ಶಬರಿಮಲೆ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ಮತ್ತೆ ತೆರೆಯಲಿದೆ. ಆದರೆ ಶಬರಿಮಲೆಯಾತ್ರೆಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದ್ದು, ನಿತ್ಯ ಕೇವಲ 1 ಸಾವಿರ ಜನರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲು ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ.

ಶಬರಿಮಲೆಯ ದೇವಸ್ಥಾನಕ್ಕೆ ವರ್ಷಂಪ್ರತಿ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ಭಕ್ತರಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಆದ್ರೀಗ ಕೇರಳ ಸರಕಾರ ಶಬರಿಮಲೆ ದೇಗುವವನ್ನು ತೆರೆಯಲು ಮುಂದಾಗಿದ್ದು, ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ನೇಮಿಸಿದೆ. ಇದೀಗ ತಜ್ಞರ ಸಮಿತಿಯ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಕೆಯನ್ನು ಮಾಡಿದೆ.

ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುವ ಭಕ್ತರು ಕೋವಿಡ್ ಜಾಗೃತಾ ಪೋರ್ಟಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬೇಕು. 48 ತಾಸುಗಳ ಮೊದಲು ಕೊರೊನಾ ನೆಗೆಟಿವ್ ತಪಾಸಣಾ ವರದಿಯನ್ನು ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. ಅಲ್ಲದೇ ಅಗತ್ಯ ದಾಖಲೆಗಳನ್ನು ನೀಲಕಲ್ ನ ಎಂಟ್ರಿ ಪಾಯಿಂಟ್ ಗೆ ಆಗಮಿಸುವವರನ್ನು ಆಂಟಿಜೆಟ್ ಟೆಸ್ಟ್ ಗೆ ಒಳಪಡಿಸಬೇಕು. ಇನ್ನು 60 ವರ್ಷ ಮೇಲ್ಪಟ್ಟ ಭಕ್ತರು ಗಂಭೀರ ಕಾಯಿಲೆ ಇಲ್ಲ ಎಂಬುವುದನ್ನು ಸಾಬೀತು ಪಡಿಸುವ ವೈದ್ಯರ ವರದಿಯನ್ನು ತರುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ.

ಕಡ್ಡಾಯವಾಗಿ ಭಕ್ತರು ಕೊರೊನಾ ನೆಗೆಟಿವ್ ವರದಿಯನ್ನು ಹೊಂದಿರುವವರಿಗೆ ಮಾತ್ರವೇ ಪ್ರವೇಶಾವಕಾಶವನ್ನು ನೀಡಲಾಗುತ್ತದೆ.ಆದರೆ ತಪಾಸಣಾ ವೆಚ್ಚವನ್ನು ಭಕ್ತರೇ ವಹಿಸಬೇಕು. ತಜ್ಞರ ವರದಿ ಈಗಾಗಲೇ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಸರಕಾರ ಈ ಕುರಿತು ಮಾರ್ಗಸೂಚಿಯನ್ನು ಹೊರಡಿಸುವ ಸಾಧ್ಯತೆಯಿದೆ.