ಸೂಪರ್ ಸ್ಟಾರ್…ಈ ಹೆಸರು ಕೇಳಿದ್ರೆ ಸಾಕು ರಿಯಲ್ ಸ್ಟಾರ್ ಉಪೇಂದ್ರ ಅವರ ನೆನಪು ಬರುತ್ತೆ. ಉಪೇಂದ್ರ ಅವರನ್ನು ಅಭಿಮಾನಿಗಳು ಸೂಪರ್ ಸ್ಟಾರ್ ಅಂತಾನೇ ಕರೆಯುತ್ತಾರೆ. ಇತರ ನಟರನ್ನು ಈ ಹೆಸರಿನಿಂದ ಕರೆದಾಗಲೂ ಅಭಿಮಾನಿಗಳು ಕೆರಳಿ ಕೆಂಡಾವಾಗಿದ್ದಾರೆ. ಆದೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಹೆಸರಿನ ಸಿನಿಮಾವೊಂದು ರೆಡಿಯಾಗ್ತಿದೆ.
ಹೌದು, ಅಂದಹಾಗೆ ಸೂಪರ್ ಸ್ಟಾರ್ ಆಗಿ ಮಿಂಚೋದಕ್ಕೆ ಹೊರಟಿರೋದು ಬೇರಾರೂ ಅಲ್ಲ ರಿಯಲ್ ಸ್ಟಾರ್ ಉಪೇಂದ್ರ ಸೋದರನ ಪುತ್ರ ನಿರಂಜನ್ ಸುಧೀಂದ್ರ. ಸೂಪರ್ ಸ್ಟಾರ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗದೆ.

ಆನೆ ಪಳಗಿಸೋದಕ್ಕೆ ಅಂಕುಶ ಇರಬೇಕು, ಹುಲಿನಾ ಹೊಡೆಯೋಕೆ ಕುರಿನಾ ಕಡಿಬೇಕು. ದುನಿಯಾ ನಂದಾಗ್ಬೇಕಾದ್ರೆ ದಮ್ಮು- ದೌಲತ್ ಇವರೆರಡೂ ಇರಬೇಕು. ಸೋತವನು ಸ್ಮಶಾನಕ್ಕೆ ಹೋಗ್ತಾನೆ. ಗೆದ್ದವನು ಇತಿಹಾಸ ಸೃಷ್ಟಿಸುತ್ತಾನೆ. ರಾಕಿಂಗ್ ಸ್ಟಾರ್ ಯಶ್ ಧ್ವನಿಯಲ್ಲಿ ಮೂಡಿಬಂದಿರುವ ಟೀಸರ್ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಚಿತ್ರದ ಟೈಟಲ್ ರಿಲೀಸ್ ಮಾಡಿದ್ದರು. ನವನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ನಿರ್ದೇಶನದಲ್ಲಿ ಆರ್ ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಆರಂಭವಾಗುವ ಯೋಜನೆಯನ್ನು ಹಾಕಿಕೊಂಡಿದೆ ಚಿತ್ರತಂಡ. ಚಿತ್ರದ ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ.