ಚೊಚ್ಚಲ ವಿಶ್ವಕಪ್ ಗೆದ್ದ ಬಾಂಗ್ಲಾ : ಭಾರತದ ಗೆಲುವಿಗೆ ತಣ್ಣೀರೆರಚಿದ ಮಳೆ, ವ್ಯರ್ಥವಾಯ್ತು ಜೈಸ್ವಾಲ್ – ಬಿಶ್ನೋಯಿ ಹೋರಾಟ

0

ಪೊಚೆಫ್ ಸ್ಟ್ರೊಮ್ : ಕ್ರಿಕೆಟ್ ಶಿಶುಗಳೆನಿಸಿಕೊಂಡಿರೊ ಬಾಂಗ್ಲಾದೇಶ ಚೊಚ್ಚಲ ಬಾರಿಗೆ 19 ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ. ಭಾರತ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ. ಈ ಮೂಲಕ 5ನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಭಾರತದ ಆಸೆ ನುಚ್ಚುನೂರಾಗಿದೆ.


ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂನ್ಶ್ ಸಕ್ಸೇನಾ ಉತ್ತಮ ಆರಂಭವೊದಗಿಸೋದಕ್ಕೆ ಮುಂದಾದ್ರು. ಆರಂಭದಿಂದಲೇ ಜೈಸ್ವಾಲ್ ಅಬ್ಬರದ ಹೊಡೆತಗಳಿಗೆ ಮನ ಮಾಡಿದ್ರು. ಆದರೆ ಭಾರತಕ್ಕೆ ಅವೇಸ್ಕಾ ದಾಸ್ ಆರಂಭಿಕ ಆಘಾತ ನೀಡಿದ್ರು. 2 ರನ್ ಗಳಿಸಿದ್ದ ದಿವ್ಯಾನ್ಶ್ ಸಕ್ಸೇನಾ ಅವರ ವಿಕೆಟ್ ಕಬಳಿಸಿದ್ರು.

ನಂತರ ಜೈಸ್ವಾಲ್ ಗೆ ಜೊತೆಯಾದ ತಿಲಕ್ ವರ್ಮಾ ಉತ್ತಮ ಆಟ ಪ್ರದರ್ಶಿಸಿದ್ರು. ತಿಲಕ್ ವರ್ಮಾ 38 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಕ್ರೀಸ್ ಗೆ ಆಗಮಿಸಿದ ನಾಯಕ ಪ್ರಿಯಂ ಗಾರ್ಗ್ ಕೇವಲ 7 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಧ್ರುವ ಜುರೆಲ್ ಒಂದಿಷ್ಟು ಹೊತ್ತು ಉತ್ತಮ ಆಟ ಪ್ರದರ್ಶಿಸಿದ್ರು ಕೂಡ ಅವರ ಆಟ ಕೇವಲ 22 ರನ್ ಗಳಿಗೆ ಕೊನೆಯಾಯ್ತು. ಒಂದೆಡೆ ವಿಕೆಟ್ ಒಪ್ಪಿಸುತ್ತಿದ್ರು ಕೂಡ ಇನ್ನೊಂದೆಡೆ ಕ್ರೀಸ್ ಗೆ ಅಂಟಿಕೊಂಡು ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 121 ಎಸೆತಗಳನ್ನು ಎದುರಿಸಿ ಸೊಗಸಾದ ಅರ್ಧ ಶತಕದ ಮೂಲಕ 88 ರನ್ ಗಳಿಸಿದ್ರು.

ಭಾರತ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಆರಂಭಿಕರಾದ ಪರ್ವಿಜ್ ಹುಸೇನ್ ಇಮೊನ್ ಹಾಗೂ ತನ್ಜಿದ್ ಹಸ್ ಉತ್ತಮ ಆರಂಭವೊದಗಿಸಿದ್ರು. ಆದರೆ ರವಿ ಬಿಶ್ನೋಯಿ ಬಾಂಗ್ಲಾ ತಂಡಕ್ಕೆ ಆರಂಭಿಕ ಆಘಾತವನ್ನು ನೀಡಿದ್ರು. 17 ರನ್ ಗಳಿಸಿ ಆಡುತ್ತಿದ್ದ ತನ್ಜಿದ್ ಹಸನ್ ಬಲಿ ಪಡೆದ ಬಿಶ್ನೋಯಿ ನಂತರ ಬಾಂಗ್ಲಾ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ನಂತರ ಬ್ಯಾಟಿಂಗ್ ಗೆ ಇಳಿದ ಮಹಮ್ಮದುಲ್ಲಾ ಹಸನ್ ಜೊಯ್ 8, ತೌಹಿದ್ ಹಿರ್ದೊಯಿ 0 ಹಾಗೂ ಶಹದತ್ ಹುಸೇನ್ 1 ರನ್ ಗಳಿಸಿದಾಗಲೇ ಬಿಶ್ನೋಯಿ ಮೂವರಿಗೂ ಪೆವಿಲಿಯನ್ ಹಾದಿ ತೋರಿಸಿದ್ದಾರೆ.

ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ನಾಯಕ ಅಕ್ಬರ್ ಅಲಿ ನೆರವಾದ್ರು ಆರಂಭಿಕ ಪರ್ವೇಜ್ ಹುಸೇನ್ ಇಮೊನ್ ಜೊತೆ ಉತ್ತಮ ಜೊತೆಯಾಟ ನಡೆಸಿದ್ರು. ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಪರ್ವೇಜ್ ಹುಸೇನ್ ಇಮೊನ್ ಗೆ ಯಶಸ್ವಿ ಜೈಸ್ವಾಲ್ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬೌಲಿಂಗ್ ಗೆ ಇಳಿದ ಸುಶಾಂತ್ ಮಿಶ್ರಾ ಸತತ ಹುದ್ದರಿಗಳನ್ನು ಪಡೆಯೋ ಮೂಲಕ ಬಾಂಗ್ಲಾ ತಂಡವನ್ನು ಸಂಕಷ್ಟಟಕ್ಕೆ ಸಿಲುಕಿಸಿದ್ರು.

ಆದರೆ ನಾಯಕ ಅಕ್ಬರ್ ಅಲಿ ತಾಳ್ಮೆಯ ಆಟವನ್ನು ಮುಂದುವರಿಸಿದ್ರು. ಪಂದ್ಯ ರೋಚಕ ಘಟ್ಟದಲ್ಲಿದ್ದಾಗಲೇ ಸುರಿದ ಮಳೆಯಿಂದಾಗಿ ಅರ್ಧಕ್ಕೆ ಆಟವನ್ನು ನಿಲ್ಲಿಸಲಾಯಿತು. ಆದರೆ ಲೂವಿಸ್ ಡಕ್ ವೆರ್ಥ್ ನಿಯಮದ ಪ್ರಕಾರ ಬಾಂಗ್ಲಾ ತಂಡಕ್ಕೆ ಕೇವಲ 6 ರನ್ ಗಳಿಸೋ ಅವಕಾಶವನ್ನು ನೀಡಲಾಯಿತು. ಈ ಮೂಲಕ ಭಾರತದ ಕನಸು ಕಮರಿ ಹೋಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿ ರಕೀಬ್ ಉಲ್ ಹಸನ್ ಬೌಂಡರಿ ಬಾರಿಸೋ ಮೂಲಕ ಗೆಲುವನ್ನು ಖಾತ್ರಿ ಪಡಿಸಿದ್ರು. ಅಂತಿಮವಾಗಿ ಬಾಂಗ್ಲಾ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸೋ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದೆ.

ಸಂಕ್ಷಿಪ್ತ ಸ್ಕೋರ್ :
ಭಾರತ : ಯಶಸ್ವಿ ಜೈಸ್ವಾಲ್ 88 (121), ತಿಲಕ್ ವರ್ಮಾ 38 (65), ದ್ರುವ ಜುರೆಲ್ 22(38), ಅವೇಶ್ಕಾ ದಾಸ್ 40/3, ತನ್ಝಿಮ್ ಹಸನ್ ಶಕೀಬ್ 28/2, ಶೋರಿಫುಲ್ ಇಸ್ಲಾಂ 31/2
ಬಾಂಗ್ಲಾದೇಶ : ಪರ್ವೀಜ್ ಹುಸೇನ್ ಇಮೊನ್ 47 (69), ತನ್ಜಿದ್ ಹಸನ್ 17 (25), ಅಕ್ಬರ್ ಅಲಿ ಔಟಾಗದೆ 43 (77), ರಕೀಬ್ ವುಲ್ ಹಸನ್ ಔಟಾಗದೆ 9 (25), ರವಿ ಬಿಶ್ನೋಹಿ 25/4, ಸುಶಾಂತ್ ಮಿಶ್ರಾ 19/2, ಯಶಸ್ವಿ ಜೈಸ್ವಾಲ್ 10/1

Leave A Reply

Your email address will not be published.