ಇನ್ಮುಂದೆ ಕೊರೊನಾ ಟೆಸ್ಟ್ ಕಡ್ಡಾಯ : ನಿರಾಕರಿಸಿದ್ರೆ ಜೈಲು ಶಿಕ್ಷೆ ಫಿಕ್ಸ್ !

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು. ಮೊನ್ನೆ ಮೊನ್ನೆಯಷ್ಟೇ ಮಾಸ್ಕ್ ಧರಿಸದವರ ವಿರುದ್ದ ಭಾರಿ ದಂಡ ವಿಧಿಸಿದ್ದ ರಾಜ್ಯ ಸರಕಾರ ಇದೀಗ ಕೊರೊನಾ ಟೆಸ್ಟ್ ವಿಚಾರದಲ್ಲಿಯೂ ಟಪ್ ರೂಲ್ಸ್ ಜಾರಿ ಮಾಡಿದೆ. ಕೊರೊನಾ ಟೆಸ್ಟ್ ಮಾಡಿಸದೇ ವಂಚಿಸುವವರು ಇನ್ಮುಂದೆ ಜೈಲು ಪಾಲಾಗೋದು ಗ್ಯಾರಂಟಿ.

ಕೊರೊನಾ ವಿಚಾರದಲ್ಲಿ ಮೈ ಮರೆತಿದ್ದ ರಾಜ್ಯ ಸರಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಜನರ ನಿರ್ಲಕ್ಷ್ಯದಿಂದಾಗಿಯೇ ರಾಜ್ಯದಲ್ಲಿ ಕಳೆದ ಮೂರು ವಾರಗಳಿಂದೀಚೆಗೆ ಶೇ.39ರಷ್ಟು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿತ್ತು. ಇದೇ ಕಾರಣದಿಂದಾಗಿ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೆ ತಂದಿದೆ.

ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಲೇ ಬೇಕು. ಮಾತ್ರವಲ್ಲ ಸೋಂಕಿತರ ಜೊತೆಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಜೊತೆಗೆ ಸಂಪರ್ಕ ಹೊಂದಿದವರು ಕೂಡ ಕೊರೊನಾ ಟೆಸ್ಟ್ ಮಾಡಿಸಬೇಕು.

ಕಂಟೈನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ ನಲ್ಲಿ ವಾಸಿಸುತ್ತಿರುವವರು ಹಾಗೂ ಆರೋಗ್ಯ ಸಿಬ್ಬಂಧಿ ಗುರುತಿಸುವ ಯಾವುದೇ ವ್ಯಕ್ತಿಯೂ ಕೂಡ ಕಡ್ಡಾಯವಾಗಿ ಕೊರೊನಾ ತಪಾಸಣೆಯನ್ನು ಮಾಡಿಸಲೇ ಬೇಕಾಗಿದೆ.

ಮಾಸ್ಕ್ ಬಳಕೆ ಮಾಡದವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಿರುವ ರಾಜ್ಯ ಸರಕಾರ ಇದೀಗ ಕೊರೊನಾ ಟೆಸ್ಟ್ ಮಾಡಿಸದವ ರಿಗೂ ಕೂಡ ಚಾಟಿ ಬೀಸಿದೆ. ಇನ್ಮುಂದೆ ಯಾವುದೇ ಕಾರಣ್ಕಕೂ ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ನಿರಾಕರಿಸುವಂತಿಲ್ಲ ಎಂದಿರುವ ರಾಜ್ಯ ಸರಕಾರ ಪ್ರವಾಸಿ ತಾಣಗಳ ಮೇಲೆಯೂ ಕಣ್ಣಿಟ್ಟಿದೆ.

ಕೊರೊನಾ ಲಾಕ್ ಡೌನ್ ಸಡಿಲವಾಗುತ್ತಿದ್ದಂತೆಯೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದೇ ಕಾರಣದಿಂದಾಗಿಯೇ ಪ್ರವಾಸಿ ತಾಆಣಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಪ್ರವಾಸಿಗರ ಗಂಟಲು ದ್ರವದ ಸಂಗ್ರಹಕ್ಕೆ ಸೂಚನೆಯನ್ನು ನೀಡಲಾಗಿದ್ದು, ಹೋಮ್ ಸ್ಟೇ ಹಾಗೂ ಹೋಟೆಲ್ ಗಳಲ್ಲಿ ಇನ್ಮುಂದೆ ಉಳಿದುಕೊಳ್ಳಲು ಕೊರೊನಾ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸ ಲಾಗಿದೆ.

ಕೊರೊನಾ ಟೆಸ್ಟ್ ಮಾಡಿಸದವರಿಗೆ 3,000 ದಂಡವನ್ನು ವಿಧಿಸಲಾಗುತ್ತದೆ. ದಂಡ ಹಾಕಿದ ನಂತರವೂ ಟೆಸ್ಟ್ ಮಾಡಿಸದೇ ಇದ್ರೆ 50,000 ರೂಪಾಯಿ ದಂಡ ಹಾಕಲು ಅವಕಾಶ ಕಲ್ಪಿಸಿದೆ. ಮಾತ್ರವಲ್ಲ 6 ತಿಂಗಳಿನಿಂದ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ. ರಾಜ್ಯ ಸರಕಾರ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದಂಡ ವಿಧಿಸಲು ಅಧಿಕಾರವನ್ನು ನೀಡಲಾಗಿದೆ. ಇನ್ನು ಹಬ್ಬಗಳ ಮೇಲೆಯೂ ರಾಜ್ಯ ಸರಕಾರ ಕಣ್ಣಿಟ್ಟಿದ್ದು, ಪ್ರತ್ಯೇಕ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

Leave A Reply

Your email address will not be published.