ಗುಣಮುಖರಾದವರಲ್ಲೇ ಮತ್ತೆ ಕಾಣಿಸಿಕೊಳ್ಳುತ್ತಿದೆ ಕೊರೊನಾ : ಕೇಂದ್ರ ಸಚಿವರು ಹೇಳಿದ್ದೇನು ಗೊತ್ತಾ ?

0

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿರುವ ಬೆನ್ನಲ್ಲೇ ಇದೀಗ ಎರಡನೇ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಮತ್ತೆ ಸೋಂಕು ದೃಢಪಡುತ್ತಿದೆ.

ಅದ್ರಲ್ಲೂ ಕರೊನಾ ಸೋಂಕಿನ ಎರಡನೇ ಅಲೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದು, ಇದೀಗ ಆ ಕುರಿತ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶೇಷವೆಂದರೆ, ಆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರೇ ಪ್ರತಿಕ್ರಿಯಿಸಿದ್ದಾರೆ.

ಸೋಂಕಿನಿಂದ ಒಮ್ಮೆ ಗುಣವಾದವರು ಮತ್ತೆ ಸೋಂಕು ತಗುಲುವ ಭಯದಿಂದ ಮುಕ್ತರಲ್ಲ. ಭಾರತ ಮಾತ್ರವಲ್ಲದೆ ಜಗತ್ತಿನ ಇತರ ಭಾಗಗಳಲ್ಲೂ ಒಮ್ಮೆ ಸೋಂಕುಮುಕ್ತರಾದವರೂ ಮತ್ತೆ ಸೋಂಕಿಗೆ ಒಳಗಾದ ಪ್ರಕರಣಗಳು ವರದಿಯಾಗಿವೆ.

ಅದಾಗ್ಯೂ ಅಂಥ ಪ್ರಕರಣಗಳು ನಗಣ್ಯ ಎಂಬ ಪ್ರಮಾಣದಲ್ಲಿ ಇರುವುದರಿಂದ ಆ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಕೋವಿಡ್​ ರೋಗಿಯ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಗುತ್ತಿದೆ. ಪುನಃ ಸೋಂಕು ತಗುಲುವ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಂಥ ರಿಸ್ಕ್​ಗಳು ಕಡಿಮೆ ಇವೆ ಎಂದು ಸಚಿವರು ಹೇಳಿದ್ದಾರೆ.

Leave A Reply

Your email address will not be published.