ಮುಂಬೈ: ಸಾನಿಯಾ ಮಿರ್ಜಾ. ಭಾರತೀಯ ಟೆನ್ನಿಸ್ ಲೋಕ ಕಂಡ ಅದ್ಬುತ ಪ್ರತಿಬೆ. ಟೆನ್ನಿಸ್ ಮೂಲಕ ದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಆಟಗಾರ್ತಿ. ಆದ್ರೆ ಕಳೆದೆರಡು ವರ್ಷಗಳಿಂದಲೂ ಟೆನ್ನಿಸ್ ಲೋಕದಿಂದ ದೂರ ಉಳಿದಿದ್ದ ಸಾನಿಯಾ ಇದೀಗ ಫಿಟ್ ಆಂಡ್ ಫೈನ್ ಆಗಿ ಮತ್ತೆ ಫೀಲ್ಡ್ ಗೆ ಇಳಿದಿದ್ದಾರೆ.

4 ತಿಂಗಳಲ್ಲಿ ಬರೋಬ್ಬರಿ 26 ಕೆ.ಜಿ. ದೇಹತೂಕವನ್ನು ಇಳಿಸಿಕೊಂಡಿರೋ ಸಾನಿಯಾ ತೂಕ ಇಳಿಸಿಕೊಂಡಿರೋ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ಅಮ್ಮನಾಗುವ ಸೂಚನೆ ಸಿಗುತ್ತಿದ್ದಂತೆಯೇ ಸಾನಿಯಾ ಟೆನ್ನಿಸ್ ಅಂಗಳದಿಂದ ದೂರ ಉಳಿದಿದ್ದರು. ಮಗುವಿನ ಜನನ, ಪಾಲನೆಯಿಂದಾಗಿ ಸುಮಾರು 2 ವರ್ಷಗಳ ಕಾಲ ಟೆನ್ನಿಸ್ ಆಟವನ್ನೇ ಆಡಿರಲಿಲ್ಲ. ಹೀಗಾಗಿ ಸಾಕಷ್ಟು ದಪ್ಪಗಾಗಿದ್ರು.

ಆದ್ರೆ ಜನವರಿ ತಿಂಗಳಲ್ಲಿ ಫೀಲ್ಡ್ ಗೆ ಇಳಿದಿದ್ದ ಸಾನಿಯಾ ಫಿಟ್ ಆಂಡ್ ಫೈನ್ ಆಗಿದ್ದರು. ಜಿಮ್ ನಲ್ಲಿ ಸಾಕಷ್ಟು ವರ್ಕೌಟ್ ಮಾಡಿರೊ ಸಾನಿಯಾ 89 ಕೆ.ಜಿ. ಇಂದ 63 ಕೆ.ಜಿಗೆ ತನ್ನ ದೇಹವನ್ನು ಇಳಿಸಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದು. ತಮ್ಮ ಹಳೆಯ ಫೋಟೊದ ಜೊತೆಗೆ ಈಗಿನ ಹೊಸ ಫೋಟೋವನ್ನು ಕೊಲ್ಯಾಜ್ ಮಾಡಿ ಸಂತಸ ಪಟ್ಟಿದ್ದಾರೆ.

ಜನವರಿಯಲ್ಲಿ ನಡೆದ ಹೋಬಾರ್ಟ್ ಡಬ್ಲ್ಯೂಟಿಎ ಅಂತರಾಷ್ಟ್ರೀಯ ಕೂಟದ ಡಬಲ್ಸ್ನಲ್ಲಿ ಸಾನಿಯಾ ಗೆದ್ದು ಬೀಗಿದ್ದರು. ಎರಡು ವರ್ಷದ ಬ್ರೇಕ್ ಪಡೆದು ಬಂದ ಮೊದಲ ಪಂದ್ಯದಲ್ಲಿ ನಾದಿಯಾ ಕಿಚೆನಾಕ್ ಅವರೊಂದಿಗೆ ಜತೆಯಾಟವಾಡಿ ಗೆಲುವಿನ ನಗೆ ಬೀರಿದ್ದರು.