ಉಡುಪಿ : ಚೀನಾದಿಂದ ತಾಯ್ನಾಡಿಗೆ ಮರಳಿದ್ದ ನಾಲ್ವರನ್ನು ಸಂಶಯಾಸ್ಪದ ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಾಲ್ವರ ವೈದ್ಯಕೀಯ ವರದಿಯಲ್ಲಿ ಕೊರೊನಾ ವೈರಸ್ ಇಲ್ಲಾ ಅನ್ನೋದು ಬಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಬ್ರಹ್ಮಾವರದ ಸಮೀಪದ ದಂಪತಿ ಹಾಗೂ ಮಗು ಮತ್ತು ಕಾಪುವಿನ ನಿವಾಸಿ ಇತ್ತೀಚಿಗಷ್ಟೇ ಚೀನಾದಿಂದ ಹಿಂದಿರುಗಿದ್ದರು. ಆದರೆ ಈ ನಾಲ್ವರಿಗೂ ಶೀತ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವಿಶೇಷ ವಾರ್ಡ್ ನಲ್ಲಿ ನಾಲ್ವರಿಗೂ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ನಾಲ್ವರ ರಕ್ತದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿ ಕೊಡಲಾಗಿತ್ತು. ಶಂಕಿತ ಕೊರೊನಾ ಭೀತಿ ಉಡುಪಿಗರನ್ನು ಕಾಡಿತ್ತು. ಆದ್ರೀಗ ವೈದ್ಯಕೀಯ ವರದಿಯಲ್ಲಿ ಕೊರೊನಾ ವೈರಸ್ ಅಂಶ ಇಲ್ಲಾ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲಾ ಎಂದು ಅವರು ಹೇಳಿದ್ದಾರೆ.
ಸಂಶಯಾಸ್ಪದ ಕೊರೊನಾ : ಉಡುಪಿಯ ನಾಲ್ವರ ರಿಪೋರ್ಟ್ ನೆಗೆಟಿವ್
- Advertisement -
RELATED ARTICLES