಮುಂದಿನ ವರ್ಷದಿಂದ ಎಂಟು ತಂಡಗಳು ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಬಾರಿ ಚೆನ್ನೈ ಸಿಗಮ್ಸ್ ಹಾಗೂ ಟೈಗರ್ಸ್ ಆಫ್ ಕೋಲ್ಕತ್ತಾ ತಂಡಗಳು ಲೀಗ್‌ನಿಂದ ಹೊರ ಬಿದ್ದಿವೆ.
ಇದನ್ನೂ ಓದಿ : TPL 2025 : ಶುರುವಾಯ್ತು ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ -2025 : ಟಿಪಿಎಲ್ ಕಂಪ್ಲೀಟ್ ಡಿಟೇಲ್ಸ್
ISPL 2025 : Two new teams for ISPL 2026 edition: First qualifier match today