ಫೋರ್ತ್‌ಫೋಕಸ್‌ ಗೆ “2025ರ ಗಮನಾರ್ಹ ಸಂಸ್ಥೆ” ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ

ಕುಂದಾಪುರ : ಕರ್ನಾಟಕ ಕರಾವಳಿಯ ಕುಂದಾಪುರದಲ್ಲಿ ಸ್ಥಾಪಿತವಾದ ಡಿಜಿಟಲ್ ಸೊಲ್ಯೂಶನ್ ಸಂಸ್ಥೆಯಾದ ಫೋರ್ತ್‌ಫೋಕಸ್‌ (ForthFocus ) ಅನ್ನು ಬಿಸಿನೆಸ್ ಔಟ್‌ಲೈನ್ ಆಯೋಜಿಸಿದ, ಬಿಸಿನೆಸ್ ಎಲೈಟ್ ಅವಾರ್ಡ್‌ 2025 ಕಾರ್ಯಕ್ರಮದಲ್ಲಿ “2025ರಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಭಾರತ ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದ್ರಲ್ಲೂ ಹೊಸ ತಂತ್ರಜ್ಞಾನ, ಮುಂದಿನ ತಲೆಮಾರಿಗೆ ಪ್ರೋತ್ಸಾಹವನ್ನು ನೀಡುವ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಸಾಧಕರನ್ನು ಗುರುತಿಸಲಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿನ ಸಾಧನೆಯ ಜೊತೆಗೆ, ನಾಯಕತ್ವ ಗುಣ, ಬೆಳವಣಿಗೆ, ಸಾಮರ್ಥ್ಯದ ಆಧಾರದಲ್ಲಿ ಪರಿಗಣಿಸಲಾಗುತ್ತದೆ.

ಇದೀಗ ಪೋರ್ತ್‌ ಪೋಕಸ್‌ ಸಂಸ್ಥೆಯು ಈ ವರ್ಷದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪೋರ್ತ್‌ ಪೋಕಸ್‌ ಸಂಸ್ಥೆಯ ಸ್ಥಿರ ಸೇವೆ, ದಕ್ಷತೆ ಮತ್ತು ವಿಶ್ವದಾದ್ಯಂತ ಗ್ರಾಹಕರ ಜೊತೆಗೆ ದೊಡ್ಡಮಟ್ಟದ ನೆಟ್‌ವರ್ಕ್‌ ಹೊಂದಿರುವುದನ್ನು ಗುರುತಿಸಿ ಗೌರವಿಸಲಾಗಿದೆ. 2015ರಲ್ಲಿ ಒಂದು ವ್ಯಕ್ತಿಯ ಫ್ರೀಲಾನ್ಸ್ ಪ್ರಾರಂಭವಾಗಿ ಬೆಳೆಯುತ್ತಿದ್ದ ಫೋರ್ತ್‌ಫೋಕಸ್‌, ಇಂದು 8+ ದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ. ಸಂಸ್ಥೆಯ ಪ್ರಮುಖ ಸೇವೆಗಳೆಂದರೆ:

FourthFocus honored with Notable Organization of 2025 award Business Outlines Business Elite Awards Kannada News
  • ವರ್ಡ್‌ಪ್ರೆಸ್ ವೆಬ್‌ಸೈಟ್ ಅಭಿವೃದ್ಧಿ, ಫಿಗ್ಮಾ-ಇಲಿಮೆಂಟರ್ ಪರಿವರ್ತನೆ ಸೇರಿದಂತೆ
  • ಇ-ಕಾಮರ್ಸ್ ಅಭಿವೃದ್ಧಿ ಮತ್ತು ಕಸ್ಟಮ್ ವೆಬ್ ಅಪ್ಲಿಕೇಶನ್ ಪರಿಹಾರಗಳು
  • SEO ಆಪ್ಟಿಮೈಸೇಶನ್, UI/UX ವಿನ್ಯಾಸ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ಒದಗಿಸುತ್ತಿದೆ
  • ಬ್ರಾಂಡಿಂಗ್ ಸೇವೆಗಳು, ಟ್ರೇಡ್‌ಮಾರ್ಕ್ ನೋಂದಣಿ ಮತ್ತು ಐಡೆಂಟಿಟಿ ವಿನ್ಯಾಸ
  • ಹೋಟೆಲ್ ತಂತ್ರಜ್ಞಾನ: ಬುಕ್ಕಿಂಗ್ ಎಂಜಿನ್, ಚಾನೆಲ್ ಮ್ಯಾನೇಜರ್ ಮತ್ತು ರೆವೆನ್ಯೂ ಮ್ಯಾನೇಜ್ಮೆಂಟ್ ಸಾಧನಗಳು

ಇದನ್ನೂ ಓದಿ : Post Office Recruitment 2025 : 10ನೇ ತರಗತಿ ಉತ್ತೀರ್ಣರಾದ್ರೆ ಅಂಚೆ ಇಲಾಖೆಯಲ್ಲಿ ಉದ್ಯೋಗ : 138 ಹುದ್ದೆ, 30 ಸಾವಿರ ವೇತನ

“Bridging Invention and Impact in the Digital Age” ಎಂಬ ಶೀರ್ಷಿಕೆಯಲ್ಲಿ ಪ್ರಕಟಿತ ಲೇಖನದಲ್ಲಿ ಫೋರ್ತ್‌ಫೋಕಸ್‌ ಸಂಸ್ಥೆಯ ಬೆಳವಣಿಗೆಗಥೆ, ಗ್ರಾಹಕಾಧಾರಿತ ಸೇವಾ ದೃಷ್ಟಿಕೋಣ ಮತ್ತು WordPress open-source ಸಮುದಾಯದಲ್ಲಿ ನೀಡುತ್ತಿರುವ ಕೊಡುಗೆಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ.

ಸೃಜನಾತ್ಮಕತೆಯ ಜೊತೆಗೆ ಅಭಿವೃದ್ದಿ ಹೊಂದಿದ ತಂತ್ರಜ್ಞಾನವನ್ನು ಸಮಯಕ್ಕೆ ತಕ್ಕಂತೆ ಬಳಸುವ ಮೂಲಕ ವ್ಯವಹಾರ ಅಭಿವೃದ್ದಿಗೆ ಸಾಕ್ಷಿಯಾಗಲು ನಾವು ಮುಂದಾಗಿದ್ದೇವೆ. ನಮ್ಮ ತಂಡದ ನಿರಂತರ ಶ್ರಮ ಮತ್ತು ದೃಢತೆಗಾಗಿ ಸಿಕ್ಕಿರುವ ಮಾನ್ಯತೆ ಎಂದು ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಹೇಳಿದರು.

ಇದನ್ನೂ ಓದಿ : PM-SYM Yojana: ಈ ಯೋಜನೆಯಡಿ ಪ್ರತೀ ತಿಂಗಳು 3000 ರೂ.. : ಪುರುಷರಿಗೂ ಸಿಗುತ್ತೆ ಹಣ

ಈ ಪ್ರಶಸ್ತಿ ಫೋರ್ತ್‌ಫೋಕಸ್‌ನನ್ನು ಭಾರತದ ಬೆಳೆದೋರುವ ಡಿಜಿಟಲ್ ನಾಯಕರ ಪೈಕಿ ಒಂದಾಗಿ ಸ್ಥಾಪಿಸುತ್ತಿದ್ದು, ವೆಬ್ ಡೆವಲಪ್ಮೆಂಟ್, ಬ್ರಾಂಡಿಂಗ್, ಮೊಬೈಲ್ ಅಪ್ಲಿಕೇಶನ್, ಇ-ಕಾಮರ್ಸ್ ಮತ್ತು ಹೋಟೆಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗ್ರಾಹಕನ್ವಯಿತ ಪರಿಹಾರಗಳನ್ನು ನೀಡುವ ಬದ್ಧತೆಯನ್ನೂ ದೃಢಪಡಿಸುತ್ತದೆ.

ಫೋರ್ತ್‌ಫೋಕಸ್‌ ಸಂಪರ್ಕ ವಿವರಗಳು:
Website: www.forthfocus.com
LinkedIn: https://in.linkedin.com/company/forthfocus

FourthFocus honored with “Notable Organization of 2025” award – Business Outline’s Business Elite Awards

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories