ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಬಯಲಾದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್ ಜಾರಿ ಮಾಡುತ್ತಿದ್ದಂತೆಯೇ ಕನ್ನಡದ ಹೆಸರಾಂತ ನಟಿಯೋರ್ವರು ರಾಜ್ಯದಿಂದಲೇ ಪರಾರಿಯಾಗಿದ್ದಾರೆ.

ಡ್ರಗ್ಸ್ ದಂಧೆ ಇದೀಗ ಸ್ಯಾಂಡಲ್ ನಟ, ನಟಿಯರಿಗೆ ಶಾಕ್ ಕೊಟ್ಟಿದೆ. ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಭಾಗಿಯಾಗಿದ್ದಾರೆ ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿಯೆದ್ದಿದೆ. ಒಂದೆಡೆ ಎನ್ ಸಿಬಿ ಅಧಿಕಾರಿಗಳು ಡ್ರಗ್ಸ್ ಮಾಫಿಯಾದ ಜಾಡು ಹಿಡಿದಿದ್ರೆ, ಇತ್ತ ಸಿಸಿಬಿ ಅಧಿಕಾರಿಗಳು ಕೂಡ ಡ್ರಗ್ಸ್ ಮಾಫಿಯಾ ಬೇಧಿಸಲು ಪಣತೊಟ್ಟಿದ್ದಾರೆ.

ಸಿಸಿಬಿ ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ ಮಾದಕ ನಶೆಯಲ್ಲಿ ಮಿಂದೆದ್ದವರು ಅಲರ್ಟ್ ಆಗಿದ್ದಾರೆ. ಕಳೆದ 15 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ನಟಿಯೋರ್ವರು ರಾಜ್ಯದಿಂದಲೇ ಎಸ್ಕೇಪ್ ಆಗಿದ್ದಾರೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ, ಇತ್ತೀಚಿಗೆ ಸಿನಿಮಾ ಬೇಡಿಕೆ ಕಡಿಮೆಯಾಗುತ್ತಲೇ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಡ್ರಗ್ಸ್ ದಂಧೆಯಲ್ಲಿ ಇದೇ ನಟಿಯ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಮಾತ್ರವಲ್ಲ ಸಿಸಿಬಿ ಕೂಡ ನಟಿಗೆ ನೋಟಿಸ್ ನೀಡುತ್ತೆ ಅಂತಾ ಹೇಳಲಾಗಿತ್ತು. ಆದರೆ ಸಿಸಿಬಿ ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡುತ್ತಿದ್ದಂತೆಯೇ ಈ ನಟಿ ತನ್ನ ಮ್ಯಾನೇಜರ್ ಜೊತೆಗೆ ರಾಜ್ಯ ತೊರೆದಿದ್ದು, ಪೊಲೀಸರು ನಟಿಯ ಬೆನ್ನುಬಿದ್ದಿದ್ದಾರೆನ್ನಲಾಗುತ್ತಿದೆ.