ಮೇಷರಾಶಿ
ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಅನಿರೀಕ್ಷಿತ ವಾರ್ತೆಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ಇರಲಿದೆ. ಆಪ್ತ ಮಿತ್ರರ ಜತೆ ಭೋಜನ ಸವಿಯಲಿದ್ದೀರಿ. ಸಿದ್ದ ಉಡುಪುಗಳ ವ್ಯಾಪಾರದಿಂದ ಅಧಿಕ ಲಾಭ.
ವೃಷಭರಾಶಿ
ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಸಾಕಷ್ಟು ತಿರುಗಾಟಗಳನ್ನು ನಡೆಸಿದರೂ ಕೆಲಸ ಮುಂದುವರಿಸಲಾಗದು. ಅನುಭವವೇ ಮುಖ್ಯ ಬಂಡವಾಳವಾಗಲಿ. ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು, ನಗದು ವ್ಯಾಪಾರಗಳಲ್ಲಿ ಎಚ್ಚರ.

ಮಿಥುನರಾಶಿ
ಕಾರ್ಯಕ್ರಮದ ನೆಪದಲ್ಲಿ ಅಪರೂಪದ ಬಂಧುಗಳ ಭೇಟಿ ಮಾಡುವಿರಿ. ಆರೋಗ್ಯದ ಬಗೆಗೂ ಸ್ವಲ್ಪ ಕಾಳಜಿ ವಹಿಸಿ. ಮಗಳಿಂದ ಶುಭ ಸುದ್ದಿ ಕೇಳುವಿರಿ, ಆದಾಯಕ್ಕೆ ತಕ್ಕ ಖರ್ಚು, ಮನಶಾಂತಿ, ಉದ್ಯೋಗದಲ್ಲಿ ಬಡ್ತಿ.
ಕಟಕರಾಶಿ
ನಿವೇಶನ ಮನೆ ಖರೀದಿ ಸಂಭವ, ಸಂಗಾತಿಯ ಬಳಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಂಕು ಆವರಿಸಿದವರ ಹಾಗೆ ಇರದೆ ಜಾಣ್ಮೆಯಿಂದ ವರ್ತಿಸಿ. ದೈವಾನುಗ್ರಹ ಹೆಚ್ಚಿಸಿ ಕೊಳ್ಳುವಿರಿ, ಚೋರ ಭಯ, ಸಂಬಂಧಿಗಳಿಂದ ದೂರವಿರಿ.

ಸಿಂಹರಾಶಿ
ನಿಮ್ಮ ಕಲ್ಪನಾಶಕ್ತಿಯ ವ್ಯಾಪ್ತಿ ವಿಸ್ತಾರವಾದುದು. ಗ್ರಹಗಳಿಂದಲೂ ಅನುಕೂಲ ವಾತಾವರಣವಿದೆ. ಕವಿಗಳಿಗೆ ಮನ್ನಣೆ ಲಭಿಸುವುದು. ಆರೋಗ್ಯದಲ್ಲಿ ಏರುಪೇರು, ಕೃಷಿ ಉಪಕರಣಗಳ ಖರೀದಿ, ಅಧಿಕ ತಿರುಗಾಟ, ಶತ್ರು ಕಾಟ, ವಾದ ವಿವಾದಗಳಿಂದ ಕಲಹ.
ಕನ್ಯಾರಾಶಿ
ಧಾನ್ಯ ವ್ಯಾಪಾರಿಗಳಿಗೆ ಲಾಭ, ತೀರ ಒಂಟಿಯಾಗಿಯೇ ಹೋರಾಡುತ್ತಿರಬೇಡಿ. ಹಿರಿಯರೊಬ್ಬರು ನಿಮಗೆ ಜಂಜಡಗಳಿಂದ ಹೊರಬರಲು ನೆರವಾಗುವರು. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಚಂಚಲ ಮನಸ್ಸು, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ.

ತುಲಾರಾಶಿ
ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಮನಕ್ಲೇಷ, ಆಪ್ತರೊಂದಿಗೆ ಮಾತುಕತೆ.
ವೃಶ್ಚಿಕರಾಶಿ
ಉದ್ಯೋಗದಲ್ಲಿ ತೊಂದರೆ, ಖರ್ಚಿನ ದಾರಿಯೇ ಎದುರಾಗಲಿದೆ. ಆದರೆ ಇದು ಕೂಡಿಡುವ ಸಂದರ್ಭವಾಗಿದೆ. ಹೀಗಾಗಿ ದುಂದುವೆಚ್ಚವನ್ನು ನಿಲ್ಲಿಸಿಬಿಡಿ. ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಒಳ್ಳೆಯತನ ದುರುಪಯೋಗ ಆಗಬಾರದು.

ಧನಸ್ಸುರಾಶಿ
ಸಾಲ ಮರುಪಾವತಿ, ಸ್ಥಳ ಬದಲಾವಣೆ, ಗೃಹ ನಿರ್ಮಾಣದ ಕನಸಿಗೆ ಗರಿ ಮೂಡಬಹುದು. ಆದರೆ ಸಾಲ ಮಾಡದೆಯೇ ಮುಂದುವರಿಯಲು ನಿರ್ಧಾರ ಮಾಡಿದರೆ ಉತ್ತಮ. ಯಂತ್ರೋಪಕರಣಗಳ ಮಾರಾಟದಿಂದ ಲಾಭ, ಸ್ವಂತ ಉದ್ಯಮಿಗಳಿಗೆ ಲಾಭ.
ಮಕರರಾಶಿ
ಕುಟುಂಬದ ವಿಷಯಗಳು ಇತ್ಯರ್ಥವಾಗಲಿದೆ, ಅನೇಕ ಕಡೆ ಸುಲಭದ ಗೆಲುವು ದೊರೆತರೂ ನಿಮ್ಮ ಮನದಲ್ಲಿ ಉದ್ವೇಗವೇ ಇದೆ. ಸಂಬಂಧಿಗಳ ಜತೆಗೆ ಅತಿಯಾದ ಸಲುಗೆ ಬೇಡ. ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಭಾಂದವ್ಯ.

ಕುಂಭರಾಶಿ
ಸಾಮಾಜಿಕ ತಾಣದ ಗೆಳೆಯರನ್ನೆಲ್ಲ ನಂಬದಿರಿ. ಆದಷ್ಟು ಹಸನ್ಮುಖಿಗಳಾಗಿರಿ. ಅದರಿಂದಲೇ ಲಾಭಕ್ಕೆ ಹೆಚ್ಚಿನ ಅವಕಾಶವಿದೆ. ಕೋರ್ಟು ಕೇಸ್ಗಳು ವಿಳಂಬ, ಆರೋಗ್ಯದಲ್ಲಿ ಚೇತರಿಕೆ, ಅನಿರೀಕ್ಷಿತ ಖರ್ಚು, ಬಂಧುಮಿತ್ರರ ಭೇಟಿ.
ಮೀನರಾಶಿ
ಆಭರಣ ಖರೀದಿ, ಗಣ್ಯ ವ್ಯಕ್ತಿಗಳ ಭೇಟಿ, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಕಾರ್ಮಿಕ ವರ್ಗದಿಂದ ಸಹಾಯ, ಆತ್ಮೀಯರು ಎನಿಸಿದವರಿಂದಲೇ ನಿಷ್ಠುರ ಮಾತು ಎದುರಾಗಲಿದೆ. ಹೆದರದಿರಿ. ಮೌನವಾಗಿದ್ದರೆ ಮುಂದೆ ನೆಮ್ಮದಿಯಿಂದಿರುವಿರಿ.